ಅಖಿಲೇಶ್ ಯಾದವ್ ಬಾಬುವಾಗಿಯೇ ಇರ್ತಾರೆ: ಯೋಗಿ ವ್ಯಂಗ್ಯ

Public TV
1 Min Read
Akhilesh Yadav Yogi Adityanath

ಲಕ್ನೋ: ಅಖಿಲೇಶ್ ಯಾದವ್ ಅವರು ತಮ್ಮ ಜೀವನುದ್ದಕ್ಕೂ ಚಿಕ್ಕ ಹುಡುಗನಾಗಿಯೇ(ಬಾಬು) ಇರುತ್ತಾನೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಖಿಲೇಶ್ ಯಾದವ್ ಅವರನ್ನು ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಸರ್ಕಾರದ ಯೋಜನೆಗಳನ್ನು ಮೇಲ್ವಿಚಾರಣೆ ನಿರ್ವಹಿಸಲು ಇ-ಡ್ಯಾಶ್‍ಬೋರ್ಡ್ ಬಳಸುತ್ತಿದ್ದಾರೆ ಎನ್ನುವುದು ತಿಳಿದಿರಲಿಲ್ಲ ಎಂದು ವ್ಯಂಗ್ಯವಾಡಿದರು.

Akhilesh Yadavada

ಅಖಿಲೇಶ್ ಯಾದವ್ ಅವರು ಗ್ಯಾಜೆಟ್‍ಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಟ್ಯಾಬ್ಲೆಟ್‍ಗಳು ಮತ್ತು ಸ್ಮಾರ್ಟ್‍ಫೋನ್ ಗಳ ವಿತರಣೆಯನ್ನು ವಿಳಂಬ ಮಾಡಿದರು ಎಂದು ಅಖಿಲೇಶ್ ಯಾದವ್ ಅವರ ‘ಬಾಬಾ ಮುಖ್ಯಮಂತ್ರಿಯಾಗಿದ್ದಾರೆ’ ಎಂಬ ಹೇಳಿಕೆಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ಕಿಡ್ನಿದಾನ ಮಾಡಿದ ತಾಯಿ!

ಅಖಿಲೇಶ್ ಯಾದವ್ ಅವರು ನೀಡಿರುವ ಹೇಳಿಕೆಯೂ ಬಾಲಿಶವಾಗಿದೆ. ಇದರಿಂದಾಗಿ ಅವರು ಜೀವನುದ್ದಕ್ಕೂ ಬಾಬುವಾಗೇ(ಚಿಕ್ಕ ಮಗು) ಉಳಿಯುತ್ತಾರೆ. ಅವರು ಮೌಲ್ಯ ಮತ್ತುಸಂಸ್ಕೃತಿಯಿಂದ ದೂರವಿರುತ್ತಾರೆ ಎಂದು ಕಿಡಿಕಾರಿದರು.

web bjp logo 1538503012658

ತಮ್ಮ ಸರ್ಕಾರವು ಉತ್ತಮ ಆಡಳಿತದ ಭಾಗವಾಗಿ ಐಟಿಯನ್ನು ಬಳಸುತ್ತಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಮಧ್ಯವರ್ತಿಗಳು ಅಭಿವೃದ್ಧಿ ಯೋಜನೆಗಳ ಹಣವನ್ನು ಲೂಠಿ ಮಾಡಿತ್ತು. ಇದನ್ನು ತಡೆಯಲು ನಮ್ಮ ಸರ್ಕಾರವು ಇ-ಟೆಂಡರ್ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ಅಖಿಲೇಶ್‍ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಬಿಜೆಪಿಯ ಮುಸ್ಲಿಂ ವಿರೋಧಿ ಪೋಸ್ಟ್‌ ಡಿಲೀಟ್‌ ಮಾಡಿದ ಟ್ವಿಟ್ಟರ್‌

Share This Article
Leave a Comment

Leave a Reply

Your email address will not be published. Required fields are marked *