ತಾಯಿ ಮಲಗಿದ್ದಾಳೆ ಎಂದು 4 ದಿನ ಶವದೊಂದಿಗೆ ಕಾಲ ಕಳೆದ ಬಾಲಕ..!

Public TV
1 Min Read
Police Jeep

ಅಮರಾವತಿ: ತಾಯಿಗೆ ಹುಷಾರಿಲ್ಲ, ಹೀಗಾಗಿ ಮಲಗಿದ್ದಾಳೆ ಎಂದುಕೊಂಡಿದ್ದ ಬಾಲಕ 4 ದಿನಗಳವರೆಗೆ ತನ್ನ ತಾಯಿಯ ಹೆಣದೊಂದಿಗೆ ಕಾಲ ಕಳೆದ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.

10 ವರ್ಷದ ಬಾಲಕ ಶ್ಯಾಮ್ ತನ್ನ ತಾಯಿ ರಾಜಲಕ್ಷ್ಮಿ ಮಾರ್ಚ್ 8 ರಂದು ಅನಾರೋಗ್ಯದ ಕಾರಣ ಮಲಗಿದ್ದಾಳೆ. ಅವಳಿಗೆ ತೊಂದರೆ ಕೊಡುವುದು ಬೇಡ ಎಂದುಕೊಂಡು ನಾಲ್ಕು ದಿನಗಳ ವರೆಗೂ ಆಕೆಯ ಶವದೊಂದಿಗೆ ಕಳೆದಿದ್ದ. ಆದರೆ ಮನೆಯಲ್ಲಿ ದುರ್ವಾಸನೆ ಬರಲು ಪ್ರಾರಂಭವಾದಂತೆ ತನ್ನ ಸಂಬಂಧಿಕರಿಗೆ ಈ ಬಗ್ಗೆ ತಿಳಿಸಿದ್ದಾನೆ.

ಬಾಲಕನ ಸಂಬಂಧಿಕರು ಬಾಲಕನ ಮಾಹಿತಿ ಮೇರೆಗೆ ಅವರ ಮನೆಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಗಂಡನ ಶಿರಚ್ಛೇದ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ದೇಗುಲದಲ್ಲಿ ಕೂತಿದ್ಲು!

crime scene e1602054934159 1

ರಾಜಲಕ್ಷ್ಮಿ ಕೌಟುಂಬಿಕ ಕಲಹದಿಂದಾಗಿ ಗಂಡನೊಂದಿಗೆ ಬೇರ್ಪಟ್ಟು ತನ್ನ ಮಗನೊಂದಿಗೆ ವಾಸವಿದ್ದಳು. ಆಕೆ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಈ ಬಗ್ಗೆ ಬಾಲಕನಲ್ಲಿ ಕೇಳಿದಾಗ ಆಕೆ ಮಾರ್ಚ್ 8 ರಂದು ಅನಾರೋಗ್ಯದಿಂದ ಬಳಲುತ್ತಿದ್ದಳು. ಅಂದು ವಾಂತಿ ಮಾಡಿ ಮಲಗಿದ ಬಳಿಕ ಎದ್ದೇಳಲೇ ಇಲ್ಲ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ರಾತ್ರಿಯೆಲ್ಲಾ ಮೋಜು ಮಸ್ತಿ – ಬೆಳಗ್ಗೆ ಯುವಕ ಶವವಾಗಿ ಪತ್ತೆ

ಮಹಿಳೆ ಸಾವಿಗೆ ನಿಜವಾದ ಕಾರಣ ತಿಳಿಯಲು ಪೊಲೀಸರು ಶವವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *