ಚಿಕ್ಕೋಡಿ: ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು, ನಾಲ್ವರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ತಡರಾತ್ರಿ ನಡೆದಿದೆ.
ಸಂಕೇಶ್ವರ ಪಟ್ಟಣದ ನಿವಾಸಿಗಳಾದ ಬಸವರಾಜ ಮಾಳಿ(29), ಪ್ರವೀಣ್ ಸನದಿ(26), ಮೆಹಬೂಬ ಶೇಗಡಿ(21), ಮಲಿಕ್ ಜಮಾದಾರ್(21) ಮೃತ ದುರ್ದೈವಿಗಳಾಗಿದ್ದಾರೆ. ಇದನ್ನೂ ಓದಿ: Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?
ಗುರುವಾರ ತಡರಾತ್ರಿ ಒಂದೇ ಬೈಕಿನಲ್ಲಿ ನಾಲ್ವರು ಯುವಕರು ಮಹಾರಾಷ್ಟ್ರದ ಗಡಹಿಂಗ್ಲಜ್ ರಸ್ತೆ ಮಾರ್ಗದಿಂದ ಸಂಕೇಶ್ವರ ಪಟ್ಟಣಕ್ಕೆ ಆಗಮಿಸುತ್ತಿದ್ದ ವೇಳೆ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಪಕ್ಕದ ಗುಂಡಿಗೆ ನಾಲ್ವರು ಬಿದ್ದ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಸಂಕೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಹ್ಲಾದ್ ಚೆನ್ನಗಿರಿ, ಪಿಎಸ್ ಗಣಪತಿ ಕೊಂಗನೊಳ್ಳಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ರಾಮ್ ಗೋಪಾಲ್ ವರ್ಮಾ ಭೇಟಿ ಮಾಡಿ ಕುತೂಹಲ ಮೂಡಿಸಿದ ಉಪ್ಪಿ