ಅಂದು ಸಚಿನ್, ಇಂದು ಜಡೇಜಾ – ದ್ರಾವಿಡ್, ರೋಹಿತ್ ನಡೆಗೆ ನೆಟ್ಟಿಗರು ಕಿಡಿ

Public TV
2 Min Read
ROHITH SHARMA

ಮೊಹಾಲಿ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ವಿಚಾರಕ್ಕೆ ಈಗ ಕೋಚ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಟೀಕೆಗೆ ಗುರಿಯಾಗಿದ್ದಾರೆ.

RAVINDRA JADEGA

ಎರಡನೇ ದಿನದಾಟದ 129.2 ಓವರ್ ಆದಾಗ ಭಾರತ 8 ವಿಕೆಟ್ ನಷ್ಟಕ್ಕೆ 574 ರನ್ ಗಳಿಸಿತ್ತು. ಈ ವೇಳೆ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದಾರೆ. ಇದರಿಂದಾಗಿ ದ್ವಿಶತಕದ ಹೊಸ್ತಿಲಲ್ಲಿದ್ದ ರವೀಂದ್ರ ಜಡೇಜಾ ಆಟಕ್ಕೆ ಬ್ರೇಕ್ ಬಿತ್ತು. ಇದನ್ನೂ ಕಂಡ ಅಭಿಮಾನಿಗಳು ದ್ರಾವಿಡ್ ಮತ್ತು ರೋಹಿತ್ ಶರ್ಮಾ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ. ಇದನ್ನೂ ಓದಿ: ವಾರ್ನ್ ಭವಿಷ್ಯ ನುಡಿದ ಯುವಕ – ರಾಕ್‍ಸ್ಟಾರ್ ಜಡೇಜಾ ದಾಖಲೆಯ ಶತಕ

RAHUL DRAVID

ರವೀಂದ್ರ ಜಡೇಜಾ ಮೊದಲದಿನದಾಟದ ಅಂತ್ಯಕ್ಕೆ ಅಜೇಯ 45 ರನ್ (82 ಎಸೆತ, 5 ಬೌಂಡರಿ) ಸಿಡಿಸಿದ್ದರು. ಎರಡನೇ ದಿನದಾಟ ಮುಂದುವರಿಸಿದ ಜಡ್ಡು ಬೌಂಡರಿ, ಸಿಕ್ಸರ್‌ಗಳ ಅಬ್ಬರದಾಟ ಆರಂಭಿಸಿದರು. 87 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬಳಿಕ ಮತ್ತಷ್ಟು ಬಿರುಸಿನ ಬ್ಯಾಟಿಂಗ್‍ಗೆ ಮುಂದಾದ ಜಡ್ಡು 160 ಎಸೆತಗಳಲ್ಲಿ 100 ರನ್ ಸಿಡಿಸಿ ಶತಕ ಪೂರೈಸಿದರು. ಆ ಬಳಿಕವು ತನ್ನ ಬ್ಯಾಟಿಂಗ್ ವೈಭವ ಮುಂದುವರಿಸಿದ ಜಡೇಜಾ 211 ಎಸೆತಗಳಲ್ಲಿ 150 ರನ್ ಪೂರೈಸಿದರು. ಅಲ್ಲದೆ ಮೊಹಮ್ಮದ್ ಶಮಿ ಜೊತೆ 9ನೇ ವಿಕೆಟ್‍ಗೆ 100 ರನ್ (91 ಎಸೆತ)ಗಳ ಜೊತೆಯಾಟವಾಡಿದರು. ಇದರಲ್ಲಿ 69 ರನ್ ಜಡೇಜಾ ಸಿಡಿಸಿದರೆ, ಇನ್ನೂಳಿದ 20 ರನ್ ಶಮಿ ಬ್ಯಾಟ್‍ನಿಂದ ಬಂದಿತ್ತು. ಇದನ್ನೂ ಓದಿ: 10 ವರ್ಷದ ಹುಡುಗ ಎಂದಿದ್ದ ಶೇನ್ ವಾರ್ನ್ ಕನಸಲ್ಲಿ ಸಚಿನ್ ಬಂದಿದ್ದು ಹೇಗೆ..?

150 ರನ್ ಸಿಡಿಸಿದ ಬಳಿಕ ಜಡ್ಡು ಬ್ಯಾಟಿಂಗ್‍ನಲ್ಲಿ ಮತ್ತಷ್ಟು ಆಕರ್ಷಕ ಹೊಡೆತಗಳು ಕಂಡುಬಂದವು. ಜಡೇಜಾ ಚೊಚ್ಚಲ ದ್ವಿಶತಕ ಸಿಡಿಸುತ್ತಾರೆ ಎಂದು ಕಾಯುತ್ತಿದ್ದವರಿಗೆ ನಾಯಕ ರೋಹಿತ್ ಶರ್ಮಾ ನಿರಾಸೆ ಮೂಡಿಸಿದರು. ಜಡೇಜಾ 175 ರನ್ (228 ಎಸೆತ, 17 ಬೌಂಡರಿ, 3 ಸಿಕ್ಸ್) ಸಿಡಿಸಿ ಉತ್ತಮವಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ರೋಹಿತ್ ಶರ್ಮಾ ಅಷ್ಟೂತ್ತಿಗಾಗಲೇ ಡಿಕ್ಲೇರ್ ಘೋಷಿಸಿದ್ದರು. ಇದರಿಂದ ಜಡೇಜಾ ಚೊಚ್ಚಲ ದ್ವಿಶತಕವನ್ನು 25 ರನ್‍ಗಳ ಅಂತರದಿಂದ ತಪ್ಪಿಸಿಕೊಂಡರು. ಇದನ್ನೂ ಓದಿ: ಇಂದು ಭಾವನಾತ್ಮಕ ಪೋಸ್ಟ್ ಮಾಡಿದ್ದ ಶೇನ್ ವಾರ್ನ್

https://twitter.com/AbduswamadMH/status/1500051643328446468

ಇದೀಗ ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಬಗ್ಗೆ ವಿವಿಧ ಕಾಮೆಂಟ್ ಹರಿದಾಡುತ್ತಿದೆ. ಈ ಹಿಂದೆ ಪಾಕಿಸ್ತಾನ ವಿರುದ್ಧ 2004ರಲ್ಲಿ ಮುಲ್ತಾನ್ ಟೆಸ್ಟ್ ವೇಳೆ ಸಚಿನ್ ತೆಂಡೂಲ್ಕರ್ 194 ರನ್ ಸಿಡಿಸಿದ್ದ ವೇಳೆ ಟೀಂ ಇಂಡಿಯಾದ ನಾಯಕರಾಗಿದ್ದ ರಾಹುಲ್ ದ್ರಾವಿಡ್ ಡಿಕ್ಲೇರ್ ಘೋಷಿಸಿದ್ದರು. ದ್ವಿಶತಕ ಕೈತಪ್ಪಿದ್ದಕ್ಕೆ ಸಚಿನ್ ಅಭಿಮಾನಿಗಳು ರಾಹುಲ್ ದ್ರಾವಿಡ್ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದರು. ಇದೀಗ ಜಡೇಜಾ 175 ರನ್ ಸಿಡಿಸಿದ್ದ ವೇಳೆ ನಾಯಕ ರೋಹಿತ್ ಶರ್ಮಾ ಡಿಕ್ಲೇರ್ ಘೋಷಿಸಿದ್ದಾರೆ. ಇಷ್ಟು ಬೇಗ ಡಿಕ್ಲೇರ್ ಘೋಷಣೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಮತ್ತು ದ್ರಾವಿಡ್ ಅವರನ್ನು ಟೀಕಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *