ಬೆಂಗಳೂರು: ಹಿಜಬ್, ಸ್ವಾಮೀಜಿಗಳ ಶಿರವಸ್ತ್ರದ ಬಗ್ಗೆ ತಾವು ನೀಡಿದ್ದ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಬಳಿಕವೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂಟಿಯಾದ್ರಾ ಅನ್ನೋ ಅನುಮಾನವೊಂದು ಹುಟ್ಟಿಕೊಂಡಿದೆ.
ಸ್ವಾಮೀಜಿಗಳ ಶಿರವಸ್ತ್ರದ ಹೇಳಿಕೆಯ ಬಳಿಕ ಸ್ವಪಕ್ಷೀಯರು ಸಿದ್ದರಾಮಯ್ಯರಿಂದ ಅಂತರ ಕಾಯ್ದುಕೊಳ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ ಸಿದ್ದರಾಮಯ್ಯ ಹೇಳಿಕೆ ಪರ ಯಾರೂ ನಿಲ್ತಿಲ್ಲ. ಇದರಿಂದ ಅಸಮಾಧಾನದಲ್ಲಿರುವ ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ಬೇಸರ ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಏಕಾಂಗಿ: ಡಿಕೆಶಿ ಅಂತರ ಕಾಯ್ದುಕೊಂಡಿದ್ದು ಏಕೆ..?
ನನ್ನ ವಿಲನ್ ಮಾಡುವುದಕ್ಕೆ ನೋಡ್ತಾರೆ ಕಣ್ರಯ್ಯ. ನಮ್ಮವರೇ ನನ್ನ ಹಳ್ಳಕ್ಕೆ ಕೆಡವಿ ಬಿಡ್ತಾರೆ ಅಂದ್ರೆ ಹೇಗೆ.?. ನಾನು ಹುಷಾರಾಗಿಲ್ಲ ಅಂತಂದ್ರೆ ರಾಜಕೀಯವಾಗಿ ನನಗೆ ಡೇಂಜರ್. ನಾನು ಯಾರನ್ನೂ ಟಾರ್ಗೆಟ್ ಮಾಡಿ ಮಾತಾಡಲಿಲ್ಲ. ದುಪ್ಪಟ್ಟ ಬಗ್ಗೆ ಸ್ವಾಭಾವಿಕವಾಗಿ ಹೇಳಿದೆ ಅಷ್ಟೇ. ಅದೂ ನನ್ನ ತಲೆಯಲ್ಲಿ ಇರಲಿಲ್ಲ, ಕೋತಿ ಹಿಂದಿದ್ದವನು ಹೇಳಿದ. ಅದನ್ನೇ ನಾನು ಹಿಂದು-ಮುಂದು ನೋಡದೇ ಹೇಳ್ಬಿಟ್ಟೆ ಎಂದು ಬೇಸರ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ: ಸಿದ್ದರಾಮಯ್ಯ ಸ್ಪಷ್ಟನೆ
ನಿರ್ದಿಷ್ಟ ಗುರಿ ಇಟ್ಕೊಂಡು ಮಾತಾಡಿಲ್ಲ. ಇಷ್ಟೊಂದು ವಿವಾದ ಆಗ್ಬಿಟ್ಟಿದೆ. ಬಿಜೆಪಿಯವರು ಇಂತಹದ್ದನ್ನೇ ಕಾಯ್ತಿರ್ತಾರೆ, ಇತ್ತ ನಮ್ಮವರು ಮೌನವಾಗಿದ್ದಾರೆ. ನಮ್ಮ ಪಕ್ಷದವರು ಯಾವೊಬ್ಬರೂ ಸಮರ್ಥಿಸಿಕೊಳ್ಳಲೇ ಇಲ್ಲ. ಬಿಜೆಪಿಗಷ್ಟೇ ಅಲ್ಲ ನಮ್ಮೊಳಗಿನ ವಿರೋಧಿಗಳಿಗೂ ಇದು ಮೈಲೇಜ್ ಅನ್ಸುತ್ತೆ. ನನಗೂ ಈ ರೀತಿ ರಾಜಕೀಯ ಸಾಕಾಗಿದೆ. ಲಾಸ್ಟ್ ಎಲೆಕ್ಷನ್, ನಾನು ಹುಷರಾಗಿರಬೇಕು, ಇಲ್ಲಂದ್ರೆ ಕಷ್ಟ ಕಣ್ರೋ ಎಂದು ಸಿದ್ದರಾಮಯ್ಯ ಅವರು ತಮ್ಮ ಆಪ್ತರ ಬಳಿಕ ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.