ಸ್ಯಾಂಡಲ್‍ವುಡ್ ನಟಿ ಪ್ರಣಿತಾ ಸುಭಾಷ್ ಅವರು ತಮ್ಮ ವಿವಾಹದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಕಳೆದ ವರ್ಷ ಮೇ ತಿಂಗಳಿನಲ್ಲಿ ಕೊರೊನಾ ಲಾಕ್‍ಡೌನ್ ವೇಳೆ ನಿತಿನ್ ರಾಜು ಅವರ ಜೊತೆ ಪ್ರಣಿತಾ ಅವರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಕಾರ್ಯಕ್ರಮಕ್ಕೆ ಕೇವಲ ವಧು, ವರರ ಕುಟುಂಬಸ್ಥರನ್ನು ಮಾತ್ರ ಆಹ್ವಾನಿಸಲಾಗಿತ್ತು. ಸದ್ಯ ಮದುವೆಯಾಗಿ 9 ತಿಂಗಳ ಬಳಿಕ ಇದೀಗ ಪ್ರಣಿತಾ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪತಿ ಜೊತೆ ಸಪ್ತಪದಿ ತುಳಿಯುತ್ತಿರುವ ಮತ್ತು ಮಂಟಪಕ್ಕೆ ಆಗಮಿಸುತ್ತಿರುವ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಣಿತಾ ಸುಭಾಷ್- ನಿತಿನ್ ರಾಜ್ ಯಾರು..?
View this post on Instagram
ಈ ಫೋಟೋಗಳ ಜೊತೆಗೆ ಕ್ಯಾಪ್ಷನ್‍ನಲ್ಲಿ ಕೋವಿಡ್ ಲಾಕ್‍ಡೌನ್ ವೇಳೆ ನಡೆದ ಮದುವೆ. ಕೊನೆಯ ನಿಮಿಷದಲ್ಲಿ ಆದ ಕೆಲವು ಬದಲಾವಣೆಗಳು. ಅತಿಥಿಗಳ ಲಿಸ್ಟ್ ಕಡಿಮೆಗೊಳಿಸಿದ್ದು, ಕೊನೆಯ ನಿಮಿಷದಲ್ಲಿ ಆಭರಣಗಳನ್ನು ಧರಿಸಲು ಸಹಾಯ ಮಾಡಿದ್ದು, ಫೋಟೋಗ್ರಾಫರ್ಸ್ ಟೀಂ ಮತ್ತು ಕೆಳಗೆ ಇಳಿಯಲು ಸಾಧ್ಯವಾಗದಂತಹ ಹೋಸ್ಟ್‍ಗಳು, ಲಾಜಿಸ್ಟಿಕ್ ಸಮಸ್ಯೆಗಳು. ಆದರೂ ಈ ಎಲ್ಲ ಸಮಸ್ಯೆಗಳ ಮಧ್ಯೆ ನಮ್ಮ ಮದುವೆಯ ವೀಡಿಯೋವನ್ನು ಹಿಂತಿರುಗಿ ನೋಡಿದಾಗ ಮದುವೆಯಲ್ಲಿನ ಸರಳತೆಯನ್ನು ಇಬ್ಬರು ಪ್ರೀತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿವೆ ಮಾದಕ ನಟಿ ಸನ್ನಿ ಲಿಯೋನ್ ಅಭಿಮಾನಿ ಸಂಘ: ತಮಾಷೆಯಲ್ಲ, ನಿಜ
View this post on Instagram
ಮೂಲತಃ ಬೆಂಗಳೂರು ನಿವಾಸಿಯಾಗಿರುವ ಪ್ರಣಿತಾ ಪತಿ ನಿತಿನ್, ಮಾಲ್‍ವೊಂದರ ಓನರ್ ಆಗಿದ್ದಾರೆ. ಪ್ರಣಿತಾ ಅವರು ಕನ್ನಡದಲ್ಲಿ ಪೋರ್ಕಿ, ಜರಾಸಂಧ, ಸ್ನೇಹಿತರು, ಅಂಗಾರಕ, ಮಾಸ್ ಲೀಡರ್, ಸೆಕೆಂಡ್ ಹ್ಯಾಂಡ್ ಲವರ್ ಹೀಗೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.