ಮುಂಬೈ: ಟೀಂ ಇಂಡಿಯಾಕ್ಕೆ ಕಾಡುತ್ತಿದ್ದ 6ನೇ ಬೌಲರ್ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಐಪಿಎಲ್‍ನಲ್ಲಿ ಮಿಂಚಿ ಟೀಂ ಇಂಡಿಯಾಗೆ ಲಗ್ಗೆ ಇಟ್ಟ ವೆಂಕಟೇಶ್ ಅಯ್ಯರ್ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಪ್ರದರ್ಶನದ ಮೂಲಕ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಸಾಧಿಸಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಪರ ಬೌಲಿಂಗ್ ಮತ್ತು ಬ್ಯಾಟಿಂಗ್‍ನಲ್ಲಿ ಉತ್ತಮ ಪ್ರದರ್ಶನದ ಮೂಲಕ ವೆಂಕಟೇಶ್ ಅಯ್ಯರ್ ಅಲ್‍ರೌಂಡರ್ ಆಗಿ ಕಮಾಲ್ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಗಾಯಳುವಾಗಿ ಹೊರಗುಳಿದ ಬಳಿಕ ಟೀಂ ಇಂಡಿಯಾದಲ್ಲಿ 6ನೇ ಬೌಲರ್ ಸಮಸ್ಯೆ ಕಾಡುತ್ತಿತ್ತು. ಇದೀಗ ಈ ಸಮಸ್ಯೆಗೆ ಪರಿಹಾರವೆಂಬಂತೆ ವೆಸ್ಟ್ ಇಂಡೀಸ್ ಸರಣಿಯಲ್ಲಿ ಅಯ್ಯರ್ ತಮ್ಮ ನೈಜ ಪ್ರದರ್ಶನದ ಮೂಲಕ ಗಮನಸೆಳೆದಿದ್ದಾರೆ. ಇದನ್ನೂ ಓದಿ: ಧೋನಿ ಸಿಕ್ಸರ್ ನೆನಪಿಸಿದ ದಿನೇಶ್ ಬಣ ಫಿನಿಶಿಂಗ್ ಶಾಟ್
ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಉತ್ತಮ ಪ್ರದರ್ಶನದ ಮೂಲಕ ಆಯ್ಕೆಗಾರರ ಗಮನಸೆಳೆದ ಅಯ್ಯರ್‌ರನ್ನು ಟೀಂ ಇಂಡಿಯಾಗೆ ಆಯ್ಕೆ ಮಾಡಲಾಗಿತ್ತು. ಈ ಬಗ್ಗೆ ಮಾತನಾಡಿರುವ ಅಯ್ಯರ್, ನಾನು ಟೀಂ ಇಂಡಿಯಾದಲ್ಲಿ ಆಲ್‍ರೌಂಡರ್ ಆಗಿ ಆಡುವುದರೊಂದಿಗೆ ತಂಡದ ಫಿನಿಶಿಂಗ್ ಆಟಗಾರನಾಗಿ ಕಾಣಿಸಿಕೊಳ್ಳಲು ಬಯಸಿದ್ದೇನೆ. ತಂಡಕ್ಕಾಗಿ 6ನೇ ಬೌಲರ್ ರೂಪದಲ್ಲಿ ಕೊಡುಗೆ ನೀಡಲು ನಾನು ಇಷ್ಟ ಪಡುತ್ತೇನೆ. ತಂಡಕ್ಕಾಗಿ ನನ್ನ ಎಲ್ಲಾ ಶ್ರಮ ವಹಿಸಿ ಆಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮೈದಾನದಲ್ಲಿ ಸಹ ಆಟಗಾರನಿಗೆ ಕಪಾಳಮೋಕ್ಷ ಮಾಡಿ ತಬ್ಬಿಕೊಂಡ ಹ್ಯಾರಿಸ್ ರೌಫ್ – ವೀಡಿಯೋ ವೈರಲ್
ಅಯ್ಯರ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಬ್ಯಾಟಿಂಗ್‍ನಲ್ಲಿ ಕ್ರಮವಾಗಿ 24, 22 ಮತ್ತು 35 ರನ್ ಸಿಡಿಸಿದರೆ, ಬೌಲಿಂಗ್‍ನಲ್ಲಿ ಒಟ್ಟು 6 ಓವರ್ ಎಸೆದು 27 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದ್ದರು.