24 ಗಂಟೆಯೊಳಗೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ: ಇಮ್ರಾನ್‌ ಖಾನ್‌ಗೆ ಗಡುವು

Public TV
2 Min Read
Imran khan 1

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಇಮ್ರಾನ್‌ ಖಾನ್‌ ಅವರಿಗೆ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲವಾಲ್‌ ಭಟ್ಟೊ ಜರ್ದಾರಿ ಅವರು 24 ಗಂಟೆಗಳ ಗಡುವನ್ನು ನೀಡಿದ್ದಾರೆ.

ದೇಶದಲ್ಲಿ ಇಮ್ರಾನ್‌ ಖಾನ್‌ ಅವರ ಆಡಳಿತ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಅಸಮಾಧಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಜೀನಾಮೆಗೆ ಜರ್ದಾರಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಎಲ್ಲೆಂದರಲ್ಲಿ ಕಾಣಿಸುತ್ತಿದೆ Z ಸಿಂಬಲ್ – ಇದು ರಷ್ಯಾದ ಯುದ್ಧದ ಸಂಕೇತ!

PAK

ಇಮ್ರಾನ್‌ ಖಾನ್‌ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ನಡುವಿನ ಆಪಾದಿತ ಸಂಬಂಧವನ್ನು ಜರ್ದಾರಿ ಉಲ್ಲೇಖಿಸಿದ್ದಾರೆ. ದೇಶವು ಸರ್ಕಾರದ ಆರ್ಥಿಕ ನೀತಿಗಳನ್ನು ತಿರಸ್ಕರಿಸಿದೆ. ಪಿಟಿಐಎಂಎಫ್‌ (ಪಿಟಿಐ+ಐಎಂಎಫ್‌) ವಿರುದ್ಧ ಪ್ರತಿಭಟನೆಗಳಾಗುತ್ತಿವೆ ಎಂದು ಜರ್ದಾರಿ ತಿಳಿಸಿದ್ದಾರೆ.

ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಕೈಗೊಂಬೆ ಎಂದು ಟೀಕಿಸಿರುವ ಜರ್ದಾರಿ ಅವರು, ಸಾಮಾನ್ಯ ಜನರು ಹಣದುಬ್ಬರದ ಸುನಾಮಿಯಲ್ಲಿ ಮುಳುಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

ಇಮ್ರಾನ್‌ ಖಾನ್‌ ಸರ್ಕಾರ ಸಾಲಕ್ಕಾಗಿ ಭಿಕ್ಷೆ ಬೇಡುತ್ತಿದೆ. ಜನರು ಇನ್ನು ಮುಂದೆ ಸರ್ಕಾರದವರು ಮಾಡಿರುವ ಪ್ರಮಾದಗಳನ್ನು ಹೊರೆಯನ್ನು ಹೊರಲು ಸಾಧ್ಯವಿಲ್ಲ. ಇಮ್ರಾನ್‌ ಅವರು ಕಂಬಿಗಳ ಹಿಂದೆ ಇರುವುದು ಸರಿ. ವಿದೇಶಿ ಹಣದ ಪ್ರಕರಣದಲ್ಲಿ ಅವರನ್ನು ಜವಾಬ್ದಾರರನ್ನಾಗಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

IMF

ಪಾಕಿಸ್ತಾನವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ವೇಳೆ ಇಮ್ರಾನ್‌ ಖಾನ್‌ ಸರ್ಕಾರವು ಘೋಷಿಸಿದ ಪರಿಹಾರವು ಸಾಕಾಗುವುದಿಲ್ಲ ಎಂದು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ. ಅವರು ಪಾಕಿಸ್ತಾನದ ಪ್ರಧಾನಿ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಇದನ್ನೂ ಓದಿ: ವಸತಿ ಕಟ್ಟಡಗಳ ಮೇಲೆ ಎಕ್ಸ್ ಗುರುತಿನ ಚಿಹ್ನೆ- ಕಟ್ಟಡ ತೊರೆಯುವಂತೆ ಅಧಿಕಾರಿಗಳ ಸೂಚನೆ

ಇಮ್ರಾನ್ ಖಾನ್ ಅವರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಅವರನ್ನು ಪದಚ್ಯುತಗೊಳಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ. ಈ ನಿರ್ಣಯ ಸಫಲವಾಗುವುದಿಲ್ಲ ಎಂದು ಇಮ್ರಾನ್‌ ಖಾನ್‌ ಅಭಿಪ್ರಾಯಪಟ್ಟಿದ್ದಾರೆ. ಅದರ ವೈಫಲ್ಯದ ನಂತರ ಪ್ರತಿಪಕ್ಷಗಳು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *