ಡೆಲ್ಲಿ ದರ್ಬಾರ್‌ಗೆ ಬುಲ್ಸ್ ಪಲ್ಟಿ- ಫೈನಲ್‍ನಲ್ಲಿ ಡೆಲ್ಲಿ Vs ಪಾಟ್ನಾ ಫೈಟ್

Public TV
1 Min Read
PRO KABADDI 1 1

ಬೆಂಗಳೂರು: ಸೆಮಿಫೈನಲ್ ಕಾದಾಟದಲ್ಲಿ ತವರಿನ ತಂಡ ಬೆಂಗಳೂರು ಬುಲ್ಸ್ ವಿರುದ್ಧ ದಬಾಂಗ್ ಡೆಲ್ಲಿ 40-35, 5 ಅಂಕಗಳ ಅಂತರದ ಜಯ ಗಳಿಸಿ ಫೈನಲ್‍ಗೆ ಲಗ್ಗೆ ಇಟ್ಟಿದೆ.

PRO KABADDI 2

ಪಂದ್ಯದ ಆರಂಭದಿಂದಲೂ ಬೆಂಗಳೂರು ಮೇಲೆ ಸವಾರಿ ಮಾಡಿದ ಡೆಲ್ಲಿ ತಂಡದ ಕ್ಯಾಪ್ಟನ್ ನವೀನ್ ಕುಮಾರ್ ಸೂಪರ್ 10 ಅಂಕಗಳಿಸಿ ಗೆಲುವಿನ ರೂವಾರಿಯಾದರು. ಬುಲ್ಸ್ ಪರ ಗೆಲುವಿಗಾಗಿ ಹೋರಾಡಿದ ಪವನ್ ಕುಮಾರ್ ಹೋರಾಟ ವ್ಯರ್ಥವಾಯಿತು. ಮೊದಲಾರ್ಧದಲ್ಲಿ ಡೆಲ್ಲಿ 16 – ಬೆಂಗಳೂರು 17 ಪಾಯಿಂಟ್‍ಗಳೊಂದಿಗೆ ಬೆಂಗಳೂರು ಒಂದಂಕ್ಕದ ಮುನ್ನಡೆ ಪಡೆದುಕೊಂಡಿತು. ಬಳಿಕ ದ್ವಿತೀಯಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಡೆಲ್ಲಿ ಬುಲ್ಸ್ ಬೆವರಿಳಿಸಿತು. ಇದನ್ನೂ ಓದಿ: ಟಗರು ಲುಕ್‍ನಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ

PRO KABADDI 2 1

ಬೆಂಗಳೂರು ಬುಲ್ಸ್ 24 ರೈಡ್, 9 ಟೇಕಲ್, 2 ಇತರ ಅಂಕ ಸಹಿತ ಒಟ್ಟು 35 ಅಂಕ ಕಲೆ ಹಾಕಿತು. ಡೆಲ್ಲಿ 23 ರೈಡ್, 2 ಸೂಪರ್ ರೈಡ್, 11 ಟೇಕಲ್, 4 ಆಲೌಟ್ ಮತ್ತು 2 ಇತರ ಅಂಕ ಸಹಿತ 40 ಅಂಕ ಸಂಪಾದಿಸಿ 5 ಅಂಕಗಳ ಜಯ ಸಾಧಿಸಿತು. ರೈಡಿಂಗ್‍ನಲ್ಲಿ ಡೆಲ್ಲಿ ಪರ ನವೀನ್ ಕುಮಾರ್ 13 ರೈಡ್, 1 ಬೋನಸ್ ಸಹಿತ 14 ಪಾಯಿಂಟ್ ತಂಡಕ್ಕೆ ಕೊಡುಗೆ ನೀಡಿದರು. ಇತ್ತ ಬೆಂಗಳೂರು ಪರ ಪವನ್ ಕುಮಾರ್ 14 ರೈಡ್, 4 ಬೋನಸ್ ಸಹಿತ 18 ಅಂಕ ಕಲೆ ಹಾಕಿದರೂ ಹೋರಾಟ ವ್ಯರ್ಥ ಆಯಿತು. ಇದನ್ನೂ ಓದಿ: ಮೈದಾನದಲ್ಲಿ ಸಹ ಆಟಗಾರನಿಗೆ ಕಪಾಳಮೋಕ್ಷ ಮಾಡಿ ತಬ್ಬಿಕೊಂಡ ಹ್ಯಾರಿಸ್ ರೌಫ್ – ವೀಡಿಯೋ ವೈರಲ್

ಈ ಮೊದಲು ನಡೆದ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಯಪಿ ಯೋಧ ವಿರುದ್ಧ ಪಾಟ್ನಾ ಪೈರೇಟ್ಸ್ 38-27 ಅಂಕಗಳೊಂದಿಗೆ ಒಟ್ಟು 11 ಅಂಕಗಳ ಅಂತರದ ಜಯ ಸಾಧಿಸಿದೆ. ಈ ಮೂಲಕ ಫೆ.25 ರಂದು ಪಾಟ್ನಾ ಪೈರೇಟ್ಸ್ ಮತ್ತು ದಬಾಂಗ್ ಡೆಲ್ಲಿ ಫೈನಲ್ ಪಂದ್ಯದಲ್ಲಿ ಹೋರಾಡಲಿದೆ.

Share This Article
Leave a Comment

Leave a Reply

Your email address will not be published. Required fields are marked *