ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಪಾಕ್‌ ಪ್ರಧಾನಿಗೆ 50,000 ರೂ. ದಂಡ

Public TV
1 Min Read
IMRANKHAN

ಇಸ್ಲಾಮಾಬಾದ್:‌ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಚುನಾವಣಾ ಆಯೋಗವು 50,000 ರೂ. ದಂಡ ವಿಧಿಸಿದೆ.

ಖೈಬರ್-ಪಖ್ತುಂಖ್ವಾದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಸ್ವಾತ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಪಾಲ್ಗೊಂಡು ಭಾಷಣ ಮಾಡುವ ಮೂಲಕ ಪಾಕ್‌ ಪ್ರಧಾನಿ, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಪರಿಣಾಮವಾಗಿ ಆಯೋಗ ದಂಡ ಹಾಕಿದೆ. ಇದನ್ನೂ ಓದಿ: ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದ ಪಾಕ್ ಪ್ರಧಾನಿ

chairman islamabad cricket pakistan general politician election 8f2ff582 9ca6 11e8 8838 278d266b5e3b

ಸಾರ್ವಜನಿಕ ರ‍್ಯಾಲಿ ಆಯೋಜಿಸುವುದನ್ನು ಪಾಕಿಸ್ತಾನದ ಚುನಾವಣಾ ಆಯೋಗವು ನಿರ್ಬಂಧಿಸಿತ್ತು. ಆದರೆ ಪ್ರಧಾನ ಮಂತ್ರಿ, ಆಯೋಗದ ಆದೇಶವನ್ನು ಉಲ್ಲಂಘಿಸಿದ್ದರು.

ಮಾ.31ರಂದು ಖೈಬರ್-ಪಖ್ತುಂಖ್ವಾದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಎರಡನೇ ಹಂತದ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಡಳಿತದಲ್ಲಿರುವ ಯಾರೂ ಸಹ ಚುನಾವಣೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ರ‍್ಯಾಲಿ ನಡೆಸುವಂತಿಲ್ಲ ಎಂದು ನೀತಿ ಸಂಹಿತೆಯಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: ಇಮ್ರಾನ್‍ಖಾನ್ ಕುರ್ಚಿಗೆ ಇಕ್ಕಟ್ಟು: ಮಾರ್ಚ್ 28ಕ್ಕೆ ಭವಿಷ್ಯ ನಿರ್ಧಾರ

PAK

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಇಮ್ರಾನ್‌ ಖಾನ್‌ಗೆ ಆಯೋಗ ಎರಡು ಬಾರಿ ನೋಟಿಸ್‌ ನೀಡಿದೆ. ಕೊನೆಯ ನೋಟಿಸ್‌ ಮಾ.21ರಂದು ಕಳುಹಿಸಲಾಗಿದೆ.

ನೋಟೀಸ್ ವಿರುದ್ಧ ಪ್ರಧಾನಿ ಹಾಗೂ ಯೋಜನೆ ಮತ್ತು ಅಭಿವೃದ್ಧಿ ಸಚಿವ ಅಸಾದ್ ಉಮರ್ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಹೊಸ ಶಾಸನದ ಹೊರತಾಗಿಯೂ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಚುನಾವಣಾ ಆಯೋಗಕ್ಕೆ ನಿರ್ಬಂಧ ವಿಧಿಸಲು ಹೈಕೋರ್ಟ್‌ ನಿರಾಕರಿಸಿದೆ. ಇದನ್ನೂ ಓದಿ: ಹಿಜಬ್‌ ನಿಷೇಧಿಸಿ ಕರ್ನಾಟಕ ಹೈಕೋರ್ಟ್‌ ಇಸ್ಲಾಂ ಬಗ್ಗೆ ಭೀತಿ ಹುಟ್ಟುವಂತೆ ಮಾಡಿದೆ: ಇಮ್ರಾನ್‌ ಖಾನ್‌

Share This Article
Leave a Comment

Leave a Reply

Your email address will not be published. Required fields are marked *