ಅಪ್ಪು ಹುಟ್ಟು ಹಬ್ಬಕ್ಕೆ ನೇತ್ರದಾನದ ವಾಗ್ದಾನ

Public TV
1 Min Read
ckb fans

ಚಿಕ್ಕಬಳ್ಳಾಪುರ: ನಟ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬವೂ ಇರುವುದರಿಂದ ಅಪ್ಪು ಅಗಲಿಕೆಯ ನೋವಿನ ನಡುವೆಯೂ ಅಭಿಮಾನಿಗಳಿಗೆ ಡಬಲ್ ಖುಷಿ ತಂದಿದೆ. ಹಾಗಾಗಿ ರಾಜ್ಯಾದ್ಯಂತ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ನಾನಾ ರೀತಿಯಲ್ಲಿ ಆಚರಿಸಲು ಅಭಿಮಾನಿಗಳು ಸಿದ್ಧರಾಗಿದ್ದಾರೆ. ಜೇಮ್ಸ್ ಸಿನಿಮಾ ನೋಡುವುದರ ಜತೆಗೆ ಸಮಾಜಮುಖಿ ಕೆಲಸಗಳಿಗೂ ನಾಳೆ ಪುನೀತ್ ಅಭಿಮಾನಿಗಳು ಮುಂದಾಗುತ್ತಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಒತ್ತಾಯದ ಮೇರೆಗೆ ವಿಷ್ಣುದಾದ ಇತಿಹಾಸ ಬರೆದ ಮೂವೀ ರೀ-ರಿಲೀಸ್ 

ckb netradana

ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದ ವಾಣಿ ಹಾಗೂ ಬಾಲಾಜಿ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಸಿನಿಮಾ ವೀಕ್ಷಿಸುವುದರ ಜತೆ ಜತೆಗೆ ಅನ್ನದಾನ ಹಾಗೂ ನೇತ್ರದಾನ ನೋಂದಣಿಗೆ ಅವಕಾಶ ಕಲ್ಪಿಸಿದ್ದಾರೆ. ಪುನೀತ್ ಅವರ ನಿಧನಾ ನಂತರ ದಾಖಲೆಯ ರೀತಿಯಲ್ಲಿ ಅಭಿಮಾನಿಗಳು ನೇತ್ರದಾನ ಮಾಡಿದ್ದಾರೆ. ಹೀಗಾಗಿ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಇಂತಹ ಪುಣ್ಯದ ಕೆಲಸಕ್ಕೆ ಅಪ್ಪು ಅಭಿಮಾನಿಗಳಾಗಿ ನಾವೂ ಕೈ ಜೋಡಿಸುತ್ತಿದ್ದೇವೆ ಎಂದಿದ್ದಾರೆ ಚಿಕ್ಕ ಬಳ್ಳಾಪುರದ ಪುನೀತ್ ಅಭಿಮಾನಿಗಳು. ಇದನ್ನೂ ಓದಿ: ಭದ್ರತಾ ಲೋಪ – ದೆಹಲಿ ಕ್ಯಾಪಿಟಲ್ಸ್ ತಂಡದ ಬಸ್ ಮೇಲೆ ದಾಳಿ

WhatsApp Image 2022 03 16 at 3.54.04 PM

ಜೇಮ್ಸ್ ಚಿತ್ರ ಬಿಡುಗಡೆ ಆಗುತ್ತಿರುವ ನಗರದ ವಾಣಿ ಹಾಗೂ ಬಾಲಾಜಿ ಚಿತ್ರಮಂದಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಆ ಕಾರಣದಿಂದಾಗಿಯೇ ಥಿಯೇಟರ್ ಆವರಣದಲ್ಲಿಯೇ ವ್ಯವಸ್ಥೆ ಮಾಡಿದ್ದಾರಂತೆ ಅಪ್ಪು ಅಭಿಮಾನಿಗಳು. ಈಗಾಗಲೇ ಬೃಹತ್ ಗಾತ್ರದ ಪುನೀತ್ ಕಟೌಟ್ ಹಾಗೂ ಬ್ಯಾನರ್‍ಗಳು ಚಿತ್ರಮಂದಿರದ ಮುಂದೆ ರಾರಾಜಿಸುತ್ತಿವೆ. ನಾಳೆಯ ದಿನ ಅಪ್ಪು ಹಬ್ಬ ಎಂದೇ ಆಚರಿಸುತ್ತಿದ್ದೇವೆ ಅಂತಾರೆ ಅಲ್ಲಿನ ಅಭಿಮಾನಿಗಳು. ಹುಟ್ಟು ಹಬ್ಬವನ್ನು ಆಚರಿಸುತ್ತಲೇ ಜೇಮ್ಸ್‍ವನ್ನು ನಾಳೆ ಬರಮಾಡಿಕೊಳ್ಳಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *