ಎಷ್ಟು ಕಾಶ್ಮೀರಿ ಪಂಡಿತರ ಕುಟುಂಬವನ್ನು ಬಿಜೆಪಿ ಪುನಃ ಕಾಶ್ಮೀರಕ್ಕೆ ಸ್ಥಳಾಂತರಿಸಿದೆ: ಕೇಜ್ರಿವಾಲ್ ಪ್ರಶ್ನೆ

Public TV
1 Min Read
ARAVINDH KEJIRIWAL

ನವದೆಹಲಿ: ಕಳೆದ 8 ವರ್ಷಗಳಲ್ಲಿ ಬಿಜೆಪಿಯಿಂದ ಒಂದೇ ಒಂದು ಕಾಶ್ಮೀರಿ ಪಂಡಿತರ ಕುಟುಂಬವನ್ನು ಪುನಃ ಕಾಶ್ಮೀರಕ್ಕೆ ಸ್ಥಳಾಂತರಿಸಲಾಗಿದೆಯೇ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಎಷ್ಟು ಕಾಶ್ಮೀರಿ ಪಂಡಿತರನ್ನು ಕಣಿವೆ ರಾಜ್ಯದಲ್ಲಿ ವಸತಿ ಕಲ್ಪಿಸಿದೆ ಎಂದ ಅವರು, ಬಿಜೆಪಿ ಕಾಶ್ಮೀರಿ ಪಂಡಿತರ ಸ್ಥಳಾಂತರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

BJP FLAG

ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಬೇಕು ಮತ್ತು ಅದರಿಂದ ಗಳಿಸಿದ ಹಣವನ್ನು ಕಾಶ್ಮೀರಿ ಪಂಡಿತರ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕು ಎಂದು ಮತ್ತೊಮ್ಮೆ ಸಲಹೆ ನೀಡಿದರು. ಇದನ್ನೂ ಓದಿ: ಹಿಜಬ್ ವಿಷಯವನ್ನು ಪ್ರಸ್ತಾಪ ಮಾಡೇ ಇಲ್ಲ: ಸ್ವಾಮೀಜಿಗಳ ಟೀಕೆ ಬಳಿಕ ಸಿದ್ದು ಸ್ಪಷ್ಟನೆ

the kashmir files 4

ದಿ ಕಾಶ್ಮೀರ್ ಫೈಲ್ಸ್ ಸಿನೆಮಾ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದರು. ಇದನ್ನೂ ಓದಿ: ಗಡುವು ಮುಗಿದರೂ ಅರ್ಜಿ ಸಲ್ಲಿಸಲು ವಿಶೇಷ ಚೇತನರಿಗೆ ಅವಕಾಶ ಕಲ್ಪಿಸಿದ ಸುಪ್ರೀಂಕೋರ್ಟ್

Share This Article
Leave a Comment

Leave a Reply

Your email address will not be published. Required fields are marked *