ಈ ಕೂಡಲೇ ಖಾರ್ಕಿವ್ ತೊರೆಯಿರಿ: ಭಾರತೀಯರಿಗೆ ರಾಯಭಾರ ಕಚೇರಿಯಿಂದ ತುರ್ತು ಸಂದೇಶ

Public TV
1 Min Read

ಕೀವ್: ಉಕ್ರೇನ್‍ನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿ ತಕ್ಷಣವೇ ಖಾರ್ಕಿವ್ ತೊರೆಯುವಂತೆ ತುರ್ತು ಸಲಹೆ ನೀಡಿದೆ. ಇಂದು ಸಂಜೆ 6 ಗಂಟೆ(ಭಾರತೀಯ ಕಾಲಮಾನ ರಾತ್ರಿ 9:30) ಒಳಗಾಗಿ ಪೆಸೊಚಿನ್, ಬಾಬಾಯೆ ಅಥವಾ ಬೆಜ್ಲ್ಯುಡೋವ್ಕಾ ವಸಾಹತುಗಳನ್ನು ತಲುಪುವಂತೆ ರಾಯಭಾರ ಕಚೇರಿ ತಿಳಿಸಿದೆ.

ಖಾರ್ಕಿವ್‍ನಲ್ಲಿರುವ ಭಾರತೀಯರು ತಮ್ಮ ಸುರಕ್ಷತೆ ಹಾಗೂ ಭದ್ರತೆಗೆ ಈ ಕೂಡಲೇ ಖಾರ್ಕಿವ್ ಅನ್ನು ತೊರೆಯಬೇಕು. ಆದಷ್ಟು ಬೇಗ ಪೆಸೊಚಿನ್, ಬಾಬಾಯೆ ಅಥವಾ ಬೆಜ್ಲ್ಯುಡೋವ್ಕಾಗೆ ತಲುಪಿ ಎಂದು ಭಾರತೀಯ ರಾಯಭಾರಿ ಕಚೇರಿ ಟ್ವಿಟ್ಟರ್‍ನಲ್ಲಿ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧ – ಭಾರತದ ಮತ್ತೊಬ್ಬ ವಿದ್ಯಾರ್ಥಿ ಸಾವು

ಈ ಹಿಂದೆ ಪೋಲೆಂಡ್‍ನಲ್ಲಿರುವ ರಾಯಭಾರಿ ಕಚೇರಿ ಉಕ್ರೇನ್‍ನಲ್ಲಿರುವ ಭಾರತೀಯರಿಗೆ ತುರ್ತು ಸಲಹೆ ನೀಡಿತ್ತು. ಪೋಲೆಂಡ್‍ಗೆ ತ್ವರಿತವಾಗಿ ಪ್ರವೇಶಿಸಲು ಬುಡೋಮಿಯಾರ್ಜ್ ಗಡಿಗೆ ತಕ್ಷಣ ಬರುವಂತೆ ಸಲಹೆ ನೀಡಿತ್ತು. ಇದನ್ನೂ ಓದಿ: ರಷ್ಯಾ- ಉಕ್ರೇನ್‌ ಯುದ್ಧ: ಕಚ್ಚಾ ತೈಲ ಬೆಲೆ ಭಾರೀ ಏರಿಕೆ

ಈಗಾಗಲೇ ರಷ್ಯಾ ಉಕ್ರೇನ್‍ನ ಮುಖ್ಯ ನಗರಗಳಾದ ಕೀವ್ ಹಾಗೂ ಖಾರ್ಕಿವ್ ನಗರಗಳನ್ನು ಮುತ್ತಿಗೆ ಹಾಕಿ ನಿರಂತರ ದಾಳಿ ನಡೆಸುತ್ತಿದೆ. ರಷ್ಯಾದ ಅಟ್ಟಹಾಸಕ್ಕೆ ಉಕ್ರೇನ್‍ನ 6 ಸಾವಿರ ಸೈನಿಕರು ಹಾಗೂ ಸ್ಥಳೀಯರು ಪ್ರಾಣ ಬಿಟ್ಟಿದ್ದು, ಅದರಲ್ಲಿ ಒಬ್ಬ ಕರ್ನಾಟಕದ ವಿದ್ಯಾರ್ಥಿಯೂ ಕೊನೆಯುಸಿರೆಳೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *