ಚಂಡೀಗಢದ ಮೇಲಿನ ಹಕ್ಕಿಗಾಗಿ ಪಂಜಾಬ್ ವಿಲ್ ಫೈಟ್: ಭಗವಂತ್ ಮಾನ್

Public TV
1 Min Read
Bhagwant Mann

ಚಂಡೀಗಢ: ಆಡಳಿತದ ನೌಕರರಿಗೆ ಕೇಂದ್ರ ಸರ್ಕಾರದ ಸವಲತ್ತುಗಳನ್ನು ಚಂಡೀಗಢದಲ್ಲಿ ವಿಸ್ತರಿಸುವ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಘೋಷಿಸಿದ್ದರು. ಈ ಹಿನ್ನೆಲೆ ಪಂಜಾಬ್ ಸಿಎಂ ಭಗವಂತ್ ಮಾನ್, ಚಂಡೀಗಢದ ಮೇಲಿನ ಹಕ್ಕಿಗಾಗಿ ಪಂಜಾಬ್ ಬಲವಾಗಿ ಹೋರಾಡಲಿದೆ ಎಂದು ಆಕ್ರೋಶ ಹೊರಹಾಕಿದರು.

AMITH SHAH

ಅಮಿತ್ ಶಾ ಅವರ ಹೇಳಿಕೆ ಕುರಿತು ಭಗವಂತ್ ಮಾನ್ ಅವರು ಸೋಮವಾರ(ಇಂದು) ಟ್ವಿಟ್ಟರ್‍ನಲ್ಲಿ, ಚಂಡೀಗಢದ ಆಡಳಿತಕ್ಕೆ ಇತರ ರಾಜ್ಯಗಳು ಮತ್ತು ಸೇವೆಗಳಿಂದ ಅಧಿಕಾರಿಗಳನ್ನು ಕರೆತರುವ ಮೂಲಕ ಪಂಜಾಬ್ ಮರುಸಂಘಟನೆ ಕಾಯಿದೆ 1966 ಅನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿದೆ ಎಂದು ಆರೋಪಿಸಿದರು. ಇದನ್ನೂ ಓದಿ: SSLC ಪರೀಕ್ಷೆಗೆ ಹಿಜಬ್ ಧರಿಸಿ ಬಂದ ವಿದ್ಯಾರ್ಥಿನಿಯರು – ಪರೀಕ್ಷಾ ಸಿಬ್ಬಂದಿಯಿಂದ ಮನವೊಲಿಕೆ

ಕೇಂದ್ರ ಸರ್ಕಾರವು ಚಂಡೀಗಢದ ಆಡಳಿತದಲ್ಲಿ ಇತರ ರಾಜ್ಯಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹಂತಹಂತವಾಗಿ ಹೇರುತ್ತಿದೆ. ಇದು ಪಂಜಾಬ್ ಮರುಸಂಘಟನೆ ಕಾಯಿದೆ 1966ರ ಪತ್ರ ಮತ್ತು ಸ್ಪೂರ್ತಿಗೆ ವಿರುದ್ಧವಾಗಿದೆ. ಪಂಜಾಬ್ ಚಂಡೀಗಢದ ಮೇಲಿನ ತನ್ನ ಹಕ್ಕಿಗಾಗಿ ಬಲವಾಗಿ ಹೋರಾಡುತ್ತದೆ ಎಂದು ಬರೆದು ಟ್ವೀಟ್ ಮಾಡಿದರು.

ಅಮಿತ್ ಶಾ ಅವರು ಭಾನುವಾರ, ಇಂದು, ಮೋದಿ ಸರ್ಕಾರವು ಒಂದು ದೊಡ್ಡ ನಿರ್ಧಾರವನ್ನು ಮಾಡಿದೆ. ನಾಳೆ ಈ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗುವುದು. ಮುಂಬರುವ ಬಜೆಟ್‍ನಲ್ಲಿ(ಏಪ್ರಿಲ್ 1) ನೀವು ಪ್ರಯೋಜನವನ್ನು ಪಡೆಯುತ್ತೀರಿ. ಇದು ಚಂಡೀಗಢದ ದೀರ್ಘಕಾಲದ ಬೇಡಿಕೆಯಾಗಿದೆ. ಆಡಳಿತದ ನೌಕರರಿಗೆ ಕೇಂದ್ರ ಸರ್ಕಾರದ ಸವಲತ್ತುಗಳನ್ನು ಚಂಡೀಗಢದಲ್ಲಿ ವಿಸ್ತರಿಸುವ ನಿರ್ಧಾರವನ್ನು ಮಾಡಿದೆ ಎಂದು ಉಲ್ಲೇಖಿಸಿದ್ದರು.

ಅಮಿತ್ ಶಾ ಅವರ ಈ ಹೇಳಿಕೆಯು ಪಂಜಾಬ್‍ನ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತು ವಿರೋಧ ಪಕ್ಷಗಳಾದ ಅಕಾಲಿದಳ ಮತ್ತು ಕಾಂಗ್ರೆಸ್‍ಗೆ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹಿರಿಯ ಎಎಪಿ ನಾಯಕ ಮತ್ತು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಎಎಪಿಯ ಉದಯದ ಬಗ್ಗೆ ಬಿಜೆಪಿ ಹೆದರಿದೆ ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: SSLC ಪರೀಕ್ಷೆಗೆ ಬರೆಯಲು ಬಂದ 6 ನಕಲಿ ವಿದ್ಯಾರ್ಥಿಗಳು ಪೋಲಿಸರ ವಶ

Share This Article
Leave a Comment

Leave a Reply

Your email address will not be published. Required fields are marked *