ಮುಸ್ಲಿಮರಿಗೆ ದೇವಸ್ಥಾನಗಳಲ್ಲಿ ವ್ಯಾಪಾರ ಬಹಿಷ್ಕಾರ – 2021ರಲ್ಲಿ ಗಂಗೊಳ್ಳಿಯಲ್ಲಿ ನಡೆದಿದ್ದು ಏನು?

Public TV
3 Min Read
UDP GANGOLLI FISH

ಉಡುಪಿ: ಕರಾವಳಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ದೇವಸ್ಥಾನಗಳಲ್ಲಿ ವ್ಯಾಪಾರ ಬಹಿಷ್ಕಾರದ ಕಿಚ್ಚು ದಿನೇ ದಿನೇ ಹೆಚ್ಚುತ್ತಿದೆ. ಈ ಕಿಚ್ಚಿಗೆ ಆರಂಭದ ಕಿಡಿ ಹಚ್ಚಿದ್ದು, ಕಳೆದ ವರ್ಷ ಗಂಗೊಳ್ಳಿಯಲ್ಲಿ ನಡೆದ ಒಂದು ಘಟನೆ.

ಹಿಜಬ್ ಹೋರಾಟದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಡುಪಿಗೆ ಕೆಟ್ಟ ಹೆಸರು ಬರುತ್ತಿದ್ದ ಹಿನ್ನೆಲೆಯಲ್ಲಿ ಜನತೆ ಅಸಮಾಧಾನಗೊಂಡಿದ್ದರು. ಜನತೆ ಅಸಮಾಧಾನಗೊಂಡಿದ್ದರೂ ಅಂಗಡಿ ಬಹಿಷ್ಕಾರದ ನಿರ್ಧಾರಕ್ಕೆ ಬಂದಿರಲಿಲ್ಲ. ಆದರೆ ಹೈಕೋರ್ಟ್ ತೀರ್ಪು ಪ್ರಕಟವಾದ ಬಳಿಕ ಅಂಗಡಿಗಳನ್ನು ಮುಚ್ಚಿ ಕರ್ನಾಟಕ ಬಂದ್‍ಗೆ ಕರೆ ಯಾವಾಗ ಕೊಟ್ಟರೋ ಆಗ ಗಂಗೊಳ್ಳಿಯಲ್ಲಿ ಹಿಂದೂ ಸಮಾಜದ ಬಡ ಮೀನುಗಾರ ಮಹಿಳೆಯರ ಮೇಲೆ ಆರ್ಥಿಕ ಬಹಿಷ್ಕಾರ ಹಾಕಿದ ವಿಚಾರ ಮುನ್ನೆಲೆಗೆ ಬಂದಿದೆ.

hijab karnataka bandh Temples in coastal Karnataka and Malnad region ban Muslim traders at annual fairs muzrai department rules

ಅಂದು ಏನಾಗಿತ್ತು?: 2021ರ ಅಕ್ಟೋಬರ್ 21ರಂದು ಬೈಂದೂರು ತಾಲೂಕಿನ ಗಂಗೊಳ್ಳಿ ವ್ಯಾಪ್ತಿಯಲ್ಲಿ ವಿಪರೀತವಾಗಿ ಗೋಕಳ್ಳತನ ನಡೆಯುತ್ತಿತ್ತು. ಅಕ್ರಮ ಕಸಾಯಿಖಾನೆಗಳನ್ನು ಮಾಡಿ ಗೋಮಾಂಸ ಸಾಗಾಟ ನಡೆಯುತ್ತಿತ್ತು. ಇದರ ವಿರುದ್ಧ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳು ಬೃಹತ್ ಪಾದಯಾತ್ರೆಯನ್ನು ಮಾಡಿದ್ದವು. ಇದಾಗಿ ಮಾರನೇ ದಿನದಿಂದ ಮೀನುಗಾರ ಸಮುದಾಯದ ವ್ಯಾಪಾರಿಗಳಿಗೆ ಮುಸ್ಲಿಮರು ವ್ಯಾಪಾರ ಬಹಿಷ್ಕಾರ ಹಾಕಿದ್ದರು.

ಸಮುದ್ರದಲ್ಲಿ ಮೊಗವೀರ ಸಮುದಾಯ ಹಿಡಿದ ಮೀನನ್ನು, ಮೊಗವೀರ ಮಹಿಳೆಯರು ಮಾರುವ ಮೀನನ್ನು ಖರೀದಿ ಮಾಡಲು ಮಾರುಕಟ್ಟೆಗೆ ಬಾರದೇ ಅವರು ದೂರವುಳಿದಿದ್ದರು. ಮೊಗವೀರ ಮಹಿಳೆಯರಿಂದ ಮೀನು ಖರೀದಿಸಬಾರದು ಎಂದು ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್‍ನಲ್ಲಿ ಸಂದೇಶವನ್ನು ಹರಿ ಬಿಡಲಾಗಿತ್ತು. ಈ ವಿಚಾರ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದರೂ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರಲಿಲ್ಲ. ಇದನ್ನೂ ಓದಿ: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್‌ ವ್ಯಾಪಾರಿಗಳಿಗೆ ನಿಷೇಧ: ನಿಯಮ ಏನಿದೆ?

UDP FISH

ಕರ್ನಾಟಕ ಬಂದ್ ಸಮಯದಲ್ಲಿ ಅಂಗಡಿ ಬಂದ್ ಮಾಡುವುದರ ಜೊತೆ ಮುಸ್ಲಿಂ ಕಾಂಪ್ಲೆಕ್ಸ್‌ನಲ್ಲಿದ್ದ ಹಿಂದೂ ಮಾಲೀಕರ ಅಂಗಡಿಗಳನ್ನು ಬಂದ್ ಮಾಡಿದ ವಿಚಾರ ಹಿಂದೂ ಸಂಘಟನೆಗಳ ಸಿಟ್ಟಿಗೆ ಕಾರಣವಾಗಿದೆ. ಸಂವಿಧಾನ ವಿರುದ್ಧ ಬಂದ್ ಕರೆ ಕೊಟ್ಟಿದ್ದಕ್ಕೆ ಐದು ತಿಂಗಳ ನಂತರ ಸೂಕ್ತ ಸಂದರ್ಭ ನೋಡಿಕೊಂಡು ಗಂಗೊಳ್ಳಿ ಘಟನೆಗೆ ದೊಡ್ಡ ರೀತಿಯಲ್ಲಿ ತಿರುಗೇಟು ನೀಡುತ್ತಿದ್ದಾರೆ. ಇದನ್ನೂ ಓದಿ: ಮುಸ್ಲಿಂ ದೇವರಿಗೆ ಹಿಂದೂ ಮಟನ್ ಸ್ಟಾಲ್ ಮಾಂಸ ಆಗಲ್ಲ, ನಮ್ಮ ದೇವರಿಗ್ಯಾಕೆ : ಸಿ.ಟಿ ರವಿ

ಇಷ್ಟು ಗಟ್ಟಿ ಧ್ವನಿಯಿಂದ ನಿರ್ಬಂಧ ವಿಚಾರ ಮಾತನಾಡಲು ಕಾರಣವಾಗಿದ್ದು ಸರ್ಕಾರದ ನಿಯಮ. ಸರ್ಕಾರದ ನಿಯಮವೇ ಇರುವ ಕಾರಣ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದನ್ನೂ ಓದಿ: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪುನಾರಂಭಿಸಿ: ಸೋನಿಯಾ ಗಾಂಧಿ

ನಿಯಮ ಏನಿದೆ?: 
ಮುಸ್ಲಿಮರಿಗೆ ಅಂಗಡಿ ಹಾಕಲು ಅವಕಾಶ ನಿರಾಕರಿಸುತ್ತಿರುವ ದೇಗುಲದ ಆಡಳಿತ ಮಂಡಳಿಗಳು, 2002ರಲ್ಲಿ ರೂಪಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಯ ನಿಯಮವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿ ಪುಸ್ತಕದ ಪುಟ ಸಂಖ್ಯೆ 446ರಲ್ಲಿರುವ 12 ನಿಯಮದಲ್ಲಿ, ಸಂಸ್ಥೆಯ ಸಮೀಪದ ಜಮೀನು ಕಟ್ಟಡ ಮತ್ತು ನಿವೇಶನಗಳೂ ಸೇರಿದಂತೆ ಯಾವುದೇ ಸವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡತಕ್ಕದಲ್ಲ ಎಂದು ಉಲ್ಲೇಖಿಸಲಾಗಿದೆ.

hijab karnataka bandh Temples in coastal Karnataka and Malnad region ban Muslim traders at annual fairs muzrai department rules 3

ಇದೀಗ ಇದೇ ನಿಯಮವನ್ನು ನಾವು ಜಾರಿ ಮಾಡಿದ್ದೇವೆ ಎಂದು ಹಿಂದೂ ಸಂಘಟನೆಗಳು ಹೇಳುತ್ತಿದೆ. ಹಿಂದೂ ಸಂಘಟನೆಗಳು ಈ ನಿಯಮವನ್ನು ಮುಂದಿಟ್ಟುಕೊಂಡು ದೇವಾಲಯದ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿ ಹಿಂದೂಯೇತರ ವ್ಯಕ್ತಿಗಳಿಗೆ ಅನುಮತಿ ನೀಡದಂತೆ ಮನವಿ ಮಾಡುತ್ತಿದೆ. ಈ ನಿಯಮ ಜಾರಿಯಾಗಿದ್ದು 2002ರಲ್ಲಿ. ಈ ವೇಳೆ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇದ್ದಿದ್ದು ಎಸ್‍ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ. ಇಂದು ಅದೇ ಕಾಂಗ್ರೆಸ್ಸಿಗರು ಇದು ಸರಿಯಲ್ಲ ಎನ್ನುತ್ತಿದ್ದಾರೆ.

hijab karnataka bandh Temples in coastal Karnataka and Malnad region ban Muslim traders at annual fairs muzrai department rules 1

ಹಿಜಬ್ ವಿವಾದ ಸೃಷ್ಟಿಯಾಗುವರೆಗೂ ಈ ನಿಯಮ ಇದೆ ಎನ್ನುವದು ಬಹುತೇಕ ಮಂದಿಗೆ ತಿಳಿದಿರಲಿಲ್ಲ. ಅಷ್ಟೇ ಅಲ್ಲದೇ ಕರಾವಳಿ ಭಾಗದಲ್ಲಿ ಹಿಂದೂ ದೇವಾಲಯಗಳಲ್ಲಿ ಇಲ್ಲಿಯವರೆಗೂ ಮುಸ್ಲಿಮ್ ವ್ಯಾಪಾರಿಗಳು ಅಂಗಡಿಗಳನ್ನು ತೆರೆಯುತ್ತಿದ್ದರು. ಆದರೆ ಹಿಜಬ್ ವಿವಾದ, ಕರ್ನಾಟಕ ಬಂದ್ ಬಳಿಕ ಕರಾವಳಿಯ ಹಿಂದೂ-ಮುಸಲ್ಮಾನ ಸಾಮರಸ್ಯದಲ್ಲಿ ಮತ್ತಷ್ಟು ಬಿರುಕಾಗಿದೆ. ಎರಡು ಸಮುದಾಯದ ಮುಖಂಡರು ಧಾರ್ಮಿಕ ದಿಗ್ಗಜರು ಒಂದೆಡೆ ಕುಳಿತು ಇದಕ್ಕೊಂದು ಪರಿಹಾರ ಮಾಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *