ಉಡುಪಿ: ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ. ಸಾಕಿದವರಿಗೆ, ಪ್ರೀತಿ ತೋರಿದವರ ಜೊತೆ ಶ್ವಾನ ಕೊನೆಯ ಕ್ಷಣದವರೆಗೂ ನಿಯತ್ತಿನಿಂದ ಇರುತ್ತದೆ. ಐದಾರು ವರ್ಷಗಳ ಕಾಲ ಜೊತೆಗಿದ್ದ ಬ್ಲ್ಯಾಕಿ ಮೃತಪಟ್ಟಾಗ ಸಾಸ್ತಾನ ಪಾಂಡೇಶ್ವರದ ಮಂದಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಬೀದಿ ನಾಯಿಯೊಂದು ಗ್ರಾಮ ಸಿಂಹವಾಗಿ ಮೆರೆದಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಾಸ್ತಾನ ಪಾಂಡೇಶ್ವರದ ಜನಕ್ಕೆ ಬ್ಲ್ಯಾಕಿ ಎಂದರೆ ಅಚ್ಚುಮೆಚ್ಚು. ಊರಿನ ಕಾವಲುಗಾರನಾಗಿ, ಗೆಳೆಯರ ಬಳಗದ ಸದಸ್ಯರಂತೆ ಬ್ಲ್ಯಾಕಿ ಓಡಾಡಿಕೊಂಡಿತ್ತು. ವಾರದ ಹಿಂದೆ ಅನಾರೋಗ್ಯದಿಂದ ಶ್ವಾನ ಮೃತಪಟ್ಟಿದೆ. ನಾಯಿಯ ಮೇಲಿನ ಪ್ರೀತಿಗೆ ಗೆಳೆಯರ ಬಳಗ ಶ್ರದ್ಧಾಂಜಲಿ ಅರ್ಪಿಸಿ, ದೊಡ್ಡ ಕಟೌಟ್‍ನ್ನು ಊರಿನಲ್ಲಿ ಹಾಕಲಾಗಿದೆ. ಇದನ್ನೂ ಓದಿ: ಕಾರ್ ಅಪಘಾತದ ಬಗ್ಗೆ ಹೊಸ ಹಾಡು ರಚಿಸಿದ ಕಚ್ಚಾ ಬಾದಮ್ ಗಾಯಕ ಭುಬನ್
ತಂಡದ ಯುವಕ ನಿತೇಶ್ ಮಾತನಾಡಿ, ಮಲ್ಪೆಯಿಂದ ಸಾಸ್ತಾನಕ್ಕೆ ನಾಯಿ ಮರಿಯನ್ನು ತಂದಿದ್ದರು. ಬ್ಲ್ಯಾಕೀ ಎಲ್ಲರ ಜೊತೆ ಓಡಾಡಿಕೊಂಡು ಗೆಳೆಯನಂತೆಯೇ ಆಗಿಬಿಟ್ಟಿತ್ತು. ಬ್ಲ್ಯಾಕಿ ಸಾವನ್ನಪ್ಪಿದ್ದು ಬಹಳ ಬೇಸರವಾಗಿದೆ ಎಂದರು. ಇದನ್ನೂ ಓದಿ: ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?
ಪಾಂಡೇಶ್ವರಕ್ಕೆ ಹೋಗುವ ಹೆದ್ದಾರಿ ಪಕ್ಕದಲ್ಲೇ ಕಟೌಟ್ ಹಾಕಿ ಶ್ರದ್ಧಾಂಜಲಿ ಅರ್ಪಣೆ ಮಾಡಲಾಗಿದೆ. ನಾಯಿಗಳಿಗೆ ಸ್ವಲ್ಪ ಪ್ರೀತಿ ತೋರಿದರೂ ಅವುಗಳು ಎಂದೂ ಮರೆಯುವುದಿಲ್ಲ. ನಾವು ಊರವರು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಸ್ಥಳೀಯ ದಿನೇಶ್ ಬಾಂಧವ್ಯ ಹೇಳಿದರು.