ಕಣ್ಣಲ್ಲಿ ನೀರು ತರಿಸುತ್ತಿದೆ 80 ವರ್ಷದ ವ್ಯಕ್ತಿ ಉಕ್ರೇನ್ ಸೇನೆಗೆ ಸೇರಲು ನಿಂತಿರುವ ಫೋಟೋ!

Public TV
2 Min Read

ಕೀವ್: ಉಕ್ರೇನ್ ಹಾಗೂ ರಷ್ಯಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆ ಸಾಮಾಜಿಕ ಮಾಧ್ಯಮದಲ್ಲಿ ಉಕ್ರೇನ್ ನಾಗರಿಕರ ಹೃದಯ ವಿದ್ರಾವಕ ಫೋಟೋಗಳೇ ತುಂಬಿ ತುಳುಕುತ್ತಿವೆ. ಉಕ್ರೇನ್‍ನ ಮೆಟ್ರೋ ಸುರಂಗಮಾರ್ಗದಲ್ಲಿ ದಂಪತಿ ವಿದಾಯ ಹೇಳುವ ವೈರಲ್ ಫೋಟೋದಿಂದ ಹಿಡಿದು ತಂದೆ ಹಾಗೂ ಮಗಳು ಅತ್ತು ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವ ದೃಶ್ಯಗಳು ನೆಟ್ಟಿಗರನ್ನು ಬೆಚ್ಚಿಬೀಳಿಸಿವೆ.

ಇದೀಗ ಉಕ್ರೇನ್ ಸೇನೆಗೆ ಸೇರಲು ಸರದಿ ಸಾಲಿನಲ್ಲಿ ನಿಂತಿರುವ 80 ವರ್ಷದ ವ್ಯಕ್ತಿಯೊಬ್ಬರ ಫೋಟೋ ವೈರಲ್ ಆಗುತ್ತಿದೆ. ಕೈಯಲ್ಲೊಂದು ಬ್ಯಾಗ್ ಹಿಡಿದು ಸೈನ್ಯಕ್ಕೆ ಸೇರಲು ಸಿದ್ಧರಾಗಿ ನಿಂತಿರುವ ಮುದಿ ಜೀವದ ಫೋಟೋ ಎಂತಹವರ ಕಣ್ಣಲ್ಲಿಯೂ ನೀರು ತರಿಸುವಂತಿದೆ. ಇದನ್ನೂ ಓದಿ: ಅಪ್ಪ, ಅಮ್ಮಾ ಐ ಲವ್ ಯೂ – ಯೋಧನ ಕರುಳು ಹಿಂಡುವ ಸಂದೇಶ

ಸೈನ್ಯಕ್ಕೆ ಸೇರಲು ಸರದಿ ಸಾಲಿನಲ್ಲಿ ನಿಂತಿದ್ದ 80 ವರ್ಷದ ವ್ಯಕ್ತಿಯ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಲಾಗಿದೆ. ವ್ಯಕ್ತಿ ಹಿಡಿದುಕೊಂಡಿರುವ ಪುಟ್ಟ ಬ್ಯಾಗ್‍ನಲ್ಲಿ 2 ಟೀ-ಶರ್ಟ್‍ಗಳು, ಒಂದು ಜೊತೆ ಹೆಚ್ಚುವರಿ ಪ್ಯಾಂಟ್, ಟೂತ್ ಬ್ರಷ್ ಹಾಗೂ ಊಟಕ್ಕೆ ಒಂದಿಷ್ಟು ಸ್ಯಾಂಡ್‍ವಿಚ್‍ಗಳನ್ನು ಹೊತ್ತೊಯ್ದಿದ್ದಾರೆ. ಅವರು ತಮ್ಮ ಮೊಮ್ಮಕ್ಕಳಿಗಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಟ್ವಿಟ್ಟರ್ ಪೋಸ್ಟ್‍ನಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಗಡಿ ಪ್ರವೇಶಿಸಿದ ಶಸ್ತ್ರಸಜ್ಜಿತ ರಷ್ಯಾ ಸೈನಿಕನಿಗೆ ಉಕ್ರೇನ್‌ ಮಹಿಳೆ ಛೀಮಾರಿ – ವೀಡಿಯೋ ವೈರಲ್‌

ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ರಷ್ಯಾದೊಂದಿಗೆ ಹೋರಾಡಲು ಬಯಸುವ ಎಲ್ಲಾ ನಾಗರಿಕರಿಗೂ ಶಸ್ತ್ರಾಸ್ತ್ರಗಳನ್ನು ಒದಗಿಸುವುದಾಗಿ ತಿಳಿಸಿದ್ದರು. ರಷ್ಯಾ ಬಗ್ಗೆ ಇನ್ನೂ ಆತ್ಮಸಾಕ್ಷಿ ಕಳೆದುಕೊಳ್ಳದ ಎಲ್ಲಾ ನಾಗರಿಕರಿಗೂ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದ್ದೇವೆ ಹಾಗೂ ಎಲ್ಲಾ ನಿರ್ಬಂಧವನ್ನೂ ತೆಗೆದು ಹಾಕುತ್ತಿದ್ದೇವೆ ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *