ಲಕ್ನೋ: ಪರಿವಾರವಾದಿಗಳು ಪಡಿತರವನ್ನು ಲೂಟಿ ಮಾಡಿದರು. ಆದರೆ ಬಿಜೆಪಿಯ ಒಂದು ರಾಷ್ಟ್ರ ಒಂದು ಪಡಿತರ ಚೀಟಿಯೊಂದಿಗೆ ಅವರ ಆಟವನ್ನು ಕೊನೆಗೊಳಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಉತ್ತರ ಪ್ರದೇಶದ ಕೌಶಾಂಬಿಯಲ್ಲಿನ ಪ್ರಚಾರದಲ್ಲಿ ಮಾತನಾಡಿದ ಅವರು, ಪರಿವಾರವಾದಿಗಳು ಬಡವರ ಪಡಿತರವನ್ನು ದೀರ್ಘಕಾಲ ಲೂಟಿ ಮಾಡಿದ್ದಾರೆ. ಆದರೆ ಬಿಜೆಪಿ ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆಯನ್ನು ತರುವ ಮೂಲಕ ಅದನ್ನು ಕೊನೆಗೊಳಿಸಿದೆ ಎಂದು ಪರೋಕ್ಷವಾಗಿ ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಬಿಜೆಪಿಯ ಕೋವಿಡ್ ಲಸಿಕೆ ಬಗೆಗಿನ ಟೀಕೆಗಳಿಗಾಗಿ ವ್ಯಂಗ್ಯವಾಡಿದರು. ಇದನ್ನೂ ಓದಿ: ವಿಶ್ವದ ನಂ.1 ಚೆಸ್ ಆಟಗಾರನ ವಿರುದ್ಧ ಗೆಲುವು – ಮೋದಿಯಿಂದ ಪ್ರಜ್ಞಾನಂದನಿಗೆ ಅಭಿನಂದನೆ
ಈ ಹಿಂದೆ ನೀವು ಕೋವಿಡ್ ಸಮಯದಲ್ಲಿ ಕೆಲ ನಾಯಕರನ್ನು ನೋಡಬೇಕು, ಕೊರೊನಾ ಸಾಂಕ್ರಾಮಿಕ ರೋಗವು ದೇಶದೆಲ್ಲಡೆ ಅತ್ಯಂತ ಗರಿಷ್ಠ ಮಟ್ಟದಲ್ಲಿದ್ದಾಗ ಮಾತನಾಡಿದ ಒಬ್ಬರು ಬಿಜೆಪಿ ಸರ್ಕಾರ ನಿಯಂತ್ರಿಸಿದಾಗ ಕಣ್ಮರೆಯಾದರು ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಆರ್ಸಿಬಿಯಲ್ಲಿ K.G.F ಸ್ಟಾರ್ಸ್
ಲಸಿಕೆ ವಿರುದ್ಧ ಕೆಲ ಪಕ್ಷದ ನಾಯಕರು ಜನರಿಗೆ ತಪ್ಪು ಮಾಹಿತಿ ನೀಡಿ ಪ್ರಚೋದಿಸಿದ್ದರು. ಆದರೆ ಅಂತಹ ನಾಯಕರೇ ಕೊನೆಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಲಸಿಕೆ ಹಾಕಿಸಿಕೊಂಡಿದ್ದಾರೆ. ಯುಪಿಯ ಜನರಿಗೆ ಇಂತಹ ಪ್ರಚೋದಿತ ನಾಯಕರ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ತಿರುಗೇಟು ನೀಡಿದರು.