ಲಕ್ನೋ: ಎಸ್‍ಪಿ ಅಧಿಕಾರದ ಅವಧಿಯಲ್ಲಿ ರಾಮನ ಭಕ್ತರ ಮೇಲೆ ಗುಂಡಿನ ದಾಳಿಗಳಾಗಿದ್ದವು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ರಾಮನ ಭಕ್ತರು ಗದೆ ಹಿಡಿದು ತಿರುಗಿಸುತ್ತಿದ್ದಾರೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು.
ಸುಲ್ತಾನ್‍ಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಮೊದಲ 4 ಹಂತದ ಮತದಾನದ ಮಾದರಿಯೂ ಬಿಜೆಪಿಯ ಪರವಾಗಿದೆ. ಇದರಿಂದ ಬಿಜೆಪಿಯ ಗೆಲುವು ಖಚಿತವಾಗಿದೆ ಎಂದ ಅವರು, ಪ್ರತಿಪಕ್ಷಗಳು ಗೊಂದಲ ಸ್ಥಿತಿಯಲ್ಲಿದೆ ಎಂದು ಟೀಕಿಸಿದರು.
ಪ್ರತಿಪಕ್ಷದ ಹಲವಾರು ನಾಯಕರು ಈ ಚುನಾವಣೆಯಲ್ಲಿ ಭಾರೀ ಸೋಲನುಭವಿಸಲಿದ್ದಾರೆ. ಅವರಲ್ಲಿ ಕೆಲವು ನಾಯಕರು ಈ ಅವಮಾನದಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಈಗಾಗಲೇ ಟಿಕೆಟ್ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಹನುಮಂತನು ಈ ಸ್ಥಳದಲ್ಲಿ ರಾಕ್ಷಸರನ್ನು ಕೊಂದಿದ್ದಾನೆ. ಈ ರೀತಿಯೇ ಬಿಜೆಪಿ ಪರವಾಗಿ ಮತ ನೀಡುವ ಮೂಲಕ ರಾಜಕೀಯದ ಕಾಲನೇಮಿಗಳನ್ನು ಸೋಲಿಸಬೇಕು ಎಂದ ಅವರು ಪ್ರತಿಪಕ್ಷದ ನಾಯಕರನ್ನು ರಾಮಾಯಣದಲ್ಲಿ ಬರುವ ರಾಕ್ಷಸನಿಗೆ ಹೋಲಿಸಿದರು. ಇದನ್ನೂ ಓದಿ: ಒಡಿಶಾದ ಬುಡಕಟ್ಟು ಸಮುದಾಯದ ಮೊದಲ ಸಿಎಂ ಆಗಿದ್ದ ಹೇಮಾನಂದ ಬಿಸ್ವಾಲ್ ನಿಧನ
ಬಿಜೆಪಿ ಆಡಳಿತಕ್ಕೆ ಬರುವ ಮೊದಲು ಭದ್ರತೆಯೂ ಬಹಳ ದೊಡ್ಡ ಸವಾಲಾಗಿತ್ತು. ಬಿಎಸ್‍ಪಿ ಮತ್ತು ಎಸ್‍ಪಿ ಪಕ್ಷಗಳು ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಹಲವಾರು ಗಲಭೆಗಳಾಗಿದ್ದವು. ಆದರೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿದ ಅನೇಕ ಉದಾಹರಣೆಗಳಿವೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಪರವಾಗಿ ಸುನಾಮಿ ಎದ್ದಿದೆ: ಅಪರ್ಣಾ ಯಾದವ್
ಈ ಚುನಾವಣೆಯಲ್ಲಿ ಎಸ್‍ಪಿ ಸೋಲನುಭವಿಸುತ್ತದೆ. ಅವರನ್ನು ಅಯೋಧ್ಯೆಯ ಕರಸೇವಕರೆಂದು ನೋಡುತ್ತೇವೆ ಎಂದು ವ್ಯಂಗ್ಯವಾಡಿದರು.
ಬಿಎಸ್‍ಪಿ ಪಕ್ಷದ ಆನೆ ಎಷ್ಟು ದೊಡ್ಡದಾಗಿದೆ ಎಂದರೆ ಅದು ರಾಜ್ಯದ ಸಂಪೂರ್ಣ ಪಡಿತರವನ್ನು ತಿನ್ನುತ್ತದೆ ಎಂದು ವಾಗ್ದಾಳಿ ನಡೆಸಿದ ಅವರು, ಡಬಲ್ ಇಂಜಿನ್ ಸರ್ಕಾರ ಬಂದ ನಂತರ ಬಡವರಿಗೆ ಉಚಿತ ಪಡಿತರವನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.