ಶಿವಮೊಗ್ಗ ಪ್ರಕರಣ ದುರದೃಷ್ಟಕರ – ಯುವಕನ ಹತ್ಯೆಗೆ ಯು.ಟಿ.ಖಾದರ್ ಆಕ್ರೋಶ

Public TV
1 Min Read
UT Khadar

ಶಿವಮೊಗ್ಗ: ಶಿವಮೊಗ್ಗ ಪ್ರಕರಣ ದುರದೃಷ್ಟಕರ. ಸರ್ಕಾರ ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

ನಗರದಲ್ಲಿ ಅನ್ಯಕೋಮಿನ ಗುಂಪೊಂದು ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ವಿಚಾರವಾಗಿ ಪಬ್ಲಿಕ್ ಟಿ.ವಿ ಜೊತೆಗೆ ಮಾತನಾಡಿದ ಅವರು, ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಪ್ರಕರಣದ ಆರೋಪಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಿ ಬಂಧಿಸಬೇಕು. ಸರ್ಕಾರಕ್ಕೆ ಇದು ನಾಚಿಕೆಗೇಡಿನ ವಿಚಾರ. ರಾಜ್ಯದ ಮಾಜಿ ಮುಖ್ಯಮಂತ್ರಿ, ಗೃಹ ಸಚಿವರು, ಹಿರಿಯ ಸಚಿವರೆಲ್ಲರೂ ಇರುವ ಪ್ರದೇಶದಲ್ಲಿ ಹಾಡಹಗಲಿನಲ್ಲಿಯೇ ಈ ಘಟನೆ ನಡೆದಿದೆ ಎಂದರೆ ಈ ಕಿಡಿಗೇಡಿಗಳಿಗೆ ಎಷ್ಟು ಧೈರ್ಯವಿದೆ. ಸರ್ಕಾರ ಹಾಗೂ ಕಾನೂನಿನ ಭಯವಿಲ್ಲ. ಇದು ದುರದೃಷ್ಟಕರ ಸಂಗತಿಯಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಯುವಕನ ಬರ್ಬರ ಹತ್ಯೆ – ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ

shivamogga 4

ಯಾರೋ ಮಾಡಿದ ಕೃತ್ಯಕ್ಕೆ ಯಾರನ್ನೊ ಕೊಂದು ಗಲಾಟೆ ಮಾಡುತ್ತಿದ್ದಾರೆ. ಸರ್ಕಾರ ನಷ್ಟ ಮಾಡಲು ಬಿಡಬಾರದು. ಯಾರು ಶಾಂತಿಗೆಡಿಸಲು ಪ್ರಯತ್ನಿಸುತ್ತಾರೆ ಅವರ ವಿರುದ್ಧ ಸೂಕ್ತವಾದ ಕ್ರಮಕೈಗೊಳ್ಳಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಆಡಳಿತ ಪಕ್ಷಕ್ಕೆ ನಾವು ಎಲ್ಲ ರೀತಿಯ ಕಾನೂನು ಸುವ್ಯವಸ್ಥೆಯನ್ನು ಜಾರಿಗೊಳಿಸಲು ಸಹಕಾರ ನೀಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮುಸಲ್ಮಾನ ಗೂಂಡಾಗಳಿಂದ ಬಿಜೆಪಿ ಕಾರ್ಯಕರ್ತನ ಕೊಲೆ: ಈಶ್ವರಪ್ಪ

Share This Article
Leave a Comment

Leave a Reply

Your email address will not be published. Required fields are marked *