ಶ್ರೀರಂಗಪಟ್ಟಣದಲ್ಲಿ ಹರ್ಷನ ಅಸ್ಥಿ ವಿಸರ್ಜಿಸಿದ ಪ್ರಮೋದ್ ಮುತಾಲಿಕ್, ಕಾಳಿ ಸ್ವಾಮಿ

Public TV
1 Min Read
harsha 2

ಮಂಡ್ಯ: ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಕಾಳಿ ಸ್ವಾಮಿ ಶಿವಮೊಗ್ಗದಲ್ಲಿ ಹತ್ಯೆಯಾಗಿದ್ದ ಬಜರಂಗದಳ ಕಾರ್ಯಕರ್ತ ಹರ್ಷನ ಅಸ್ಥಿಯನ್ನು ವಿಸರ್ಜನೆ ಮಾಡಿದರು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಅಸ್ಥಿ ವಿಸರ್ಜನೆ ಕಾರ್ಯಕ್ರಮ ನಡೆದಿದೆ. ಕಾಳಿ ಸ್ವಾಮಿ ಮೃತ ಹರ್ಷನ ಅಸ್ಥಿಯನ್ನು ಸೇತುವೆ ಬಳಿಯಿಂದ ಪೂಜಾ ಸ್ಥಳಕ್ಕೆ ತಲೆ ಮೇಲೆ ಹೊತ್ತು ತಂದಿದ್ದಾರೆ. ನಂತರ ಮುತಾಲಿಕ್‍ರಿಂದ ಪಶ್ಚಿಮವಾಹಿನಿಯ ಅರಳಿ ಕಟ್ಟೆ ಬಳಿ ಅಸ್ಥಿ ವಿಸರ್ಜನಾ ಕಾರ್ಯ ಆರಂಭವಾಯಿತು.

harsha 3

ಪ್ರಧಾನ ಅರ್ಚಕರಾದ ಸಂದೀಪ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆದಿದೆ. ಧುರುಮತಿ ನಾರಾಯಣ ಹೋಮ, ಅಸ್ಥಿ ಸಂಚಯನ, ವಿಸರ್ಜನೆ, ಪಂಚಾಮೃತ ಅಭಿಷೇಕ, ದಶದಾನ, ಪುಣ್ಯಃ ಸೇರಿದಂತೆ ಹಲವು ಪೂಜಾ ವಿಧಿ ವಿಧಾನ ನಡೆದಿದೆ. ಈ ವೇಳೆ ಕಾವೇರಿ ನದಿಗೆ ಅಸ್ಥಿ ವಿಸರ್ಜನೆ ಮೂಲಕ ಹರ್ಷ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸಿದರು. ಪೂಜೆ ಮುಗಿದ ಬಳಿಕ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದರು. ಇದನ್ನೂ ಓದಿ: ಮಣಪ್ಪುರಂ ಗೋಲ್ಡ್ ಲೋನ್ ಸಿಬ್ಬಂದಿಯ ಎಡವಟ್ಟು- ಯಾರದೋ ಬಂಗಾರ ಮತ್ಯಾರಿಗೋ

harsha 1

ಹರ್ಷನ ಕೊಲೆ ಪ್ರಕರಣದಿಂದಾಗಿ ಶಿವಮೊಗ್ಗವೇ ಹೊತ್ತಿ ಉರಿದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 144 ಸೆಕ್ಷನ್‍ನ್ನು ಹಾಕಲಾಗಿತ್ತು. ಹರ್ಷನ ಶವ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಈಗಾಗಲೇ ಕೊಲೆಗೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸೂಕ್ತ ಕ್ರಮ : ಬೊಮ್ಮಾಯಿ

Share This Article
Leave a Comment

Leave a Reply

Your email address will not be published. Required fields are marked *