ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿವೆ ಡೇಂಜರಸ್ ಫ್ಲೈಓವರ್‌ಗಳು

Public TV
1 Min Read
Flyover Electronic City

ಆನೇಕಲ್: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿನ ಫ್ಲೈಓವರ್‌ಗಳು ದಿನೇ ದಿನೇ ಒಂದೊಂದಾಗಿಯೇ ಹದಗೆಡುತ್ತಿದ್ದು, ಮಹಾ ದುರಂತಕ್ಕೆ ಸಾಕ್ಷಿಯಾಗಲಿದೆಯಾ ಎನ್ನುವಂತೆ ಪ್ರಶ್ನೆ ಮೂಡಿದೆ. ಪ್ರತಿಷ್ಠಿತ ಎಲೆಕ್ಟ್ರಾನಿಕ್ ಸಿಟಿಯ ಎಲಿವೇಟೆಡ್ ಫ್ಲೈಓವರ್‌ ನ ಮಧ್ಯೆ ಭಾಗದಲ್ಲಿನ ಲೇಬೇ ಬಳಿ ತಡೆಗೋಡೆ ಬಿರುಕು ಬಿಟ್ಟು ತಿಂಗಳುಗಳೇ ಕಳೆದರು ಅದನ್ನು ಸರಿಪಡಿಸದೆ ತ್ಯಾಪೆ ಹಚ್ಚುವ ಕೆಲಸ ಮಾಡಿ ಬಿಇಟಿಪಿಎಲ್ ಅಧಿಕಾರಿಗಳು ಬೇಜವಾಬ್ದಾರಿ ತೋರಿಸಿದ್ದಾರೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

Electronic City Elevated Expressway - Wikipedia

ಎಲೆಕ್ಟ್ರಾನಿಕ್ ಸಿಟಿಯಿಂದ ಸಿಲ್ಕ್ ಬೋರ್ಡ್‍ವರೆಗೆ ಈ ಫ್ಲೈಓವರ್ ಇದ್ದು, ಸುಮಾರು ಕಿಲೋಮೀಟರ್ ಉದ್ದದ ಫ್ಲೈಓವರ್ ಇದಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಎಲಿವೇಟೆಡ್ ಫ್ಲೈಓವರ್ ಮೇಲೆ ಹಣ ಪಾವತಿಸಿ ಸಂಚರಿಸುತ್ತಿದ್ದು, ಕೋಟ್ಯಾಂತರ ರೂಪಾಯಿ ಆದಾಯ ಬರುತ್ತಿದೆ. ಕಳೆದ ಕೆಲ ತಿಂಗಳುಗಳ ಹಿಂದೆ ಲೇಬೇ ಬಳಿ ಇದ್ದ ದ್ವಿಚಕ್ರ ವಾಹನ ಸವಾರರಿಗೆ ಕಾರೊಂದು ಡಿಕ್ಕಿಯಾಗಿ ಫ್ಲೈಓವರ್ ಮೇಲಿಂದ ಬಿದ್ದು ಯುವಕ, ಯುವತಿ ಸಾವನ್ನಪ್ಪಿದ್ದರು. ಇದನ್ನೂ ಓದಿ: ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ

ಆಗ ಬಿರುಕು ಬಿಟ್ಟಿದ್ದ ತಡೆಗೋಡೆಯನ್ನ ಸರಿಪಡಿಸಬೇಕಾದ ಬಿಇಟಿಪಿಎಲ್ ಅಧಿಕಾರಿಗಳು ಒಂದು ಬ್ಯಾರಿಕೇಡ್ ಅಡ್ಡಲಾಗಿ ಇಟ್ಟು ಕೈತೊಳೆದುಕೊಂಡಿದೆ. ಇದರಿಂದ ತಡೆಗೋಡೆ ಬೀಳುವ ಹಂತದಲ್ಲಿದ್ದು, ವಾಹನ ಸವಾರರು ಆತಂಕದಲ್ಲಿಯೇ ಸಂಚರಿಸುತ್ತ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೆ ಬೆಳಗ್ಗೆ ಸಮಯದಲ್ಲಿ ಲೇಬೇ ಬಳಿ ಸಂಚಾರಿ ಪೊಲೀಸರು ಅತಿವೇಗವಾಗಿ ಬರುವ ವಾಹನಗಳನ್ನ ತಡೆದು ದಂಡ ವಸೂಲಿ ಮಾಡುತ್ತಾರೆ.

Caught on camera: Two people die after speeding car tosses them off flyover in Bengaluru | Karnataka News | Zee News

ರಾತ್ರಿಯಾಗುತ್ತಿದ್ದಂತೆ ಇದೇ ಲೇಬೇ ಮೇಲೆ ಎಣ್ಣೆ ಪಾರ್ಟಿ ಸೇರಿದಂತೆ ಇನ್ನಿತರೆ ಅನೈತಿಕ ಚಟುವಟಿಕೆಗಳು ಶುರುವಾಗುತ್ತವೆ. ಇದಕ್ಕೆ ಕಡಿವಾಣ ಹಾಕಬೇಕಾದ ಸಂಚಾರಿ ಪೊಲೀಸರು ಸಹ ತಲೆಕೆಡಿಸಿಕೊಳ್ಳುತ್ತಿಲ್ಲ. ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಮೇಲೆ ಮತ್ತೊಂದು ದೊಡ್ಡ ದುರಂತಕ್ಕೆ ಸಾಕ್ಷಿಯಾಗುವ ಮುನ್ನ ಕೂಡಲೇ ತಡೆಗೋಡೆಯನ್ನ ಸರಿಪಡಿಸಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಬೇಕು ಎನ್ನುವುದು ವಾಹನ ಸವಾರರ ಮಾತಾಗಿದೆ. ಇದನ್ನೂ ಓದಿ: ‘ದಿ ಕಾಶ್ಮೀರ್‌ ಫೈಲ್ಸ್’ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸಹಾಯ ಮಾಡುವುದಿಲ್ಲ: ಸಂಜಯ್ ರಾವತ್

Share This Article
Leave a Comment

Leave a Reply

Your email address will not be published. Required fields are marked *