.ad-label:empty { display: none; }

ಬಿಗ್ ಹಿಟ್ಟರ್‌ಗಳ ಪಂಚ್ ಹಿಟ್ – ಆರ್​ಸಿಬಿ ವಿರುದ್ಧ ಪಂಜಾಬ್‍ಗೆ ರೋಚಕ ಗೆಲುವು

Public TV
2 Min Read
IPL 2022 1

ಮುಂಬೈ: ಪಂಜಾಬ್ ತಂಡದ ಬಿಗ್ ಹಿಟ್ಟರ್‌ಗಳ ಪಂಚ್ ಹಿಟ್‍ಗೆ ಆರ್​ಸಿಬಿಯ ಬೃಹತ್ ಟಾರ್ಗೆಟ್ ಉಡೀಸ್ ಆಗಿದೆ. ಈ ಮೂಲಕ ಒಂದು ಓವರ್ ಬಾಕಿ ಇರುವಂತೆ ಪಂಜಾಬ್ ಕಿಂಗ್ಸ್ 5 ವಿಕೆಟ್‍ಗಳ ಭರ್ಜರಿ ಜಯ ಗಳಿಸಿತು.

PUNJAB KINGS

ಓಡನ್ ಸ್ಮಿತ್ ಅಜೇಯ 25 ರನ್ (8 ಎಸೆತ, 1 ಬೌಂಡರಿ, 3 ಸಿಕ್ಸ್) ಮತ್ತು ಶಾರೂಖ್ ಖಾನ್ 24 ರನ್ (20 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ಆರ್​ಸಿಬಿ ತಂಡದ ಗೆಲುವಿನ ಆಸೆಗೆ ತಣ್ಣಿರೇರಚಿದ ಈ ಜೋಡಿ, 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 208 ರನ್ ಸಿಡಿಸಿ ಗೆದ್ದು ಸಂಭ್ರಮಿಸಿತು.

ಈ ಮೊದಲು ಪಂಜಾಬ್ ಪರ ಮಯಾಂಕ್ ಅಗರ್‍ವಾಲ್ 32 ರನ್ (24 ಎಸೆತ, 2 ಬೌಂಡರಿ, 2 ಸಿಕ್ಸ್), ಶಿಖರ್ ಧವನ್ 43 ರನ್ (29 ಎಸೆತ, 5 ಬೌಂಡರಿ, 1 ಸಿಕ್ಸ್) ಮತ್ತು ಭಾನುಕಾ ರಾಜಪಕ್ಸೆ 43 ರನ್ (22 ಎಸೆತ, 2 ಬೌಂಡರಿ, 4 ಸಿಕ್ಸ್) ಬಾರಿಸಿ ತಂಡಕ್ಕೆ ನೆರವಾದರು.

ಆರ್​ಸಿಬಿಗೆ ಮೊದಲು ಬ್ಯಾಟಿಂಗ್ ಮಾಡಲು ಸಿಕ್ಕ ಅವಕಾಶವನ್ನು ಪೂರ್ತಿ ಕೈಯಿಂದ ಬಾಚಿಕೊಂಡಿತು. ಆರಂಭಿಕರಾದ ಡು ಪ್ಲೆಸಿಸ್ ಮತ್ತು ಅನುಜ್ ರಾವತ್ ಮೊದಲ ವಿಕೆಟ್‍ಗೆ 50 ರನ್ (42 ಎಸೆತ) ಜೊತೆಯಾಟವಾಡಿ ಭದ್ರ ಬುನಾದಿ ಹಾಕಿತು. ಅನುಜ್ ರಾವತ್ 21 ರನ್ (20 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು.

DUPLASIS.1

ನಂತರ ಜೊತೆಯಾದ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ನಾ ಮುಂದು ತಾ ಮುಂದು ಎಂಬಂತೆ ಬೌಂಡರಿ, ಸಿಕ್ಸರ್ ಸಿಡಿಸಲು ಮುಂದಾದರು ಅದರಲ್ಲೂ ನಾಯಕ ಡು ಪ್ಲೆಸಿಸ್ ಸಿಕ್ಸರ್‌ಗಳ ಸುರಿಮಳೆ ಗೈದರು. ಈ ಜೋಡಿ 2ನೇ ವಿಕೆಟ್‍ಗೆ 118 ರನ್ (61 ಎಸೆತ) ಜೊತೆಯಾಟವಾಡಿತು. ಪ್ಲೆಸಿಸ್ ಬಿರುಸಿನ ಬ್ಯಾಟಿಂಗ್ ನೋಡುತ್ತಿದ್ದಂತೆ ಅಭಿಮಾನಿಗಳು ಸಂತಸ ಪಟ್ಟರು ಆದರೆ ಅವರ ಆಟ 88 ರನ್ (57 ಎಸೆತ, 3 ಬೌಂಡರಿ, 7 ಸಿಕ್ಸ್)ಗೆ ಕೊನೆಗೊಂಡಿತು.

IPL 2022 RCB
ಬಳಿಕ ಬಂದ ದಿನೇಶ್ ಕಾರ್ತಿಕ್ ಸ್ಲಾಗ್ ಓವರರ್‌ಗಳಲ್ಲಿ ಕೊಹ್ಲಿ ಜೊತೆಗೂಡಿ ರನ್ ಮಳೆ ಸುರಿಸಿದರು. ಕೊಹ್ಲಿ ಅಜೇಯ 41 ರನ್ (29 ಎಸೆತ, 1 ಬೌಂಡರಿ, 2 ಸಿಕ್ಸ್) ಮತ್ತು ಕಾರ್ತಿಕ್ 32 ರನ್ (14 ಎಸೆತ, 3 ಬೌಂಡರಿ, 3 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 205 ರನ್‍ಗಳ ಬೃಹತ್ ಮೊತ್ತ ಕಲೆ ಹಾಕಿತು.

ರನ್ ಏರಿದ್ದು ಹೇಗೆ:
50 ರನ್ 41 ಎಸೆತ
100 ರನ್ 75 ಎಸೆತ
150 ರನ್ 93 ಎಸೆತ
205 ರನ್ 120 ಎಸೆತ

 

Share This Article
Leave a Comment

Leave a Reply

Your email address will not be published. Required fields are marked *