ನೆಲಮಂಗಲ: ಕಳೆದ ನಾಲ್ಕು ದಿನಗಳಿಂದ ವ್ಯಕ್ತಿಯೊಬ್ಬರು ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿದ್ದ ವರದಿ ಪಬ್ಲಿಕ್ ಟಿಯಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಅಂಗನವಾಡಿ ಕೇಂದ್ರಕ್ಕೆ ಹಾಕಿದ್ದ ಬೀಗ ಓಪನ್ ಮಾಡಿದ್ದಾರೆ.

ಐದು ದಿನಗಳಿಂದ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿದ ಹಿನ್ನೆಲೆಯಲ್ಲಿ ಪುಟಾಣಿಗಳು ಕಂಗಾಲಾಗಿದ್ದರು. ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹುಟ್ಟೂರಿನಲ್ಲಿ ನಡೆದಿರುವ ಘಟನೆಯಾಗಿತ್ತು. ವರದಿಯಾಗುತಿದಂತೆ ಅಂಗನವಾಡಿಗೆ ಹಾಕಿದ್ದ ಬೀಗ ಓಪನ್ ಮಾಡಲಾಗಿದೆ. ಈ ಬಗ್ಗೆ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಓಪನ್ ಮಾಡಿಸಿದ್ದಾರೆ. ಅಂಗನವಾಡಿ ಓಪನ್‍ನಿಂದ ಪಬ್ಲಿಕ್ ಟಿವಿಯ ವರದಿಗೆ ಗ್ರಾಮಸ್ಥರು ಅಭಿನಂದನೆ ತಿಳಿಸಿದ್ದಾರೆ. ಇದನ್ನೂ ಓದಿ: ವಾಯುಭಾರ ಕುಸಿತದಿಂದ ಬಂಗಾಳಕೊಲ್ಲಿಯಲ್ಲಿ ‘ಅಸನಿ’ ಚಂಡಮಾರುತ


