ಶಾಲೆಯಿಂದ ಗೇಟ್ ಪಾಸ್ – 10ನೇ ಕ್ಲಾಸ್ ಟಾಪರ್ ಆತ್ಮಹತ್ಯೆ

Public TV
1 Min Read
crime

ಹೈದರಾಬಾದ್: ಹತ್ತನೇ ತರಗತಿಯ ಟಾಪರ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ತೂರಿನ ಪಲಮನೇರ್ ನಡೆದಿದೆ.

ಸೋಡಾ ವ್ಯಾಪಾರ ಮಾಡುತ್ತಿದ್ದವರ ಪುತ್ರಿ ಮಿಸ್ಬಾ ಫಾತಿಮಾ ಗಂಗಾವರಂನ ಬ್ರಹ್ಮರ್ಷಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಳು. ಪ್ರಾಂಶುಪಾಲ ರಮೇಶ್ ಅವರು ಶೈಕ್ಷಣಿಕ ವರ್ಷ ಮುಗಿಯುವ ಕೆಲವೇ ದಿನಗಳಲ್ಲಿ ಮಿಸ್ಬಾ ಅವರಿಗೆ ವರ್ಗಾವಣೆ ಪ್ರಮಾಣಪತ್ರ (ಟಿಸಿ) ನೀಡಿದ್ದರು. ಪ್ರಾಂಶುಪಾಲರ ಅನುಚಿತ ವರ್ತನೆಯಿಂದ ಬೇಸತ್ತು ಮಿಸ್ಬಾ ಫಾತಿಮಾ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಮನೆ ಮುಂದೆ ಬುಲ್ಡೋಜರ್ ಪ್ರತ್ಯಕ್ಷ – ಪರಾರಿಯಾಗಿದ್ದ ಯುಪಿ ರೇಪ್ ಆರೋಪಿ ಶರಣು

crim

ತಾನು ಕ್ಲಾಸ್ ಟಾಪರ್ ಆಗಿದ್ದ ಕಾರಣ ತನ್ನ ಸಹಪಾಠಿಯ ತಂದೆ ಅವರ ಮಗಳು ಕ್ಲಾಸ್ ಟಾಪರ್ ಆಗಬೇಕೆಂಬ ಉದ್ದೇಶದಿಂದ ಶಾಲೆಯ ಆಡಳಿತ ಮಂಡಳಿಗೆ ತನ್ನನ್ನು ತೆಗೆದುಹಾಕಲು ಒತ್ತಾಯಿಸುತ್ತಿದ್ದರು ಎಂದು ಮಿಸ್ಬಾ ಫಾತಿಮಾ ಡೆತ್ ನೋಟ್‍ನಲ್ಲಿ ಉಲ್ಲೇಖಿಸಿದ್ದಾಳೆ.

ಸದ್ಯ ತೆಲುಗು ದೇಶಂ ಪಕ್ಷದ ನಾಯಕ ಮತ್ತು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್, ಮಿಸ್ಬಾ ಫಾತಿಮಾ ಸಹಪಾಠಿಯ ತಂದೆ ಆಡಳಿತ ಪಕ್ಷದ ನಾಯಕನಾಗಿರುವ ಕಾರಣ ಅವರ ಮೇಲೆ ಪೊಲೀಸರು ಸಹ ಶೀಘ್ರವಾಗಿ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಾತುಬಾರದ ಬಾಲಕನ ಕೊಂದು ಗೋಣಿ ಚೀಲದಲ್ಲಿ ತುಂಬಿ ಎಸೆದ್ರು

Police Jeep 1 1

ಮೃತ ಮಿಸ್ಬಾ ಫಾತಿಮಾ ವೈಎಸ್‌ಆರ್‌ಸಿಪಿ ನಾಯಕನ ಮಗಳಿಗಿಂತ ಹೆಚ್ಚು ಅಂಕ ಗಳಿಸಿದ್ದಳು. ಹಾಗಾಗಿ ಆಕೆಗೆ ಕಿರುಕುಳ ನೀಡುವುದರ ಜೊತೆಗೆ ಶಾಲೆಯ ಪ್ರಾಂಶುಪಾಲರ ಬೆದರಿಕೆಯೊಡ್ಡಿದ್ದರಿಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವೈಎಸ್‌ಆರ್‌ಸಿಪಿ ನಾಯಕ ಸುನಿಲ್ ಅವರು ತಮ್ಮ ಮಗಳು ಪೂಜಿತಾ ಕ್ಲಾಸ್ ಟಾಪರ್ ಆಗಬೇಕೆಂದು ಬಯಸಿದ್ದರು. ಆದರೆ ನಜೀರ್ ಅಹ್ಮದ್ ಮತ್ತು ನಸೀಮಾ ಅವರು ದಿನಗೂಲಿ ಕಾರ್ಮಿಕರಾಗಿದ್ದರೂ ಮಿಸ್ಬಾ ಉತ್ತಮ ಅಂಕಗಳಿಸುತ್ತಿದ್ದಳು ಎಂದು ತಿಳಿದ್ದಾರೆ.

ಇದೊಂದು ಅಮಾನವೀಯ, ಭಯಾನಕ ಮತ್ತು ಅವಮಾನಕರ ಘಟನೆಯಾಗಿದ್ದು, ಇದರಲ್ಲಿ ಆಕೆಯ ಯಾವುದೇ ತಪ್ಪಿಲ್ಲದೆ ಬಾಲಕಿಯನ್ನು ಶಾಲೆಯಿಂದ ತೆಗೆದುಹಾಕುವುದು ಅತ್ಯಂತ ಖಂಡನೀಯ. ಆಕೆಯ ಸಾವಿಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯ ಕೇಳಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *