ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಅಗತ್ಯವಾಗಿದ್ದು, ರಾಜ್ಯವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇದು ಈಗ ನಿಲ್ಲಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದ ಜೌನ್‍ಪುರದಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇಲ್ಲಿಯವರೆಗಿನ ಮತದಾನವು ಬಿಜೆಪಿ ಮೈತ್ರಿಕೂಟದ ಗೆಲುವನ್ನು ಖಚಿತಪಡಿಸಿದೆ ಎಂದಿದ್ದಾರೆ. ಇದನ್ನೂ ಓದಿ: ವೆಲ್ ಕಮ್ ಬ್ಯಾಕ್! ನಿಮ್ಮ ಕುಟುಂಬಗಳು ನಿಮಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿವೆ: ಸ್ಮೃತಿ ಇರಾನಿ
Prime Minister Narendra Modi addresses a rally in Chandauli ahead of seventh phase of #UttarPradeshElection2022 pic.twitter.com/1NJbBitbJm
— ANI UP/Uttarakhand (@ANINewsUP) March 3, 2022
ಇಂದು ನಡೆದ ಆರನೇ ಹಂತದ ಮತದಾನದಲ್ಲಿ ಚಲಾವಣೆಯಾದ ಮತಗಳು ಬಿಜೆಪಿ ಪರವಾಗಿವೆ. ಉತ್ತರ ಪ್ರದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಕಾರಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಅಗತ್ಯವಾಗಿದೆ ಮತ್ತು ಅದು ಈಗ ನಿಲ್ಲಬಾರದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಮಗೆ ಇನ್ನೂ ಐದು ವರ್ಷ ಕೊಡಿ : ಅಮಿತ್ ಶಾ
2017ರಲ್ಲಿದ್ದಂತೆಯೇ ಬಿಜೆಪಿ ಗೆಲುವು ಭರ್ಜರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಹೇಳುತ್ತಾ, ಹಿಂದೆ ಇದ್ದ ಸಮಾಜವಾದಿ ಪಕ್ಷದ ಸರ್ಕಾರವನ್ನು ಮಾಫಿಯಾವಾದಿ ಎಂದು ವಾಗ್ದಾಳಿ ನಡೆಸಿದರು. ನಂತರ ಜಾನ್‍ಪುರವನ್ನು ಮಾಫಿಯಾ ಮುಕ್ತಗೊಳಿಸಲು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಗತ್ಯವಿದೆ ಎಂದಿದ್ದಾರೆ.