ಏನಾದರೂ ಅವಘಡ ಸಂಭವಿಸಿದಾಗ ಬಿಜೆಪಿ ಸೇವೆಯಲ್ಲಿ ಮುಂಚೂಣಿಯಲ್ಲಿ ಇರುತ್ತದೆ : ಆರ್.ಅಶೋಕ್

Public TV
2 Min Read
R Ashoka 1

ಬೆಂಗಳೂರು: ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ. ತತ್ವ ಸಿದ್ದಾಂತ ಮತ್ತು ಸೇವೆಯ ತಳಹದಿಯಿಂದ ರಾಜಕೀಯವಾಗಿ ಬೆಳೆದು ಬಂದ ಪಕ್ಷವಾಗಿದೆ. ಇತ್ತೀಚೆಗೆ ಉಕ್ರೇನ್ ಘಟನೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ತೆಗೆದುಕೊಂಡ ದಿಟ್ಟ ನಿರ್ಧಾರದಿಂದ 15,000ಕ್ಕಿಂತಲೂ ಹೆಚ್ಚು ಭಾರತೀಯ ರಕ್ಷಣೆ ಮಾಡಲು ಸಾಧ್ಯವಾಯಿತು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಶಿಕ್ಷಣ ವರ್ಗದ ಉದ್ಘಾಟನಾ ಭಾಷಣ ಮಾಡಿದ ಅವರು, ಅತಿವೃಷ್ಟಿಯ ಸಂದರ್ಭದಲ್ಲಿ, ಏನಾದರೂ ಅವಘಡ ಸಂಭವಿಸಿದಾಗ ಬಿಜೆಪಿ ಸೇವೆಯಲ್ಲಿ ಮುಂಚೂಣಿಯಲ್ಲಿ ಇರುತ್ತದೆ. ಇಂದು ಭಾರತದ ಮಾತಿಗೆ ವಿಶ್ವದಲ್ಲಿಯೇ ಮನ್ನಣೆ ಇದೆ. ಅದಕ್ಕೆ ಕಾರಣ ಮಾನ್ಯ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಕಾರಣ. ಭಾರತ ವಿಶ್ವಗುರುವಾಗುವತ್ತ ಮುನ್ನುಗ್ಗುತ್ತಿದೆ. ಪ್ರಪಂಚವೇ ಭಾರತದತ್ತ ಹೆಮ್ಮೆ, ಗೌರವದಿಂದ ನೋಡುತ್ತಿದೆ. ಅದಕ್ಕೆ ಕಾರಣ ಪಕ್ಷದ ಸಿದ್ದಾಂತ ಮತ್ತು ಮೋದಿಯವರ ಜನಪರ ನಿಲುವು, ದಿಟ್ಟ ನಿರ್ಧಾರಗಳೇ ಕಾರಣ. ಇದನ್ನೂ ಓದಿ: ಕನ್ನಡದಲ್ಲೂ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

R Ashoka 1 1

ರಾಜ್ಯದ ಬಿಜೆಪಿ ಸರ್ಕಾರವೂ ಸಹ ಜನಸ್ನೇಹಿ ನಿರ್ಧಾರಗಳಿಂದ ಜನರ ಪ್ರೀತಿ ವಿಶ್ವಾಸಗಳಿಸಿದೆ. ಸೌಲಭ್ಯಗಳನ್ನು ಸಾಮಾನ್ಯ ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಮುಂಚೂಣಿಯಲ್ಲಿದೆ. ಬಿಜೆಪಿ ಜನಸಾಮಾನ್ಯರ ಪಕ್ಷ. ಸಾಮಾನ್ಯ ಕಾರ್ಯಕರ್ತನೂ ಪಕ್ಷದಲ್ಲಿ ಅತ್ಯಂತ ಎತ್ತರದ ಸ್ಥಾನ ಏರುವದಕ್ಕೆ ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಪಕ್ಷದಲ್ಲಿ ಸೇವೆ ಸಲ್ಲಿಸಿದವರಿಗೆ ಮನ್ನಣೆ ನೀಡುವ ಏಕೈಕ ಪಕ್ಷ ಬಿಜೆಪಿ. ಹಾಗಾಗಿಯೇ ನಿಯಮಿತವಾಗಿ ಕಾರ್ಯಕರ್ತರೊಂದಿಗೆ ಸಂವಹನ ನಡೆಸುತ್ತೇವೆ, ನಿಕಟ ಸಂಪರ್ಕ ಇರುತ್ತದೆ. ಕಾರ್ಯಕರ್ತರು ತ್ಯಾಗ ಮನೋಭಾವದಿಂದ ಕೆಲಸ ಮಾಡಿದರೆ ಪಕ್ಷವೂ ಬೆಳೆಯುತ್ತದೆ, ಉನ್ನತ ಸ್ಥಾನಮಾನವೂ ಸಿಗುತ್ತದೆ. ಬಿಜೆಪಿಗೆ ಕಾರ್ಯಕರ್ತರೆ ಆಸ್ತಿ ಎಂದಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಸಮಯದಲ್ಲೇ ಉಪಚುನಾವಣೆ ಯಾಕೆ – ಆಯೋಗದ ವಿರುದ್ಧ ಮಮತಾ ಕಿಡಿ

ಕಾಂಗ್ರೆಸ್ ಸೇರಿದಂತೆ ಉಳಿದ ಪಕ್ಷಗಳಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾರ್ಯಕರ್ತರು ನೆನಪಾಗುತ್ತಾರೆ. ಚುನಾವಣೆ ಮುಗಿದ ಮೇಲೆ ಕಾರ್ಯಕರ್ತರು ನೆನಪಿಗೆ ಇರುವುದಿಲ್ಲ. ನಾಯಕರು ಸರಿಯಾದ ಮಾರ್ಗದರ್ಶನ ನೀಡುವುದಿಲ್ಲ. ಅದರ ಪರಿಣಾಮವನ್ನು ನಾವೆಲ್ಲ ನೋಡುತ್ತಿದ್ದೇವೆ. ಅದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ. ನಾವೆಲ್ಲ ಸೇರಿ ಪಕ್ಷ ಕಟ್ಟೋಣ. ಜನಸೇವೆ, ದೀನದಲಿತರ ಸೇವೆ ಮಾಡೋಣ ಎಂದು ಹೇಳಿದರು. ಇದನ್ನೂ ಓದಿ: ರೊಲ್ಸ್ ರಾಯಲ್ಸ್‌ಗಾಗಿ ಮತ್ತೊಂದು ವಿವಾದಕ್ಕೆ ಸಿಲುಕಿದ ವಿಜಯ್ ದಳಪತಿ

Share This Article
Leave a Comment

Leave a Reply

Your email address will not be published. Required fields are marked *