ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬವನ್ನು ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ವಿಶೇಷವಾಗಿ ಆಚರಿಸಿದ್ದಾರೆ. ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರಲ್ಲೂ ಒಟ್ಟಾಗಿ ಜೇಮ್ಸ್ ಜಾತ್ರೆ ಮತ್ತು ಅಪ್ಪು ಹುಟ್ಟುವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಮಾರ್ಚ್ 19 ರಂದು ನ್ಯೂಜೆರ್ಸಿ ನಾರ್ಥ್ ಬ್ರನ್ಸ್ವಿಕ್ ಉದ್ಯಾನವನದಲ್ಲಿ ಜರುಗಿದ ಅಪ್ಪು ಅಭಿಮಾನಿ ಸಂಘದ ಈ ಕಾರ್ಯಕ್ರಮಕ್ಕೆ ಪುನೀತ್ ಅವರ ಹಿರಿಯ ಪುತ್ರ ದ್ರಿತಿ ಮುಖ್ಯ ಅಥಿಯಾಗಿ ಆಗಮಿಸಿದ್ದರು. ದೀಪ ಬೆಳಗುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಮೆರಿಕಾದ ನಾನಾ ಭಾಗಗಳಿಂದ ಈ ಕಾರ್ಯಕ್ರಮಕ್ಕೆ ಅಪ್ಪು ಅಭಿಮಾನಿಗಳು ಆಗಮಿಸಿದ್ದರು. ಇದನ್ನೂ ಓದಿ : ಕನ್ನಡದ ‘ದಸರಾ’ ವರ್ಸಸ್ ತೆಲುಗಿನ ‘ದಸರಾ’: ಯಾರಿಗೆ ಸಿಗತ್ತೆ ದಸರಾ ಟೈಟಲ್?
ಅಪ್ಪು ಅವರ ಭಾವಚಿತ್ರ, ಅವರ ಹಾಡಿಗೆ ಅಲ್ಲಿನ ಮಕ್ಕಳ ನೃತ್ಯ ಮಾಡಿದರು. ನಾಗೇಶ್ ಕೆಂಪಯ್ಯನವರ ನೇತೃತ್ವದಲ್ಲಿ ಡೊಳ್ಳು ವಾದ್ಯ, ಹಲವು ಬಗೆಯ ಜಾನಪದ ಕುಣಿತ ಹೀಗೇ ಊರಿಗೆ ಹಬ್ಬ, ಜಾತ್ರೆಗಳಂತೆಯೇ ಹುಟ್ಟು ಹಬ್ಬವನ್ನು ಸಡಗರದಿಂದ ಅಲ್ಲಿನ ಅಭಿಮಾನಿಗಳು ಆಚರಿಸಿದರು.
ಅಪ್ಪು ಅಮೆರಿಕಾಗೆ ಹೋದಾಗಲೆಲ್ಲ ಹಲವರನ್ನು ಭೇಟಿ ಮಾಡುತ್ತಿದ್ದರು. ಅಲ್ಲದೇ, ಮೊರ್ಗನ್ವಿಲ್ಲೆಯಲ್ಲಿರುವ ಕೃಷ್ಣ ದೇವಸ್ಥಾನದಲ್ಲಿ ಕೊಡುವ ಬಾದುಷಾ ಅಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಅಪ್ಪು ಅಮೆರಿಕಾಗೆ ಬಂದಿದ್ದಾರೆ ಅಂದರೆ, ದೇವಸ್ಥಾನದ ರಂಗಾ ಭಟ್ಟರು ಬಾದುಷಾ ಮಾಡಿ ಕೊಡುತ್ತಿದ್ದರು. ಹಾಗಾಗಿ ಈ ಹುಟ್ಟು ಹಬ್ಬದಂದು ರಂಗಾ ಭಟ್ಟರು ಬಾದುಷಾ ಮಾಡಿ ಕಳುಹಿಸಿದ್ದರು. ಅದೇ ತಿಂಡಿಯನ್ನೇ ಅಲ್ಲಿ ಎಲ್ಲರಿಗೂ ಹಂಚಲಾಯಿತು. ಇದನ್ನೂ ಓದಿ : ಸುದೀಪ್, ಉಪ್ಪಿ ಕಾಂಬಿನೇಷನ್ ‘ಕಬ್ಜ’ ಚಿತ್ರಕ್ಕೆ ಇಬ್ಬರು ದಕ್ಷಿಣ ತಾರೆಯರ ಎಂಟ್ರಿ
ನಂತರ ನೂರೈವತ್ತಕ್ಕೂ ಹೆಚ್ಚು ಕಾರುಗಳ ಮೆರವಣಿಗೆ ಕೂಡ ನಡೆಯಿತು. ರಸ್ತೆಯುದ್ದಕ್ಕೂ ಕಾರು ಚಲಾಯಿಸಿಕೊಂಡು ಅಪ್ಪುಗೆ ಗೌರವ ಸೂಚಿಸಿದರು. ಕೇವಲ ಅಮೆರಿಕಾದಲ್ಲಿರುವ ಭಾರತೀಯರು ಮಾತ್ರ ವಲ್ಲ, ಅಮೆರಿಕಾ ಪ್ರಜೆಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.