ಐಪಿಎಲ್ ಅಬ್ಬರ – ಸನ್ ರೈಸರ್ಸ್‌ಗಿಂದು ರಾಯಲ್ಸ್ ಸವಾಲು

Public TV
2 Min Read
ipl

ಮುಂಬೈ: ಟಾಟಾ ಐಪಿಎಲ್-2022 ಟೂರ್ನಿಯ 15ನೇ ಆವೃತ್ತಿಯ ಪಂದ್ಯದಲ್ಲಿ ಬಲಿಷ್ಠ ಸನ್‌ ರೈಸರ್ಸ್‌ ಹೈದ್ರಾಬಾದ್ (SRH) ಹಾಗೂ ರಾಜಾಸ್ಥಾನ್ ರಾಯಲ್ಸ್ (RR) ತಂಡಗಳಿಂದು ಸೆಣಸಲಿವೆ.

ಪುಣೆಯ ಮಹಾರಾಷ್ಟ್ರದ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದ್ದು, ಉಭಯ ತಂಡಗಳು ಉತ್ತಮ ಪ್ರದರ್ಶನ ನೀಡಿ ಶುಭಾರಂಭ ಮಾಡುವ ಮೂಲಕ ಗೆಲುವಿನ ಅಭಿಯಾನಕ್ಕೆ ಸಜ್ಜಾಗಿವೆ. ಇವೆರಡೂ ತಂಡಗಳು ಈ ಹಿಂದೆ ಐಪಿಎಲ್ ಚಾಂಪಿಯನ್ ಪಟ್ಟ ಧರಿಸಿವೆ ಎಂಬುದು ವಿಶೇಷ. ಇದನ್ನೂ ಓದಿ: ಲಕ್ನೋಗೆ ಲಾಕ್ ಹಾಕಿದ ಟೈಟಾನ್ಸ್ – ಗುಜರಾತ್‍ಗೆ 5 ವಿಕೆಟ್‍ಗಳ ಜಯ

IPL

ತೀವ್ರ ಪೈಪೋಟಿ
ಈವರೆಗೆ ಉಭಯ ತಂಡಗಳು ಒಟ್ಟು 15 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಹೈದ್ರಾಬಾದ್ ತಂಡವು 8 ಪಂದ್ಯಗಳಲ್ಲಿ ಹಾಗೂ ರಾಜಾಸ್ಥಾನ್ ರಾಯಲ್ಸ್ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ರಾಜಸ್ಥಾನ ತಂಡವು 2008ರ ಐಪಿಎಲ್ ಅವೃತ್ತಿಯಲ್ಲಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿತ್ತು. ಹೈದ್ರಾಬಾದ್ ತಂಡವು 2016ರಲ್ಲಿ ಚಾಂಪಿಯನ್ ಪಟ್ಟ ಕಿರೀಟ ಗೆದ್ದು, 2018ರಲ್ಲಿ ಚೆನ್ನೇ ಸೂಪರ್ ಕಿಂಗ್ಸ್ ವಿರುದ್ಧ ಸೋಲನ್ನು ಕಂಡು ರನ್ನರಪ್ ಪಡೆಯುವಲ್ಲಿ ಸೀಮಿತವಾಯಿತು. ಇದನ್ನೂ ಓದಿ: ಪಿಎಸ್‍ಎಲ್‍ಗಿಂತ ಐಪಿಎಲ್ ಉತ್ತಮವಾಗಿದೆ: ಪಾಕ್ ಮಾಜಿ ಆಟಗಾರ

ಇದೀಗ 15ನೇ ಆವೃತ್ತಿಯ ನಾಲ್ಕನೇ ದಿನದ ಆಟದಲ್ಲಿ ಎಸ್‌ಆರ್‌ಎಚ್ ಮತ್ತು ಆರ್‌ಆರ್ ತಂಡಗಳು ಮುಖಾಮುಖಿಯಾಗುತ್ತಿವೆ. ಹೈದ್ರಾಬಾದ್‌ನಲ್ಲಿ ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಅಭಿಶೇಕ್ ಶರ್ಮ, ನಿಕೋಲಾಸ್ ಪೂರನ್ (ವಿಕೆಟ್ ಕೀಪರ್), ಏಡೆನ್ ಮಾರ್‌ಕ್ರಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್‌ಸನ್, ಉಮ್ರಾನ್ ಮಾಲಿಕ್, ಟಿ.ನಟರಾಜನ್ ಇರಲಿದ್ದಾರೆ.

IPL

ರಾಜಸ್ಥಾನ್ ರಾಯಲ್ಸ್ ತಂಡದಿಂದ ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕಲ್, ಶಿಮ್ರನ್ ಹೆಟ್ಮೆಯರ್ / ರಾಸೀ ವ್ಯಾನ್ ಡೆರ್ ದುಸ್ಸೆನ್, ರಿಯಾನ್ ಪರಾಗ್, ಯಶಸ್ವಿ ಜೈಸ್ವಾಲ್, ಜೇಮ್ಸ್ ನೀಶಮ್, ಆರ್.ಅಶ್ವಿನ್, ಟ್ರೆಂಟ್‌ಬೋಲ್ಟ್, ಯಜುವೇಂದ್ರ ಚಾಹಲ್, ಪ್ರಸಿದ್ಧ ಕೃಷ್ಣ ಕಣದಲ್ಲಿ ಇರಲಿದ್ದಾರೆ.

ಈ ಬಾರಿ ಐಪಿಎಲ್‌ನಲ್ಲಿ ಎರಡೂ ತಂಡಗಳಲ್ಲೂ ಹೊಸ ಮುಖಗಳಿಗೆ ಆದ್ಯತೆ ನೀಡಿವೆ. ಆದರೆ ಆರ್‌ಆರ್ ತಂಡದ ಬೌಲಿಂಗ್‌ನಲ್ಲಿ ಅಶ್ಚಿನ್, ಚಾಹಲ್, ನ್ಯೂಜಿಲೆಂಡ್‌ನ ಟ್ರೆಂಟ್ ಬೋಲ್ಟ್‌ನಂತಹ ಅನುಭವೀ ಆಟಗಾರರಿದ್ದಾರೆ. ಹಾಗಾಗಿ ಇಂದಿನ ಪಂದ್ಯದಲ್ಲಿ ಗೆಲುವಿಗೆ ತೀವ್ರ ಪೈಪೋಟಿ ನಡೆಯಲಿದೆ.

 

Share This Article
Leave a Comment

Leave a Reply

Your email address will not be published. Required fields are marked *