ಸಿಂಪಲ್ ಸುನಿ ನಿರ್ದೇಶನದ ಸಿನಿಮಾದಲ್ಲಿ ವಾಸ್ಕೋಡಿಗಾಮನ ಕಥೆ

Public TV
2 Min Read
Gatavaibhava 5

ಹೊಸ ಹುಡುಗನನ್ನು ಸಿನಿಮಾ ರಂಗಕ್ಕೆ ಲಾಂಚ್ ಮಾಡಲು ಹೊರಟಿರುವ ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಸಿನಿಮಾದ ಕಥೆ ಇದೀಗ ರಿವಿಲ್ ಆಗಿದೆ. ಈ ಸಿನಿಮಾದಲ್ಲಿ ವಾಸ್ಕೋಡಿಗಾಮನ ಕಥೆಯೂ ಇದೆಯಂತೆ. ಇಂದು ಗತವೈಭವ ಸಿನಿಮಾದ  ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಸುನಿ, “ಗತವೈಭವ ಎಂದರೆ ಗತಿಸಿ ಹೋದ ವೈಭವ ಎಂದು. ಈ ನಮ್ಮ ಚಿತ್ರದಲ್ಲಿ ವಾಸ್ಕೋಡಿಗಾಮನ ಕಥೆ ಸೇರಿದಂತೆ ಕೆಲವು ಐತಿಹಾಸಿಕ ಸನ್ನಿವೇಶಗಳಿರುತ್ತದೆ. ಫನ್, ಸೆಂಟಿಮೆಂಟ್ ಹಾಗೂ ಮೈಂಡ್ ಗೇಮ್ ನ ಮಿಶ್ರಣ ಅನ್ನಬಹುದು” ಎನ್ನುವ ಮೂಲಕ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ ನಿರ್ದೇಶಕರು. ಇದನ್ನೂ ಓದಿ : ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಜತೆ ನಟಿಸಲ್ಲ ಅಂದ ಕನ್ನಡತಿ

Gatavaibhava 3

ಮೊನ್ನೆಯಷ್ಟೇ ಈ ಸಿನಿಮಾದ ನಾಯಕನನ್ನು ಪರಿಚಯಿಸುವ ಟೀಸರ್ ಒಂದನ್ನು ಸುನಿ ಬಿಡುಗಡೆ ಮಾಡಿದ್ದರು. ಅದಕ್ಕೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದನ್ನೂ ಓದಿ : ಮಹಾಶಿವರಾತ್ರಿಗೆ ಶಿವಾಜಿ ಸುರತ್ಕಲ್ ಪೋಸ್ಟರ್

Gatavaibhava 1

ಮೂಲತಃ ತುಮಕೂರಿನವರಾದ ದುಶ್ಯಂತ್ ಈ ಸಿನಿಮಾದ ನಾಯಕ. ಇವರು ಗುಬ್ಬಿ ಶಾಸಕ ಶ್ರೀನಿವಾಸ್ ಪುತ್ರ. ವಿದೇಶದಲ್ಲಿ ಎಲ್.ಎಲ್.ಬಿ ಮುಗಿಸಿಕೊಂಡು ಬಂದು, ಇದೀಗ ಸಿನಿಮಾ ರಂಗದತ್ತ ಮುಖ ಮಾಡಿದ್ದಾರೆ. ಸಿನಿಮಾ ರಂಗಕ್ಕೆ ದುಶ್ಯಂತ್ ಬರುವುದು ತಂದೆ ತಾಯಿಗೆ ಇಷ್ಟವಿಲ್ಲದಿದ್ದರೂ, ಈ ರಂಗದ ಮೇಲಿನ ಆಸಕ್ತಿ ಇಲ್ಲಿಗೆ ಬರುವಂತೆ ಮಾಡಿದೆಯಂತೆ. ಇದನ್ನೂ ಓದಿ : ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ

Gatavaibhava 2

ಈ ಕುರಿತು ಮಾತನಾಡಿದ ದುಶ್ಯಂತ್ ‘ಕೆಲವರು ಹೇಳುತ್ತಾರೆ ದುಡ್ಡಿರುವವರ ಮಕ್ಕಳು ಹೀರೋ ಆಗುತ್ತಾರೆ ಅಂತ. ನಾನು ಗುಬ್ಬಿ ಶಾಸಕ ಶ್ರೀನಿವಾಸ್ ಅವರ ಪುತ್ರ. ಆದರೆ ನಮ್ಮ ತಂದೆಗೆ ನಾನು ಚಿತ್ರರಂಗಕ್ಕೆ ಬರಲು ಇಷ್ಟವಿಲ್ಲ. ನನಗೆ ಇದಲ್ಲದೆ ಬೇರೆ ಇಷ್ಟವಿಲ್ಲ ಹಾಗಾಗಿ ನಾನು ನಿರ್ಮಾಪಕರ ಹುಡುಕಿ ಹಣ ಹೊಂದಿಸಲು ಒಂದು ವರ್ಷಕ್ಕೂ ಅಧಿಕ ಸಮಯ ತೆಗೆದುಕೊಂಡೆ’ ಎನ್ನುತ್ತಾರೆ. ಇದನ್ನೂ ಓದಿ : ಜೇಮ್ಸ್ ಟ್ರೇಡ್ ಮಾರ್ಕ್ ಹಾಡಿಗೆ ಪುನೀತ್ ಭರ್ಜರಿ ಸ್ಟೆಪ್: ಭಾವುಕರಾದ ಅಭಿಮಾನಿಗಳು

Gatavaibhava 4

ಅಂದಹಾಗೆ ಈ ಸಿನಿಮಾವನ್ನು ನಿರ್ದೇಶಕ ಸುನಿ ಜೊತೆಗೆ ದೀಪಕ್ ತಿಮ್ಮಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಏಪ್ರಿಲ್ ಕೊನೆಯ ವಾರದಿಂದ ಚಿತ್ರೀಕರಣ ಶುರುವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *