ಹಾಲು ಕೊಡಲು ತಡ ಮಾಡಿದ್ದಕ್ಕೆ ಪತ್ನಿಗೆ ತಲಾಖ್

Public TV
1 Min Read
milk stock 08032020 1 e1596456347914

ಗಾಂಧಿನಗರ: ಮಹಿಳೆಯೊಬ್ಬರು ಹಾಲು ನೀಡಲು ತಡ ಮಾಡಿದ್ದಕ್ಕೆ ಪತಿರಾಯ ತ್ರಿವಳಿ ತಲಾಖ್ ನೀಡಿರುವ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. ಮಹಿಳೆ ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳೆ ತನ್ನ ಪತಿ ಹಾಗೂ ಅತ್ತೆ ವರದಕ್ಷಿಣೆಗಾಗಿ ಮಾನಸಿಕ ಕಿರುಕುಳ ಹಾಗೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ತನ್ನ ಅತ್ತೆ, ಮಾವ ಹಾಗೂ ಪತಿ ತನ್ನ ಪೋಷಕರಿಂದ 1 ಲಕ್ಷ ರೂ. ಪಡೆಯುವಂತೆ ಕೇಳಿದ್ದರು. ಇದಕ್ಕೆ ನಾನು ನಿರಾಕರಿಸಿದ್ದರಿಂದ ಜಗಳ ಪ್ರಾರಂಭವಾಗಿದೆ. ಅಂದಿನಿಂದ ತನಗೆ ದೌರ್ಜನ್ಯ ಮತ್ತು ಹಲ್ಲೆಗಳು ನಡೆದಿವೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಚುನಾವಣೆ ಪ್ರಚಾರದ ವೇಳೆ DMK ಅಭ್ಯರ್ಥಿ ಹೃದಯಾಘಾತದಿಂದ ಸಾವು

TripleTalaq 1

ಮಂಗಳವಾರ ತನ್ನ 5 ವರ್ಷದ ಮಗಳು ಹಾಲು ಹಾಗೂ ತಿಂಡಿ ಕೇಳಿದ್ದಳು. ಅದೇ ಸಮಯದಲ್ಲಿ ಪತಿಯೂ ನನಗೆ ಹಾಲು ನೀಡುವಂತೆ ಕೇಳಿದ್ದಾನೆ. ಆದರೆ ಮಹಿಳೆ ಮೊದಲು ಮಗುವಿಗೆ ಹಾಲು ನೀಡಿ ಬಳಿಕ ಪತಿಗೆ ಹಾಲನ್ನು ನೀಡಿದ್ದಾರೆ. ಇದನ್ನೂ ಓದಿ: ನನ್ನನ್ನು ಹೊರತಳ್ಳುವವರೆಗೆ ಕಾಂಗ್ರೆಸ್ ತೊರೆಯಲ್ಲ: ಮನೀಶ್ ತಿವಾರಿ

ತಡವಾಗಿ ಹಾಲು ನೀಡಿದ್ದಕ್ಕೆ ಕೆರಳಿದ್ದ ಪತಿ ತನ್ನ ಸಂಬಂಧಿಕರು ಹಾಗೂ ಪೋಷಕರ ಸಮ್ಮುಖದಲ್ಲಿ ಆಕೆಗೆ ತ್ರಿವಳಿ ತಲಾಖ್ ನೀಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *