ಪ್ರಕ್ಷುಬ್ಧಗೊಂಡ ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ, ಖಾಕಿ ಭದ್ರತೆ

Public TV
1 Min Read
SMG

ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಮಧಿಸಿದಂತೆ ಶಿವಮೊಗ್ಗ ನಗರ ಬೂದಿ ಮುಚ್ಚಿದ ಕೆಂಡದಂತಿದ್ದು, ಇದೀಗ ಪೊಳೀಸರ ಭದ್ರಕೋಟೆಯಾಗಿದೆ.

ಹರ್ಷನ ಹತ್ಯೆ ಬೆನ್ನಲ್ಲೇ ಖಾಕಿ ಫುಲ್ ಅಲರ್ಟ್ ಆಗಿದೆ. ಶಿವಮೊಗ್ಗ ನಗರದಾದ್ಯಂತ ನಾಳೆ ಬೆಳಗ್ಗೆ 6 ಗಂಟೆವರೆಗೂ ಸೆಕ್ಷನ್ 144 ಜಾರಿ ಮಾಡಲಾಗಿದೆ. ಮುನ್ನೆಚ್ಚರಿಕೆಗಾಗಿ ಶಾಲೆ-ಕಾಲೇಜಿಗೂ ರಜೆ ಘೋಷಣೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ನಿನ್ನೆ ರಾತ್ರಿಯಿಂದ ನಾಳೆ ಮುಂಜಾನೆ 6 ಗಂಟೆಯವರೆಗೆ ಕಫ್ರ್ಯೂ ಜಾರಿ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಕರ್ಫ್ಯೂ ಜಾರಿ ನಡುವೆಯೂ ಮನೆ ಮುಂದೆ ನಿಲ್ಲಿಸಿದ್ದ ಒಂದು ಆಟೋ ಹಾಗು ಒಂದು ಬೈಕ್ ಗೆ ಬೆಂಕಿ ಹಚ್ಚಿದ ಘಟನೆ ಶಿವಮೊಗ್ಗದ ತುಂಗಾನಗರದಲ್ಲಿ ನಡೆದಿದೆ.

shivamogga clash 3

ನಡೆದಿದ್ದೇನು..?
ಭಾನುವಾರ ರಾತ್ರಿ ಹರ್ಷ ಕೊಲೆ ನಡೆದಿತ್ತು. ಮೃತ ಯುವಕನ ಅಂತಿಮ ಮೆರವಣಿಗೆ ಸಾಗುತ್ತಿದ್ದ ಉದ್ರಿಕ್ತರಿಂದ ಕಟ್ಟಡ, ಅಂಗಡಿಗಳಿಗೆ ಕಲ್ಲುತೂರಾಟ ನಡೆದಿದೆ. ಮೆರವಣಿಗೆ ವೇಳೆ ಮುಸ್ಲಿಂ ಪತಾಕೆ ಹಾರಿಸಿದ್ದರಿಂದ ಯುವಕರು ಪ್ರಚೋದನೆ ಒಳಗಾಗಿ ಮೆರವಣಿಗೆ ವೇಳೆಯೇ ಹಿಂಸೆ, ಕಲ್ಲು ತೂರಾಟ ನಡೆದಿದೆ. ಇದನ್ನೂ ಓದಿ: ಟ್ರೆಕ್ಕಿಂಗ್ ಹೋಗಿ ಅಪಾಯಕ್ಕೆ ಸಿಲುಕಿದ್ದ ಯುವಕನ ವಿರುದ್ಧ ಕೇಸ್ ದಾಖಲು!

shivamogga clash 2

ಸಿದ್ದಯ್ಯ ರಸ್ತೆ, ಗಾಂಧಿ ಬಜಾರ್ ರಸ್ತೆಯಲ್ಲಿ ಪರಸ್ಪರ ಕಲ್ಲು ತೂರಾಟ ನಡೆದಿದ್ದು, ಉದ್ರಿಕ್ತರನ್ನು ಚದುರಿಸಲು ಆಶ್ರುವಾಯು ಪ್ರಯೋಗ ನಡೆಯಿತು. ಆಜಾದ್ ನಗರದಲ್ಲಿ ಬೈಕ್, ಕಾರುಗಳು ಧ್ವಂಸಗೊಂಡಿದ್ದು, ಮನೆ, ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಅಂಗಡಿಯತ್ತ ಉದ್ರಿಕ್ತರು ಕಲ್ಲು ತೂರಿದ್ದರಿಂದ ಗಾಜುಗಳು ಪುಡಿ ಪುಡಿಯಾಗಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಬೈಕ್ ಹೊತ್ತಿ ಉರಿದಿದೆ. ಇದನ್ನೂ ಓದಿ: ಹಿಜಬ್ ಬಗ್ಗೆ ಕೊನೆಗೂ ಮೌನ ಮುರಿದ ಅಮಿತ್ ಶಾ

shivamogga clash 1

ಜಲ್ಲಿಕಲ್ಲು ತುಂಬಿದ ಲಾರಿಯಿಂದ ಉದ್ರಿಕ್ತರು ಕಲ್ಲುಗಳನ್ನು ಎಸೆದಿದ್ದಾರೆ. ಮನೆಗೆ ನುಗ್ಗಿ ಅಟ್ಟಹಾಸ, ಫ್ರಿಡ್ಜ್, ಬೀರು ಜಖಂಗೊಂಡಿದ್ದು ಕಾರುಗಳ ಗಾಜುಗಳು ಪುಡಿಪುಡಿಯಾಗಿದೆ. ಪೊಲೀಸರ ಮುಂದೆಯೇ ದೊಣ್ಣೆ ಪ್ರದರ್ಶನ ನೀಡಿದ್ದು ಮಚ್ಚು, ಲಾಂಗ್ ಹಿಡಿದು ಕೊಟ್ಟಿದ್ದಾರೆ. ಹಣ್ಣಿನ ತಳ್ಳುಗಾಡಿ ಧ್ವಂಸವಾಗಿದ್ದು ಕಲ್ಲುತೂರಾಟದ ವೇಳೆ ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *