ಮೊಬೈಲ್ ಟವರ್‌ಗಳಿಂದ ಅಪಾಯಕಾರಿ ವಿಕಿರಣ ಹೊರಹೊಮ್ಮುತ್ತದೆ ಎನ್ನುವುದು ತಪ್ಪು ಕಲ್ಪನೆ: ರಾಕೇಶ್ ಕುಮಾರ್ ದುಬೇ

Public TV
2 Min Read
MOBILE PHONE TOWER

ಬೆಂಗಳೂರು: ನಗರದ ಎಲ್ಲಾ ಮೊಬೈಲ್ ಟವರ್‌ಗಳು ದೂರ ಸಂಪರ್ಕ ಇಲಾಖೆ ನಿಯಮಗಳಿಗೆ ಒಳಪಟ್ಟಿದ್ದು, ಈ ಯಾವ ಟವರ್‌ಗಳು ಅಪಾಯಕಾರಿ ವಿಕಿರಣ ಹೊರ ಸೂಸುತ್ತಿಲ್ಲ ಎಂದು ಕರ್ನಾಟಕ ಲೈಸನ್ಸ್ ಸರ್ವಿಸ್ ಏರಿಯಾ (ಎಲ್‍ಎಸ್‍ಎ) ಸಲಹೆಗಾರರಾದ ರಾಕೇಶ್ ಕುಮಾರ್ ದುಬೇ ಹೇಳಿದರು.

ಕೇಂದ್ರ ದೂರ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಲೈಸನ್ಸ್ ಸರ್ವಿಸ್ ಏರಿಯಾ (ಎಲ್‍ಎಸ್‍ಎ) ಗುರುವಾರ ನಗರದಲ್ಲಿ ಸೆಕ್ಯೂಲಾರ್ ಟವರ್‌ಗಳಿಂದ ಹೊರಹೊಮ್ಮುವ ವಿಕಿರಣಗಳ ಬಗ್ಗೆ ತಪ್ಪು ತಿಳುವಳಿಕೆಯ ಕುರಿತು ಜಾಗೃತಿ ನೀಡುವ ವರ್ಚುವಲ್ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

mobile secret

ಈ ವೇಳೆ ಮಾತನಾಡಿದ ರಾಕೇಶ್ ಕುಮಾರ್, ಬಹುತೇಕರಲ್ಲಿ ಮೊಬೈಲ್ ಟವರ್ ಕುರಿತು ಸಾಕಷ್ಟು ತಪ್ಪು ತಿಳುವಳಿಕೆ ಇದೆ. ಮೊಬೈಲ್ ಟವರ್‌ನಿಂದ ಅಪಾಯಕಾರಿ ವಿಕಿರಣ ಬಿಡುಗಡೆಯಾಗಲಿದ್ದು, ಇದು ಮೆದುಳು ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗೆ ಕಾರಣವಾಗಲಿದೆ ಎನ್ನುವ ತಪ್ಪು ಮನವರಿಕೆ ಇದೆ. ಆದರೆ, ಕರ್ನಾಟಕದಲ್ಲಿ ನಿರ್ಮಿಸಿರುವ ಎಲ್ಲಾ ಮೊಬೈಲ್ ಟವರ್‌ಗಳು ಸುರಕ್ಷಿತ. ಅದರಿಂದ ಬಿಡುಗಡೆಯಾಗುವ ವಿಕಿರಣಗಳು ಯಾವುದೇ ಆರೋಗ್ಯ ಸಮಸ್ಯೆ ಉಂಟು ಮಾಡುತ್ತಿಲ್ಲ. ಇದನ್ನೂ ಓದಿ: ಟೋಕಿಯೊ ಪ್ಯಾರಾಲಿಂಪಿಕ್ಸ್- ಹೈಜಂಪ್‍ನಲ್ಲಿ ಬೆಳ್ಳಿ ಗೆದ್ದ ತಂಗವೇಲು, ಕಂಚು ಶರದ್ ಕುಮಾರ್‌ಗೆ

ಡಿಒಟಿಯು ದೇಶಾದ್ಯಂತ ಟವರ್‌ಗಳಿಂದ ಹೊರಹೊಮ್ಮುವ ಇಎಂಎಫ್‍ನನ್ನು ಗಮನಿಸುತ್ತಿರುತ್ತದೆ. ಟವರ್ ನಿರ್ಮಾಣದ ಮೊದಲು ಸುತ್ತಲಿನ ಪರಿಸರವನ್ನು ಅಧ್ಯಯನ ಮಾಡಿ, ಸೂಕ್ತ ಬೌದ್ಧಿಕ ತಾಣಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. 2021 ಜೂನ್ ತಿಂಗಳಿನಿಂದ ಡಿಸೆಂಬರ್‌ ವರೆಗೆ ಕರ್ನಾಟಕದ ಎಲ್ಲಾ ಮೊಬೈಲ್ ಟವರ್‌ಗಳಿಂದ ಬಿಡುಗಡೆಯಾಗುವ 5803 ಬಿಟಿಎಸ್‍ಗಳನ್ನು ಪರೀಕ್ಷಿಸಿದ್ದು, ಇದು ದೂರ ಸಂಪರ್ಕ ಇಲಾಖೆಯ ನಿಮಯಗಳಿಗೆ ಅನುಗುಣವಾಗಿಯೇ ಇದ್ದು, ಯಾವುದೇ ಅಪಾಯಕಾರಿಕ ವಿಕಿರಣ ಬಿಡುಗಡೆಯಾಗುತ್ತಿಲ್ಲ ಎಂದರು.

tv tower 1

ಎಐಐಎಂಎಸ್ ಅಸೋಸಿಯೇಟ್ ಪ್ರೊಫೇಸರ್ ಡಾ. ವಿವೇಕ್ ಟಂಡನ್ ಮಾತನಾಡಿ, ಮೊಬೈಲ್ ಟವರ್ ಕುರಿತು ಜನರಲ್ಲಿ ಸಾಕಷ್ಟು ತಪ್ಪು ತಿಳುವಳಿಕೆ ಇದೆ. ಇದು ಒಬ್ಬರಿಂದ ಒಬ್ಬರಿಗೆ ಹರಡಿ ಅನಗತ್ಯ ಸಮಸ್ಯೆ ಸೃಷ್ಟಿಯಾಗಿದೆ. ಮೊಬೈಲ್ ಟವರ್‌ಗಳಿಂದ ಬಿಡುಗಡೆಯಾಗುವ ವಿಕಿರಣಗಳು ಕಡಿಮೆ ಶಕ್ತಿಯ ನಾನ್ ಅಯೊನೈಸಿಂಗ್ ರೇಡಿಯೇಷನ್‍ಗಳನ್ನು ಹೊರಸೂಸುತ್ತವೆ. ಇದು ಮನುಷ್ಯನ ಮೇಲೆ ಅತ್ಯಲ್ಪ ಪರಿಣಾಮ ಬೀರುವ ವಿಕಿರಣವಾಗಿದ್ದು, ಇದರಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗದು ಎಂದರು.

ಮೊಬೈಲ್ ಟವರ್‌ಗಳ ಇಎಂಎಫ್ ವಿಕಿರಣಗಳು ಹೊರಹೊಮ್ಮುವದರ ಮೇಲೆ ಕಠಿಣ ಮೇಲ್ಪಚಾರಣೆ ಇರಲಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ, ಉಚ್ಛ ನ್ಯಾಯಾಲಯವು ಈ ದೃಷ್ಟಿ ಕೋನವನ್ನು ಎತ್ತಿ ಹಿಡಿದಿವೆ. ಹೀಗಾಗಿ ಮೊಬೈಲ್ ಟವರ್‌ಗಳು ಅತ್ಯಂತ ಸುರಕ್ಷಿತವಾಗಿವೆ ಎಂದು ಹೇಳಿದರು. ಮೊಬೈಲ್ ಟವರ್‌ನಿಂದ ಹೊರಸೂಸುವ ವಿಕಿರಣಗಳ ಕುರಿತು ಈ ವೆಬ್‍ಸೈಟ್‍ಗೆ ಭೇಟಿ ನೀಡಿ ಪರೀಕ್ಷಿಸಬಹುದು. ಇದನ್ನೂ ಓದಿ:  https://www.coai.com/

Share This Article
Leave a Comment

Leave a Reply

Your email address will not be published. Required fields are marked *