4 ರಾಜ್ಯ ಗೆದ್ದರೂ ಬಿಜೆಪಿ ಇನ್ನೂ ಸರ್ಕಾರ ಮಾಡಿಲ್ಲ: ಕೇಜ್ರಿವಾಲ್‌

Public TV
1 Min Read
bhagwant mann 3

ಚಂಡೀಗಢ: ಇತ್ತೀಚೆಗಷ್ಟೇ ನಡೆದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ 4 ರಾಜ್ಯಗಳನ್ನು ಬಿಜೆಪಿ ಗೆದ್ದಿದ್ದರೂ ಪಕ್ಷದಲ್ಲಿನ ಆಂತರಿಕ ಕಲಹದಿಂದಾಗಿ ಸರ್ಕಾರ ರಚಿಸಲು ಸಾಧ್ಯವಾಗುತ್ತಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ವಿಧಾನಸಭೆಯಲ್ಲಿ ಆಪ್ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ ಮತ್ತು ಸಮಯ ವ್ಯರ್ಥ ಮಾಡದೆ ಸರ್ಕಾರವನ್ನು ರಚಿಸಲಾಗಿದೆ. ಈಗಾಗಲೇ ಈ ಸರ್ಕಾರವು ಪಂಜಾಬ್‍ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಹೇಳಿದರು.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತಮ್ಮ ಸಂಪುಟದ ಪ್ರತಿಯೊಬ್ಬ ಸಚಿವರಿಗೂ ಗುರಿಯನ್ನು ನಿಗದಿಪಡಿಸಿದ್ದಾರೆ. ಅದನ್ನು ಅವರು ಪೂರೈಸದಿದ್ದರೇ ಜನರು ತೆಗೆದುಹಾಕುವಂತೆ ಒತ್ತಾಯಿಸಬಹುದು. ಪಂಜಾಬ್ ಜನತೆ ವಜ್ರವನ್ನು ಆಯ್ಕೆ ಮಾಡಿದ್ದಾರೆ. ಭಗವಂತ್ ಮಾನ್ ನೇತೃತ್ವದ ಸಚಿವ ಸಂಪುಟದಲ್ಲಿ 92 ಜನರು ಕೆಲಸ ಮಾಡಬೇಕಾಗಿದೆ ಎಂದ ಅವರು, ಶಾಸಕರು ಜನರ ಮಧ್ಯೆ ಓಡಾಡುತ್ತಾರೆ. ಹಳ್ಳಿಗಳಿಗೆ ಹೋಗುತ್ತಾರೆ ಎನ್ನುವುದು ಪಕ್ಷದ ಮಂತ್ರವಾಗಿದೆ ಎಂದರು.

ARAVINDH KEJIRIWAL

ಭಗವಂತ್‍ಮಾನ್ ಅವರು ಈಗಾಗಲೇ ಹಳೆಯ ಮುಖ್ಯಮಂತ್ರಿಗಳ ಭದ್ರತೆಯನ್ನು ತೆಗೆದು ಹಾಕಿದ್ದಾರೆ. ಜೊತೆಗೆ ಸಾರ್ವಜನಿಕರಿಗೆ ಭದ್ರತೆಯನ್ನು ನೀಡಿದ್ದಾರೆ ಎಂದ ಅವರು, ಶಾಸಕರು ಸಮಯಪಾಲನೆ ಮಾಡುವ ಜೊತೆಗೆ ತಮ್ಮ ಕ್ಷೇತ್ರದ ಪ್ರತಿ ಪಟ್ಟಣದಲ್ಲೂ ಕಚೇರಿಯನ್ನು ತೆರೆಯಬೇಕು. ಅವರು ದಿನದ 18 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡೋದು ಬಿಡೋದು ಕಾಂಗ್ರೆಸ್ ಇಷ್ಟ: ಮಾಧುಸ್ವಾಮಿ

bhagwant mann cm

ದೆಹಲಿಯಲ್ಲಿ ನಾನು ಗಮನಿಸುತ್ತಿದ್ದೇನೆ. ಪ್ರತಿಯೊಬ್ಬ ಶಾಸಕ ಮತ್ತು ಸಚಿವರ ಬಗ್ಗೆ ಜನರು ಏನು ಹೇಳುತ್ತಿದ್ದಾರೆಂದು ತಿಳಿದುಕೊಳ್ಳಲು ಸಮೀಕ್ಷೆ ಮಾಡಿದ್ದೇವೆ. 20-22 ಶಾಸಕರ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿದೆ. ಇದರಿಂದಾಗಿ ಅವರಿಗೆ ಟಿಕೆಟ್ ರದ್ದುಗೊಳಿಸಿ ಇತರರಿಗೆ ನೀಡಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ‘ದಿ ಕಾಶ್ಮೀರ್‌ ಫೈಲ್ಸ್’ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸಹಾಯ ಮಾಡುವುದಿಲ್ಲ: ಸಂಜಯ್ ರಾವತ್

Share This Article
Leave a Comment

Leave a Reply

Your email address will not be published. Required fields are marked *