ಮೇಕೆದಾಟು ಪಾದಯಾತ್ರೆ ಹೆಸರಲ್ಲಿ ಕಾಂಗ್ರೆಸ್ ರಾಜಕೀಯವಾಗಿ ದುರ್ಬಳಕೆ : ಡಾ.ಕೆ.ಸುಧಾಕರ್

Public TV
1 Min Read
delhi sudhakar

ಚಿಕ್ಕಬಳ್ಳಾಪುರ: ಮೇಕೆದಾಟು ಪಾದಯಾತ್ರೆ 2.0 ವಿಚಾರದಲ್ಲಿ ಕಾಂಗ್ರೆಸ್‍ನ ನಡೆಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕಿಡಿಕಾರಿದ್ದಾರೆ.

mekedatu 2

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆ ವಿಚಾರವನ್ನು ಕಾಂಗ್ರೆಸ್ ಪಕ್ಷ ರಾಜಕೀಯ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. 5 ವರ್ಷ ಕಾಂಗ್ರೆಸ್ ಸರ್ಕಾರ ಇತ್ತು. ಎರಡೂವರೆ ವರ್ಷ ಸಮ್ಮಿಶ್ರ ಸರ್ಕಾರ ಇತ್ತು. ಮೇಕೆದಾಟು ಯೋಜನೆ ಮಾಡಬೇಕು ಅಂತಿದ್ದರೆ ಮಾಡಿ ಮುಗಿಸಬಹುದಿತ್ತು. ಆದರೆ ಅವರು ಹೇಳುವುದು ಡಿಪಿಆರ್ ಮಾಡಿದ್ದೇವೆ ಅಂತ ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದ್ದಾರೆ. ದನ್ನೂ ಓದಿ:  ಉಕ್ರೇನ್‌ ಬಿಕ್ಕಟ್ಟು – ಬೆಂಗಳೂರು ವಿದ್ಯಾರ್ಥಿನಿಯ ವೀಡಿಯೋ ಶೇರ್‌ ಮಾಡಿ ಕೇಂದ್ರಕ್ಕೆ ರಾಗಾ ಮನವಿ

sudhakar

ಇದೊಂದು ಸಾಹಸನಾ? ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ. ಜನ ಮೂರ್ಖರಲ್ಲ. ಡಿಪಿಆರ್ ಮಾಡಬೇಕು ಅಂದಿದ್ದೇ ಆದರೆ ಮೂರು ತಿಂಗಳು ಸಾಕಾಗಿತ್ತು. ಸುಮ್ಮನೆ 7 ವರ್ಷ ಕಾಲಹರಣ ಮಾಡಿದರು. ಇದರಲ್ಲಿ ಕುಮಾರಸ್ವಾಮಿ ಸಿಎಂ ಆದಾಗ ಡಿಪಿಆರ್‍ಗೆ ಕಳಿಸಿದ್ದು ಅದು ಸಹ ಕಾಂಗ್ರೆಸ್‍ನವರ ಕ್ರೆಡಿಟ್ ಅಲ್ಲ ಅಂತ ಕಾಂಗ್ರೆಸ್ ನಡೆ ಬಗ್ಗೆ ಟೀಕಿಸಿದ್ದಾರೆ. ದನ್ನೂ ಓದಿ:  ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

Share This Article
Leave a Comment

Leave a Reply

Your email address will not be published. Required fields are marked *