ಜಾತ್ರೆ ಉತ್ಸವ ನಂಬಿರುವ ನಮಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ: ಆರಿಫ್

Public TV
2 Min Read
Udupi Muslim community request Let business Allow it 1 1

ಉಡುಪಿ: ಹಿಂದೂ ಧರ್ಮೀಯರಿಗೆ ನಾವು ಚಿಕ್ಕಂದಿನಿಂದಲೂ ಗೌರವ ಕೊಡುತ್ತಾ ಬಂದಿದ್ದೇವೆ‌. ಈಗಲೂ ಅವರ ಜೊತೆಗೆ ನಾವು ಬಹಳ ಅನ್ಯೋನ್ಯವಾಗಿ ಇದ್ದೇವೆ. ಬೀದಿ ಬದಿ ವ್ಯಾಪಾರಿಗಳಿಗೆ ಜಾತ್ರೆ-ಉತ್ಸವಗಳಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಉಡುಪಿ ಜಿಲ್ಲಾ ಜಾತ್ರೆ ಮತ್ತು ಬೀದಿ ಬದಿ ವ್ಯಾಪಾರಿಗಳ ಸಂಘ ವಿನಂತಿ ಮಾಡಿದೆ.

ಹಿಜಬ್ ಕುರಿತಾದ ತೀರ್ಪನ್ನು ಉಡುಪಿಯ ಮುಸಲ್ಮಾನ ಸಮುದಾಯ ಒಂದು ದಿನ ವ್ಯಾಪಾರ ವಹಿವಾಟು ಮತ್ತು ತಮ್ಮ ಎಲ್ಲಾ ಚಟುವಟಿಕೆ ಬಂದ್ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಇದರಿಂದ ಆಕ್ರೋಶಗೊಂಡ ಹಿಂದೂ ಸಮಾಜ, ಮುಸಲ್ಮಾನ ವ್ಯಾಪಾರಿಗಳು ಹಿಂದೂ ಧರ್ಮೀಯರ ಧಾರ್ಮಿಕ ಕೇಂದ್ರಗಳಲ್ಲಿ ಉತ್ಸವ ಜಾತ್ರೆ ಹಬ್ಬ-ಹರಿದಿನಗಳಲ್ಲಿ ದೇವಸ್ಥಾನ ಮತ್ತು ದೇವಸ್ಥಾನದ ವ್ಯಾಪ್ತಿಯಲ್ಲಿ ವ್ಯಾಪಾರ-ವಹಿವಾಟು ಮಾಡಬಾರದು ಎಂಬ ಹೋರಾಟ ಮಾಡಿದೆ. ಧಾರ್ಮಿಕ ಕೇಂದ್ರಗಳಿಗೆ ಈ ಕುರಿತಾದ ಪತ್ರಗಳನ್ನು ಕೊಡುತ್ತಿದೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದೆ.

Udupi Muslim community request Let business Allow it 1

ಈ ಬಗ್ಗೆ ಮಾತನಾಡಿದ ಜಾತ್ರೆ, ಬೀದಿ ಬದಿ ವ್ಯಾಪಾರಿ ಸಂಘದ ಪ್ರಧಾನ ಕಾರ್ಯದರ್ಶಿ ಆರಿಫ್, ಜಾತ್ರೆ ಮತ್ತು ಬೀದಿಬದಿ ವ್ಯಾಪಾರದಲ್ಲಿ 1500ಕ್ಕೂ ಹೆಚ್ಚು ಜನ ನಾವು ಇದ್ದೇವೆ. ಸುಮಾರು 630 ಕುಟುಂಬ ಬೀದಿ ಬದಿ ವ್ಯಾಪಾರ ಮತ್ತು ಜಾತ್ರೆಯ ವ್ಯಾಪಾರದಿಂದ ಜೀವನ ಸಾಗಿಸುತ್ತಿದೆ. ಹಿಜಬ್ ತೀರ್ಪು ನಂತರ ಅಂಗಡಿಗಳನ್ನು ಬಂದ್ ಮಾಡಲು ಕರೆ ಕೊಟ್ಟಿದ್ದರು.

ಮುಸಲ್ಮಾನ ಮುಖಂಡರು ಸಂಘಟನೆಗಳಿಂದ ಬಂದ್ ಮಾಡಬೇಕು ಎಂಬ ಸೂಚನೆ ಬಂದಿತ್ತು. ನಾವು ಜಾತ್ರೆ ಮತ್ತು ಬೀದಿಬದಿ ವ್ಯಾಪಾರಸ್ಥರು ಯಾವುದೇ ಬಂದ್ ಗೆ ಬೆಂಬಲ ವ್ಯಕ್ತ ಪಡಿಸಿಲ್ಲ. ಜಾತ್ರೆ, ಉತ್ಸವ- ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾವು ನಮ್ಮ ವ್ಯಾಪಾರವನ್ನು ಅಂದೂ ಮುಂದುವರಿಸಿದ್ದೆವು. ಒಂದು ದಿನ ಇದ್ಧ ಬಂದಿಗೆ ನಾವು ಬೆಂಬಲಿಸಿರಲಿಲ್ಲ. ನಾವು ವ್ಯಾಪಾರ ಮಾಡಿದ್ದೆವು ಎಂದರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಪ್ರದರ್ಶನ: ರಾಜಸ್ಥಾನದ ಕೋಟಾದಲ್ಲಿ 144 ಸೆಕ್ಷನ್ ಜಾರಿ

ಸಾಂಕ್ರಾಮಿಕ ಕೊರೋನ ಬಂದನಂತರ ನಮ್ಮ ಜಾತ್ರೆಗಳಲ್ಲಿ ವ್ಯಾಪಾರ ಮಾಡುವವರ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಈಗ ಈ ತರದ ಮುಸಲ್ಮಾನ ವ್ಯಾಪಾರಿಗಳು ಜಾತ್ರೆಗಳಿಗೆ ಬರಬಾರದು ಎಂಬ ನಿರ್ಬಂಧ ನಮ್ಮನ್ನ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತದೆ. ದಯವಿಟ್ಟು ನಮಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಸಂಘದ ಪರವಾಗಿ ಆರಿಫ್ ವಿನಂತಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಬಳಿಕ ಪಾಕ್ ಪ್ರಧಾನಿ ಆಗ್ತಾರಾ ಶೆಹಬಾಜ್ ಷರೀಫ್?

Share This Article
Leave a Comment

Leave a Reply

Your email address will not be published. Required fields are marked *