ಕಲಬುರಗಿ: ಸಿಮೆಂಟ್ ಕ್ಲಿಂಕರ್ ಸಾಗಿಸುವ ಬೆಲ್ಟ್ಗೆ ಬೆಂಕಿ ತಗುಲಿ ಅವಘಡ ಸಂಭವಿಸಿರುವ ಘಟನೆ ಸೋಮವಾರ ಚಿತ್ತಾಪುರ ತಾಲೂಕು ವಾಡಿ ಗ್ರಾಮದ ಎಸಿಸಿ ಸಿಮೆಂಟ್ ಕಂಪನಿಯಲ್ಲಿ ನಡೆದಿದೆ.
ಕ್ಲಿಂಕರ್ ತಯಾರಿಸುವ ಎಸಿಸಿ ಘಟಕದಲ್ಲಿ ಸೋಮವಾರ ಬೆಳಗ್ಗೆ ಏಕಾಏಕಿ ಆಗಸದಲ್ಲಿ ದಟ್ಟವಾದ ಹೊಗೆ ಹರಡಿತ್ತು. ಭಯಂಕರ ಹೊಗೆ ಕಂಡು ನಗರದ ಜನರು ಮೊದಲಿಗೆ ಕಾರ್ಮೋಡ ಎಂದು ಭಾವಿಸಿದ್ದರು. ಬಳಿಕ ಎಸಿಸಿ ಕಂಪನಿ ಉಗುಳುತ್ತಿರುವ ವಿಷಕಾರಿ ಹೊಗೆ ಎಂದು ತಿಳಿದ ಜನರು ದಂಗಾಗಿದ್ದಾರೆ. ಇದನ್ನೂ ಓದಿ: ಕೋವಿಡ್ ಇದ್ದರೂ ಸೆಲ್ಫ್ ಐಸೋಲೇಷನ್ ಅಗತ್ಯವಿಲ್ಲ – ಇಂಗ್ಲೆಂಡ್ ಘೋಷಣೆ
ಘಟನೆಯಿಂದ ವಿಚಲಿತರಾದ ಎಸಿಸಿ ಕಂಪನಿಯ ಆಡಳಿತ ವರ್ಗ ಹಾಗೂ ಇಂಜಿನಿಯರ್‍ಗಳು, ಅವಘಡ ಸಂಭವಿಸಿದ ಸ್ಥಳದತ್ತ ದೌಡಾಯಿಸಿದ್ದಾರೆ. ಕ್ಲಿಂಕರ್ ಸಾಗಿಸುವ ಬೆಲ್ಟ್ ತುಂಡಾಗಿದೆಯೋ ಅಥವಾ ಕ್ಲಿಂಕರ್ ಸೈಲೋ ಹಾಳಾಗಿ ಬೆಂಕಿ ತಗುಲಿದೆಯೋ ಎಂಬುದನ್ನು ತಿಳಿಯಲು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಬ್ರಿಟನ್ ರಾಣಿ 2ನೇ ಎಲಿಜಬೆತ್‌ಗೆ ಕೊರೊನಾ ಸೋಂಕು – ಚೇತರಿಕೆಗೆ ಹಾರೈಸಿ ಪ್ರಧಾನಿ ಮೋದಿ ಟ್ವೀಟ್
ಘಟನೆಯಿಂದ ವಾಡಿ ನಗರ ಸೇರಿದಂತೆ ಸುತ್ತಲ ಗ್ರಾಮಗಳಾದ ಇಂಗಳಗಿ, ಕುಂದನೂರ, ಚಾಮನೂರ, ಹಳಕರ್ಟಿ, ಕಮರವಾಡಿ, ಕೊಂಚೂರ, ಬಳವಡಗಿ ಪರಿಸರ ಕಲುಷಿತಗೊಂಡಿದ್ದು ಜನರು ಆಕ್ರೋಶಗೊಂಡಿದ್ದಾರೆ.