ಉಬರ್ ಚಾಲಕರಾದ ಅಫ್ಘಾನ್ ಮಾಜಿ ಹಣಕಾಸು ಸಚಿವ

Public TV
1 Min Read
khalid payenda

ವಾಷಿಂಗ್ಟನ್‍: ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈವಶವಾಗಿದೆ. ಈ ವೇಳೆ ಅಲ್ಲಿದ್ದ ಅನೇಕ ಮಂದಿ ಬೇರೆಕಡೆ ವಲಸೆ ಹೋಗಿದ್ದಾರೆ. ಅಫ್ಘಾನ್ ಮಾಜಿ ಹಣಕಾಸು ಸಚಿವ ಖಲೀದ್ ಪಾಯೆಂಡಾ ಜೀವನೋಪಾಯಕ್ಕಾಗಿ, ಅಮೆರಿಕದಲ್ಲಿ ಉಬರ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೂ ಮೊದಲಿದ್ದ ಅಶ್ರಫ್ ಘನಿ ಸರ್ಕಾರದಲ್ಲಿ ಆರ್ಥಿಕ ಇಲಾಖೆ ಸಚಿವರಾಗಿದ್ದ, ಖಲೀದ್ ಪಾಯೆಂಡಾ ಈಗ ವಾಷಿಂಗ್ಟನ್‍ನಲ್ಲಿ ಉಬರ್ ಓಡಿಸುತ್ತಿದ್ದಾರೆ.

ಅಧಿಕಾರಕ್ಕೆ ರಾಜೀನಾಮೆ ಕೊಟ್ಟು ವಲಸೆ: ಅಫ್ಘಾನ್‍ನಲ್ಲಿ ತಾಲಿಬಾನ್ ಉಗ್ರರ ಆಡಳಿತ ಬರುತ್ತಿದ್ದಂತೆ ರಾಜೀನಾಮೆ ನೀಡಿದ ಅವರು ಕುಟುಂಬದೊಂದಿಗೆ ವಾಷಿಂಗ್ಟನ್ ಡಿಸಿಗೆ ತೆರಳಿದ್ದರು. ಈಗ ಜೀವನೋಪಾಯಕ್ಕಾಗಿ ಉಬರ್ ವಾಹನ ಓಡಿಸಿ ಹಣಗಳಿಕೆ ಮಾಡುತ್ತಿದ್ದಾರೆ. ಜಾರ್ಜ್‍ಟೌನ್ ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: 133 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ

ಅಫ್ಘಾನ್‍ನಿಂದ ಅಮೆರಿಕಾಗೆ ವಲಸೆ: ಖಲೀದ್ ಪಾಯೆಂಡಾ ಅಫ್ಘಾನ್‍ನಿಂದ ಪತ್ನಿ, ನಾಲ್ವರು ಮಕ್ಕಳೊಂದಿಗೆ ಯುಎಸ್‍ಗೆ ಪರಾರಿಯಾಗಿದ್ದರು. ಸುಮ್ಮನೆ ಕುಳಿತರೆ ಕೂಡಿಟ್ಟ ಹಣ ಎಷ್ಟು ದಿನ ಬರುತ್ತದೆ ಎಂದು ಕೆಲಸ ಹುಡುಕಲು ಪ್ರಾರಂಭಿಸಿದರು. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾದರೂ ಕೂಡ ಅದು ಪರ್ಮನೆಂಟ್ ಕೆಲಸವಲ್ಲ. ಬರೀ ಅದೊಂದೇ ಕೆಲಸಕ್ಕೆ ನೀಡುವ ಸಂಬಳವೂ ಸಾಕಾಗುವುದಿಲ್ಲ. ಹೀಗಾಗಿ ಉಬರ್ ಚಾಲನೆ ಕೆಲಸವನ್ನೂ ಶುರು ಮಾಡಿದರು. ಈ ಬಗ್ಗೆ ನನಗೆ ಸ್ವಲ್ಪವೂ ಬೇಸರವಿಲ್ಲ. ಇಷ್ಟಾದರೂ ಕೆಲಸ ಸಿಕ್ಕಿ, ಜೀವನೋಪಾಯಕ್ಕೆ ಅನುಕೂಲವಾಯಿತಲ್ಲ. ನಾನಿನ್ನು ಹತಾಶನಾಗಬೇಕಿಲ್ಲ ಎಂದು ಖಾಸಗಿವಾಹಿನಿಯೊಂದಕ್ಕೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಶ್ಯಾಮನೂರು ಶಿವಶಂಕರಪ್ಪನವರದ್ದು ಎಷ್ಟನೇ ಬಣ – ಸಿದ್ದುಗೆ ಬಿಜೆಪಿ ಪ್ರಶ್ನೆ

ನಾನು ಅಮೆರಿಕ, ಅಫ್ಘಾನಿಸ್ತಾನಕ್ಕೆ ಸೇರಿದವನೂ ಅಲ್ಲ: ಬೇಸರ ಇದ್ದೇ ಇದೆ. ನನಗೆ ನನ್ನದೇ ಆದ ಜಾಗವಿಲ್ಲ. ನಾನು ಅಮೆರಿಕದವನಲ್ಲ. ಅಫ್ಘಾನಿಸ್ತಾನಕ್ಕೆ ಸೇರಿದವನೂ ಅಲ್ಲ. ಹೀಗಾಗಿ ಖಾಲಿತನ ಭಾವನೆ ಹುಟ್ಟುತ್ತದೆ. ಹಾಗಂತ ಯಾರನ್ನೂ ದೂಷಿಸಲು ಸಾಧ್ಯವಿಲ್ಲ. ಈ ಪರಿಸ್ಥಿತಿಗಾಗಿ ನಾನು ನನ್ನನ್ನೂ ದ್ವೇಷ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *