ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ವಿರೋಧಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‍ನ ಪ್ರಮುಖ ಸಲಹೆಗಾರ ರಾಜೀನಾಮೆ ನೀಡಿ, ರಷ್ಯಾವನ್ನು ತೊರೆದಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ದಿನೇ ದಿನೇ ಹೆಚ್ಚುತ್ತಿದ್ದು, ವಿಶ್ವದಾದ್ಯಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟೀನ್ ವಿರುದ್ಧ ಆಕ್ರೋಶವನ್ನು ಪಡೆಸುತ್ತಿದ್ದಾರೆ. ಇದೀಗ ಈ ವಿರೋಧದ ಕಾವು ರಷ್ಯಾ ಸರ್ಕಾರದಲ್ಲೇ ಹಬ್ಬಿದ್ದು ಪುಟಿನ್‍ನ ಪ್ರಮುಖ ಸಲಹೆಗಾರ ಅನಾಟೊಲಿ ಚುಬೈಸ್ ರಾಜೀನಾಮೆಯನ್ನು ನೀಡಿದ್ದಾರೆ.
ಅನಾಟೊಲಿ ಚುಬೈಸ್ ಸುಸ್ಥಿರ ಅಭಿವೃದ್ಧಿಗಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳ ಸಂಬಂಧಕ್ಕಾಗಿ ಕ್ರೆಮ್ಲಿನ್‍ನ ವಿಶೇಷ ಪ್ರತಿನಿಧಿಯಾಗಿದ್ದರು. ಆದರೆ ರಷ್ಯಾ, ಉಕ್ರೇನ್‍ನ ಮೇಲೆ ದಾಳಿ ನಡೆಸುತ್ತಿರುವುದರಿಂದ ಪುಟಿನ್ ಮೇಲೆ ಚುಬೈಸ್ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆಯನ್ನು ನೀಡಿದ್ದಾರೆ. ಇದನ್ನೂ ಓದಿ: ರುಬೆಲ್ ಮೂಲಕ ಖರೀದಿಸಿದರಷ್ಟೇ ತೈಲ: ವಿರೋಧಿಗಳಿಗೆ ಶಾಕ್ ಕೊಟ್ಟ ಪುಟಿನ್
ಚುಬೈಸ್ ರಾಜೀನಾಮೆಯನ್ನು ನೀಡುವುದರ ಜೊತೆಗೆ ರಷ್ಯಾವನ್ನು ತೊರೆದಿದ್ದಾರೆ. ಸದ್ಯ ಟರ್ಕಿಯಲ್ಲಿ ನೆಲೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಬುಧವಾರ ಚುಬೈಸ್ ರಾಜೀನಾಮೆ ನೀಡಿದ್ದಾರೆ ಎಂದು ರಷ್ಯಾ ಸರ್ಕಾರ ದೃಢಪಡಿಸಿದರು. ಆದರೆ ಚುಬೈಸ್ ರಷ್ಯಾವನ್ನು ತೊರೆದಿರುವ ಬಗ್ಗೆ ಇನ್ನೂ ದೃಢಿಕರಿಸಿಲ್ಲ. ಇದನ್ನೂ ಓದಿ: ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ