ನವದೆಹಲಿ: ಪಂಚರಾಜ್ಯಗಳ ಚುನಾವಣೆ ಮುಕ್ತಾಯಗೊಂಡಿದ್ದು ಉತ್ತರ ಪ್ರದೇಶದಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರಕ್ಕೆ ಏರಲಿದೆ ಎಂದು ಎಲ್ಲ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಭವಿಷ್ಯ ಮಾ.10 ರಂದು ನಿಜವಾದರೆ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಏರುವ ಮೂಲಕ ಬಿಜೆಪಿ ದಾಖಲೆ ಸೃಷ್ಟಿಸಲಿದೆ.
ಪಂಜಾಬ್‌ನಲ್ಲಿ ಆಪ್ ಭರ್ಜರಿ ಜಯಗಳಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಈ ಮೂಲಕ ದೆಹಲಿ ಬಿಟ್ಟು ಮತ್ತೊಂದು ರಾಜ್ಯವನ್ನು ಆಪ್ ಹಿಡಿದಂತಾಗಿದೆ. ಗೋವಾ, ಉತ್ತರಾಖಂಡ್, ಮಣಿಪುರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಉತ್ತರ ಪ್ರದೇಶ:
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಅದರಲ್ಲೂ ಉತ್ತರ ಪ್ರದೇಶದ ಎಲೆಕ್ಷನ್ ರಿಸಲ್ಟ್, ಮುಂದಿನ ಸಾರ್ವತ್ರಿಕ ಚುನಾವಣೆ, ರಾಷ್ಟ್ರಪತಿ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿಯೇ ಈ ಮತ ಸಮರವನ್ನು ಪ್ರಮುಖ ಪಕ್ಷಗಳು ಪ್ರತಿಷ್ಠೆಯಾಗಿ ಪರಿಣಮಿಸಿದ್ದವು. ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳ್ತಿವೆ. ಆದರೆ ಸಮಾಜವಾದಿ ಪಕ್ಷದ ತೀವ್ರ ಪೈಪೋಟಿ ಕಾರಣ ಸರಳ ಬಹುಮತಕ್ಕಿಂತ ಸ್ವಲ್ಪ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗಳಿಸಬಹುದು ಎಂಬ ಲೆಕ್ಕಾಚಾರವನ್ನು ಮುಂದಿಟ್ಟಿವೆ. ಪ್ರಿಯಾಂಕಾ ಗಾಂಧಿ ಪ್ರಚಾರ ಕಾಂಗ್ರೆಸ್‍ಗೆ ಫಲಕೊಟ್ಟಿಲ್ಲ. ಬಿಎಸ್‍ಪಿಯ ಮಾಯಾವತಿ ಮ್ಯಾಜಿಕ್ ಮಾಡಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. ಇದನ್ನೂ ಓದಿ: ಸಮೀಕ್ಷೆ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, 300ಕ್ಕಿಂತ ಹೆಚ್ಚು ಸೀಟು ಗೆಲ್ಲುವ ವಿಶ್ವಾಸವಿದೆ: ಅಖಿಲೇಶ್ ಯಾದವ್
#TCPoll
UP 2022
Seat Projection
BJP+ 294 ± 19 Seats
SP+ 105 ± 19 Seats
BSP 2 ± 2 Seats
Cong 1 ± 1 Seats
Others 1 ± 1 Seats#News24TodaysChanakyaAnalysis
— Today's Chanakya (@TodaysChanakya) March 7, 2022
ಒಟ್ಟು ಸ್ಥಾನಗಳು 403, ಬಹುಮತಕ್ಕೆ 203
ಇಂಡಿಯಾ ಟುಡೇ:
ಬಿಜೆಪಿ 288-326, ಎಸ್ಪಿ+ 71-101, ಬಿಎಸ್‌ಪಿ 03-09, ಕಾಂಗ್ರೆಸ್ 01-03 ಇತರರು 2-3
ರಿಪಬ್ಲಿಕ್:
ಬಿಜೆಪಿ 262-277, ಎಸ್ಪಿ + 119-134, ಬಿಎಸ್‌ಪಿ 7-15, ಕಾಂಗ್ರೆಸ್ 3-08, ಇತರರು 00
ಟೈಮ್ಸ್ ನೌ:
ಬಿಜಪಿ 225, ಎಸ್‌ಪಿ 151, ಬಿಎಸ್‌ಪಿ 14, ಕಾಂಗ್ರೆಸ್ 04, ಇತರರು 00
ಟುಡೇಸ್ ಚಾಣಕ್ಯ
ಬಿಜೆಪಿ 294, ಎಸ್ಪಿ 105, ಬಿಎಸ್‌ಪಿ 2, ಕಾಂಗ್ರೆಸ್ 1, ಇತರರು 1
ಜನ್‍ಕೀ ಬಾತ್:
ಬಿಜೆಪಿ 222-260, ಎಸ್ಪಿ 135-165, ಬಿಎಸ್‌ಪಿ 04-09, ಕಾಂಗ್ರೆಸ್ 01-03, ಇತರರು 3-4
2017 ಫಲಿತಾಂಶ:
ಬಿಜೆಪಿ 312, ಬಿಎಸ್‌ಪಿ 19, ಎಸ್‌ಪಿ+ಕಾಂಗ್ರೆಸ್ 54, ಇತರರು- 18
ಪಂಜಾಬ್:
ತೀವ್ರ ಕುತೂಹಲ ಕೆರಳಿಸಿದ್ದ ಮತ್ತೊಂದು ರಾಜ್ಯ ಅಂದ್ರೆ ಪಂಜಾಬ್. ಇಲ್ಲಿ ನಾಯಕತ್ವದ ಕಿತ್ತಾಟದ ಪರಿಣಾಮ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ. ದೆಹಲಿ ಬಳಿಕ ಪಂಜಾಬ್‍ನಲ್ಲಿ ಎಎಪಿ ಅಧಿಕಾರ ಹಿಡಿಯಲಿದೆ. ಎಲ್ಲಾ ಎಕ್ಸಿಟ್ ಪೊಲ್‍ಗಳು ಎಎಪಿಗೆ ಗದ್ದುಗೆ ಏರಲಿವೆ ಎಂದಿದೆ. ಶಿರೋಮಣಿ ಅಕಾಲಿ ದಳ ಸ್ವಲ್ಪಮಟ್ಟಿಗೆ ಮಾತ್ರ ಪ್ರಭಾವ ಬೀರಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಜೊತೆ ಸೇರಿದ್ದಕ್ಕೂ ಬಿಜೆಪಿಗೆ ಇಲ್ಲಿ ಪ್ರಯೋಜನವಾಗಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.
ಒಟ್ಟು ಸ್ಥಾನಗಳು 117, ಬಹುಮತಕ್ಕೆ 59
ಇಂಡಿಯಾ ಟುಡೇ:
ಆಪ್ 76-90, ಕಾಂಗ್ರೆಸ್ 19-31, ಅಕಾಲಿ ದಳ 7-11, ಬಿಜೆಪಿ + 1-4, ಇತರರು 01
ರಿಪಬ್ಲಿಕ್:
ಆಪ್ 62-70, ಕಾಂಗ್ರೆಸ್ 23-31, ಅಕಾಲಿ ದಳ 16-24, ಬಿಜೆಪಿ+ 1-3,ಇತರರು 1-3
ಟೈಮ್ಸ್ ನೌ:
ಆಪ್ 70, ಕಾಂಗ್ರೆಸ್ 22, ಅಕಾಲಿ ದಳ 19, ಬಿಜೆಪಿ 05, ಇತರರು 0-1
ಟುಡೇಸ್ ಚಾಣಕ್ಯ
ಆಪ್ 100, ಕಾಂಗ್ರೆಸ್ 10, ಅಕಾಲಿ ದಳ 06, ಬಿಜೆಪಿ 01, ಇತರರು 00
ಜನ ಕೀ ಬಾತ್
ಆಪ್ 72, ಕಾಂಗ್ರೆಸ್ 24, ಅಕಾಲಿ ದಳ 15, ಬಿಜೆಪಿ + 05, ಇತರರು 01
2017ರ ಫಲಿತಾಂಶ:
ಕಾಂಗ್ರೆಸ್ 77, ಆಪ್ 20, ಎಸ್‍ಎಡಿ+ ಬಿಜೆಪಿ 18, ಇತರರು 02
ಗೋವಾ:
ಹಾರುವ ಶಾಸಕರು ಖ್ಯಾತಿಯ ಗೋವಾದಲ್ಲಿ ಈ ಬಾರಿ ಯಾವುದೇ ಪಕ್ಷಕ್ಕೂ ಬಹುಮತ ಸಿಗುವುದು ಅನುಮಾನ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಕಳೆದ ಬಾರಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅಧಿಕಾರಕ್ಕೇರುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ, ಈ ಚುನಾವಣೆ ಬರುವ ಹೊತ್ತಿಗೆ ಕೇವಲ ಒಬ್ಬ ಶಾಸಕ ಉಳಿದುಕೊಂಡಿದ್ದರು.
ಸ್ಥಳೀಯ ನಾಯಕರು ಇಲ್ಲದೇ ಹೋದ್ರೂ, ಈ ಬಾರಿಯೂ ಕಾಂಗ್ರೆಸ್ ಹೆಚ್ಚು ಸ್ಥಾನ ಗಿಟ್ಟಿಸಲಿದೆ.. ಕಾಂಗ್ರೆಸ್ ಸರಿಸಮನಾಗಿ ಬಿಜೆಪಿ ಫೈಟ್ ಕೊಟ್ಟಿದೆ. ಇಲ್ಲಿ ಯಾವುದೇ ಪಕ್ಷ ಗೆದ್ರೂ ಮೂರ್ನಾಲ್ಕು ಸೀಟುಗಳ ಅಂತರ ಅಷ್ಟೇ ಇರಲಿದೆ.. ಎಎಪಿ-ಟಿಎಂಸಿ ಪಕ್ಷಗಳು ಖಾತೆ ತೆರೆಯಲಿವೆ ಎಂಬ ಲೆಕ್ಕಗಳು ಈ ಎಕ್ಸಿಟ್ ಪೋಲ್‍ನಲ್ಲಿ ಸಿಕ್ಕಿವೆ. ಇದನ್ನೂ ಓದಿ: ಗೋವಾದಲ್ಲಿ ಮತ್ತೆ ಬಿಜೆಪಿ ಗೆಲ್ಲಲಿದೆ: ಪ್ರಮೋದ್ ಸಾವಂತ್
ಒಟ್ಟು ಸ್ಥಾನಗಳು 40, ಬಹುಮತಕ್ಕೆ 21
ಇಂಡಿಯಾ ಟುಡೇ
ಬಿಜೆಪಿ 14-18, ಕಾಂಗ್ರೆಸ್+ 15-20, ಆಪ್ – 0, ಟಿಎಂಸಿ 2-5, ಇತರರು 0-4
ರಿಪಬ್ಲಿಕ್
ಬಿಜೆಪಿ 13-17, ಕಾಂಗ್ರೆಸ್+ 13-17, ಆಪ್ 2-6, ಟಿಎಂಸಿ 2-4, ಇತರರು 0-4
ಟೈಮ್ಸ್ ನೌ
ಬಿಜೆಪಿ 14, ಕಾಂಗ್ರೆಸ್+ 16, ಆಪ್ 0, ಟಿಎಂಸಿ 0, ಇತರರು 10
ಜನ್ ಕೀ ಬಾತ್
ಬಿಜೆಪಿ 14-19, ಕಾಂಗ್ರೆಸ್+ 13-19, ಆಪ್ 2-1, ಟಿಎಂಸಿ 5-2 ಇತರರು 1-3
2017 ಫಲಿತಾಂಶ
ಕಾಂಗ್ರೆಸ್ 17, ಬಿಜೆಪಿ 13, ಆಪ್ 0, ಇತರರು 10
ಉತ್ತರಾಖಂಡ
ದೇವಭೂಮಿ ಖ್ಯಾತಿಯ ಉತ್ತರಾಖಂಡದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಯಿದೆ. ಬಿಜೆಪಿ ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆಯಿದೆ.
ಒಟ್ಟು ಸ್ಥಾನಗಳು 70, ಬಹುಮತಕ್ಕೆ 36
ಇಂಡಿಯಾ ಟುಡೇ
ಬಿಜೆಪಿ + 41, ಕಾಂಗ್ರೆಸ್ 25, ಆಪ್ 0, ಬಿಎಸ್‌ಪಿ 3, ಇತರರು 4
ರಿಪಬ್ಲಿಕ್
ಬಿಜೆಪಿ+ 35-39, ಕಾಂಗ್ರೆಸ್ 28-24, ಆಪ್ 0-3, ಬಿಎಸ್‌ಪಿ 0, ಇತರರು 0
ಟೈಮ್ಸ್ ನೌ
ಬಿಜೆಪಿ+ 37, ಕಾಂಗ್ರೆಸ್ 31, ಆಪ್ 01, ಬಿಎಸ್‌ಪಿ, ಇತರರು 0
ಟುಡೇಸ್ ಚಾಣಕ್ಯ
ಬಿಜೆಪಿ 43, ಕಾಂಗ್ರೆಸ್ 24, ಇತರರು 3
ಜನ ಕೀ ಬಾತ್
ಬಿಜೆಪಿ 32 -41, ಕಾಂಗ್ರೆಸ್ 27-35, ಆಪ್ 0-1, ಇತರರು 0
ಒಟ್ಟು ಸ್ಥಾನ 70 ಬಹುಮತಕ್ಕೆ 36
2017ರ ಫಲಿತಾಂಶ ಬಿಜೆಪಿ 57, ಕಾಂಗ್ರೆಸ್ 11, ಇತರರು 2
ಮಣಿಪುರ
ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ಸಿಗಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಕೆಲ ಸಮೀಕ್ಷೆಗಳು ಅತಂತ್ರ ವಿಧಾನಸಭೆ ನಿರ್ಮಾಣವಾಗಬಹುದು ಎಂದು ಭವಿಷ್ಯ ನುಡಿದಿವೆ
ಒಟ್ಟು ಸ್ಥಾನಗಳು 60, ಬಹುಮತಕ್ಕೆ 31
ಇಂಡಿಯಾ ಟುಡೇ
ಬಿಜೆಪಿ 33-43, ಕಾಂಗ್ರೆಸ್ 4-8, ಎನ್‌ಪಿಎಫ್ 0, ಎನ್‌ಪಿಪಿ 4-8, ಇತರರು 6-15
ರಿಪಬ್ಲಿಕ್
ಬಿಜೆಪಿ 27-31, ಕಾಂಗ್ರೆಸ್ 11-17, ಎನ್‌ಪಿಎಫ್ 6-10, ಎನ್‌ಪಿಪಿ 2-6, ಇತರರು 3-7
ಟೈಮ್ಸ್ ನೌ
ಬಿಜೆಪಿ 32-38, ಕಾಂಗ್ರೆಸ್ 12-17, ಎನ್‌ಪಿಎಫ್ 3-5, ಎನ್‌ಪಿಪಿ 2-5, ಇತರರು 0
ಜನಕೀ ಬಾತ್
ಬಿಜೆಪಿ 23-28, ಕಾಂಗ್ರೆಸ್ 14-10, ಎನ್‌ಪಿಎಫ್ 8-5, ಎನ್‌ಪಿಪಿ 7-8, ಇತರರು 0
2017ರ ಫಲಿತಾಂಶ
ಬಿಜೆಪಿ 21, ಕಾಂಗ್ರೆಸ್ 28, ಇತರರು 11