ಚಿನ್ನದ ನಾಡಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರಾ ಸಿದ್ದರಾಮಯ್ಯ..?

Public TV
2 Min Read
SIDDARAMAIAH

ಕೋಲಾರ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ. ಇದು 3 ಪಕ್ಷದವರನ್ನು ಕಾಡುತ್ತಿದ್ದು, ಆ ಎಲ್ಲಾ ಪ್ರಶ್ನೆಳಿಗೆ ಸದ್ಯ ಉತ್ತರ ಸಿಕ್ಕಿದೆ.

KOLAR 1

ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸ್ತಾರಾ..? ಸ್ಪರ್ಧಿಸಿದ್ರೆ ಯಾವ ಕ್ಷೇತ್ರದಿಂದ ಕಣಕ್ಕಿಳೀತಾರೆ ಅನ್ನೋ ಹಲವು ಪ್ರಶ್ನೆಗಳು ಕಾಡುತ್ತಲೇ ಇದೆ. ಕಳೆದ ಬಾರಿ ಬದಾಮಿ ಕ್ಷೇತ್ರದಿಂದ ಪ್ರಯಾಸದ ಗೆಲುವು ಸಾಧಿಸಿದ್ದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರ, ಹುಣಸೂರು, ಚಾಮರಾಜನಗರ ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಈ ಮಧ್ಯೆ ಸಿದ್ದು ಚಿನ್ನದ ನಾಡಿನ ಮೇಲೆ ಕಣ್ಣಿಟ್ಟಿರೋದು ಗೊತ್ತಾಗಿದೆ.

Siddaramaiah 5 1

ಹೌದು. ಈ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ, ಚಿನ್ನದ ನಾಡು ಕೋಲಾರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುವ ಸಾಧ್ಯತೆ ಇದೆ. ಇದಕ್ಕೆ ಪೂರಕ ಎಂಬಂತೆ ಈಗಾಗಲೇ ಕೋಲಾರ ಜಿಲ್ಲೆಯ ಶಾಸಕರುಗಳು ಸಿದ್ದು ಜೊತೆಗೆ 2-3 ಸುತ್ತಿನ ಮಾತುಕತೆ ಮುಗಿಸಿದ್ದು, ಸಿದ್ದರಾಮಯ್ಯ ಕೂಡಾ ಬಹುತೇಕ ಒಮ್ಮತ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕೋಲಾರ ಕ್ಷೇತ್ರ ಸಿದ್ದು ಗೆಲುವಿಗೆ ಹೇಳಿ ಮಾಡಿಸಿದ ಕ್ಷೇತ್ರ. ಯಾಕಂದ್ರೆ ಹೆಚ್ಚಾಗಿ ಕುರುಬ ಸಮುದಾಯ, ಅಸ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮತಗಳಿರುವ ಕ್ಷೇತ್ರ ಜೊತೆಗೆ ಸಿದ್ದು ಸಿಎಂ ಆಗಿದ್ದ ಅವಧಿಯಲ್ಲಿ ಕೆ.ಸಿ.ವ್ಯಾಲಿ ಯೋಜನೆ ಅವ್ರ ಕೈ ಹಿಡಿಯಲಿದೆ ಎಂಬ ಲೆಕ್ಕಾಚಾರ ಶಾಸಕರದ್ದಾಗಿದೆ. ಇದನ್ನೂ ಓದಿ: ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ನಾನು ರಾಸಲೀಲೆ ಮಾಡಲು ಹೋಗ್ತಿರಲಿಲ್ಲ: ಹೆಚ್‍ಡಿಕೆ ಕಿಡಿ

SIDDU

ಈ ಬೆಳವಣಿಗೆ ಬೆನ್ನಲ್ಲೇ ಸಿದ್ದರಾಮಯ್ಯ ತಮ್ಮ ಕಾರ್ಯಕರ್ತರೊಬ್ಬರ ಗೃಹಪ್ರವೇಶ ಕಾರ್ಯಕ್ರಮಕ್ಕೆಂದು ಕೋಲಾರಕ್ಕೆ ಬಂದಿದ್ರು. ಶಾಸಕ ಶ್ರೀನಿವಾಸಗೌಡ ನಿವಾಸದಲ್ಲಿ ಅನೌಪಚಾರಿಕ ಮಾತುಕತೆ ನಡೆಸಿ ಹೋಗಿದ್ದಾರೆ. ಸದ್ಯ ಜೆಡಿಎಸ್ ಪಕ್ಷದಿಂದ ಈಗಾಗಲೇ ಒಂದು ಕಾಲು ತೆಗೆದು ಕಾಂಗ್ರೆಸ್ ಕಡೆ ಮುಖ ಮಾಡಿರುವ ಜಿ.ಟಿ.ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಅವರ ಮಗ ಹರೀಶ್‍ಗೌಡರನ್ನು ಕಾಂಗ್ರೆಸ್‍ನಿಂದ ಮೈಸೂರಿನ ಯಾವುದಾದರು ಒಂದು ಕ್ಷೇತ್ರದಿಂದ ಕಣಕ್ಕಿಳಿಸಬೇಕು ಎನ್ನುವ ಮಾತುಕತೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ಕೋಲಾರ ಉತ್ತಮ ಕ್ಷೇತ್ರ ಎನ್ನಲಾಗುತ್ತಿದೆ.

KOLAR

ಒಟ್ಟಿನಲ್ಲಿ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನೊಂದು ಬಾರಿ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಸಿದ್ದು ವಿರೋಧಿಗಳ ಸಂಖ್ಯೆ ಕೂಡಾ ಹೆಚ್ಚಾಗಿದ್ದು, ಗೆಲುವು ಅಷ್ಟು ಸುಲಭದ ಮಾತಲ್ಲ. ಹಾಗಾಗಿ ಅಳೆದು ತೂಗಿ ಕೋಲಾರ ಸೇಪ್ ಎಂದುಕೊಂಡಿರುವ ಸಿದ್ದರಾಮಯ್ಯ ನಿರ್ಧಾರ ಏನಾಗಿರುತ್ತದೆ ಅನ್ನೋ ಕುತೂಹಲ ಎಲ್ಲರ ಮುಂದಿದೆ. ಇದನ್ನೂ ಓದಿ: ಮಹಿಳೆಯರ ಸಮಾನತೆಗಾಗಿ ಹೋರಾಡಿದ ಮಹಾನ್ ಪುರುಷರ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸತೀಶ್ ಜಾರಕಿಹೊಳಿ

Share This Article
Leave a Comment

Leave a Reply

Your email address will not be published. Required fields are marked *