800ಕ್ಕೂ ಹೆಚ್ಚು ಅಗತ್ಯ ಔಷಧಗಳ ಬೆಲೆ ಏರಿಕೆ

Public TV
1 Min Read
medicine

ನವದೆಹಲಿ: ಸರಿಸುಮಾರು 800ಕ್ಕೂ ಹೆಚ್ಚು ಅಗತ್ಯ ಔಷಧಗಳ ಬೆಲೆಯನ್ನು ಹೆಚ್ಚಳ ಮಾಡಲು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಅನುಮತಿ ನೀಡಿದೆ.

medicine 1

ಯಾವ ಔಷಧಗಳ ಬೆಲೆ ಏರಿಕೆ: ಸಗಟು ಬೆಲೆ ಸೂಚ್ಯಂಕದ ಆಧಾರದ ಮೇಲೆ ಔಷಧಗಳ ಬೆಲೆಗಳ್ಲಿ ಶೇ 10.76 ರಷ್ಟು ಏರಿಕೆ ಮಾಡಲಾಗಿದೆ. ಇದರಿಂದಾಗಿ ಆ್ಯಂಟಿ ಬಯೋಟಿಕ್ ಔಷಧಗಳು, ಉರಿಯೂತ ನಿವಾರಕ ಔಷಧಗಳು, ಕಿವಿ-ಮೂಗು ಹಾಗೂ ಗಂಟಲಿಗೆ ಸಂಬಧಿತ ಔಷಧಗಳು, ಆ್ಯಂಟಿಸೆಪ್ಟಿಕ್, ಆ್ಯಂಟಿ ಫಂಗಲ್ ಹಾಗೂ ನೋವು ನಿವಾರಕ ಔಷಧಗಳ ಬೆಲೆಯಲ್ಲಿ ಏರಿಕೆ ಕಂಡುಬರಲಿದೆ. ಬಹಳಷ್ಟು ವರ್ಷಗಳ ನಂತರ ಒಂದೇ ಬಾರಿಗೆ ಶೇ. 10 ರಷ್ಟು ಬೆಲೆಯೆರಿಕೆ ನಿರ್ಣಯವನ್ನು ಔಷಧ ಕಂಪನಿಗಳು ಸ್ವಾಗತಿಸಿವೆ. ಇದನ್ನೂ ಓದಿ: ಬೆಂಗಳೂರು ರಸ್ತೆಗೆ ಹೆವಿ ವೆಹಿಕಲ್‍ಗಳೇ ಕಂಟಕ- ಭಾರೀ ಗಾತ್ರದ ವಾಹನಗಳಿಂದ ರೂಲ್ಸ್ ಬ್ರೇಕ್

medicine 2

ಶೇ 11ರಷ್ಟು ಬೆಲೆ ಏರಿಕೆ: ಔಷಧದ ಬೆಲೆ ನಿಯಂತ್ರಣ ಕಾಯ್ದೆ 2013ರ ಪ್ರಕಾರ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು ವಾರ್ಷಿಕ ಸಗಟು ಬೆಲೆ ಸೂಚ್ಯಂಕ ಅನ್ವಯ ಪ್ರತಿ ವರ್ಷ ಏಪ್ರಿಲ್ 1 ರಂದು ಔಷಧಗಳ ಬೆಲೆಯನ್ನು ಪರಿಷ್ಕರಣೆ ಮಾಡುತ್ತದೆ. 2022ರ ಆರ್ಥಕ ವರ್ಷದಲ್ಲಿ ಸಗಟು ಬೆಲೆ ಸೂಚ್ಯಂಕ ಆಧಾರದ ಮೇಲೆ ಔಷಧಗಳ ಬೆಲೆಯಲ್ಲಿ ಶೇ 10.76ರಷ್ಟು ಏರಿಕೆ ಮಾಡಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.

medicine 3

ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಗ್ರಾಹಕರ ಮೇಲೆ ಇದರಿಂದಾಗಿ ಇನ್ನಷ್ಟು ಹೊರೆ ಬೀಳಲಿದೆ. ಆರ್ಥಿಕ ಸಲಹೆಗಾರರ ಕಚೇರಿ ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ ಹಾಗೂ ವಾಣಿಜ್ಯ ಹಾಗೂ ಉದ್ಯಮ ಸಚಿವಾಲಯ ನೀಡಿದ ದತ್ತಾಂಶದ ಆಧಾರವಾಗಿ ಸಗಟು ಬೆಲೆ ಸೂಚ್ಯಂಕವನ್ನು ನಿಗದಿ ಪಡಿಸಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *