Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ ಪ್ರತಿಷ್ಠಿತ ಪೀರ್ ಪ್ಲಾಟಿನಂ ಸರ್ಟಿಫಿಕೇಷನ್ ಪುರಸ್ಕಾರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ ಪ್ರತಿಷ್ಠಿತ ಪೀರ್ ಪ್ಲಾಟಿನಂ ಸರ್ಟಿಫಿಕೇಷನ್ ಪುರಸ್ಕಾರ

Bengaluru City

ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ ಪ್ರತಿಷ್ಠಿತ ಪೀರ್ ಪ್ಲಾಟಿನಂ ಸರ್ಟಿಫಿಕೇಷನ್ ಪುರಸ್ಕಾರ

Public TV
Last updated: February 16, 2022 8:13 pm
Public TV
Share
4 Min Read
Bengaluru airport 1
SHARE

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಿಸುವ ಬೆಂಗಳೂರು Kempegowda International Airport Bengaluru (ಬಿಐಎಎಲ್) ಕಟ್ಟಡದ ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಾಚರಣೆಯಲ್ಲಿ ಸುಸ್ಥಿರತೆಗೆ ಗ್ರೀನ್ ಬಿಲ್ಡಿಂಗ್ ಸರ್ಟಿಫಿಕೇಷನ್ ಇಂಕ್ (ಜಿಬಿಸಿಐ) ನೀಡುವ ಪ್ರತಿಷ್ಠಿತ ಪೀರ್(ಪರ್ಫಾರ್ಮೆನ್ಸ್ ಎಕ್ಸೆಲೆನ್ಸ್ ಇನ್ ಎಲೆಕ್ಟ್ರಿಸಿಟಿ ರಿನಿವಲ್) ಪ್ಲಾಟಿನಂ ಸರ್ಟಿಫಿಕೇಷನ್ ಪಡೆದಿದೆ. ಈ ಮಾನ್ಯತೆಯಿಂದ ಬಿಐಎಎಲ್ ತನ್ನ ವಿಮಾನ ನಿಲ್ದಾಣದ ವಿದ್ಯುಚ್ಛಕ್ತಿ ಮೂಲಸೌಕರ್ಯಕ್ಕೆ ಅಸಾಧಾರಣವಾದ 92/100 ಅಂಕ ಪಡೆದ ವಿಶ್ವದಲ್ಲೇ ಮೊದಲ ವಿಮಾನ ನಿಲ್ದಾಣ ನಿರ್ವಾಹಕ ಎನಿಸಿದೆ.

bengaluru airport 1 1

ಬೆಂಗಳೂರು ವಿಮಾನ ನಿಲ್ದಾಣದ ವಿದ್ಯುತ್ ವ್ಯವಸ್ಥೆಯು ಅದರ ಸುಸ್ಥಿರ ಅಭಿವೃದ್ಧಿ, ಗುರಿಗಳಿಗೆ ಪೂರಕವಾಗಿರುವುದನ್ನು ಮುಂದುವರಿಸುವ ಬಿಐಎಎಲ್ ವಿಮಾನ ನಿಲ್ದಾಣದ ವಿದ್ಯುಚ್ಛಕ್ತಿ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲು ಮತ್ತು ಸುಧಾರಿಸಲು ಪೀರ್ ಪ್ರಮಾಣೀಕರಣ ಪಡೆದಿದ್ದು, ಇದು ಜಿಬಿಸಿಐನ ಕಠಿಣ ಪ್ರಮಾಣೀಕರಣ ಮತ್ತು ಪರಿಶೀಲನೆಯ ಪ್ರಕ್ರಿಯೆಗೆ ಒಳಪಟ್ಟಿತ್ತು. ಇದನ್ನೂ ಓದಿ: ಇಂದು ಸಂಜೆಯಿಂದ ಲಘು ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್‌ ಮುಕ್ತ

ಜಿಬಿಸಿಐ ವಿಶ್ವದ ಮುಂಚೂಣಿಯ ಸುಸ್ಥಿರತೆ ಮತ್ತು ಆರೋಗ್ಯ ಪ್ರಮಾಣೀಕರಣ ಹಾಗೂ ಅಧಿಕೃತತೆ ನೀಡುವ ಸಂಸ್ಥೆಯಾಗಿದೆ ಮತ್ತು ಲೀಡ್ ಹಸಿರು ಕಟ್ಟಡ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ ಹೊಂದಿದೆ. ಬಿಐಎಎಲ್ ಸುಸ್ಥಿರವಾಗಿ ನಿರ್ಮಿಸಲು ತನ್ನ ಬದ್ಧತೆಯ ಮೂಲಕ ಅಸಾಧಾರಣ ಕಾರ್ಯಕ್ಷಮತೆ ನಿರೂಪಿಸಿದೆ. ಈ ಯೋಜನೆಯ ಶೇ. 98ರಷ್ಟು ವಿತರಣೆಯ ಪರಿಧಿಯು ವಿತರಣೆಯ ಪುನರುಕ್ತಿ ಮತ್ತು ಸ್ವಯಂ ಪುನಃ ಸ್ಥಾಪನೆಗೊಳ್ಳುವ ಸಾಮರ್ಥ್ಯ ಹೊಂದಿದೆ. ಇದು 6.8 ಮೆಗಾವ್ಯಾಟ್‌ನ ಸ್ಥಳದಲ್ಲಿ ಸೋಲಾರ್ ಪಿವಿ ವ್ಯವಸ್ಥೆಯನ್ನು ಹೊಂದಿದ್ದು,  ಗ್ರಿಡ್ ವೈಫಲ್ಯ ಮತ್ತು ದೀರ್ಘಾವಧಿ ವಿದ್ಯುತ್ ಸ್ಥಗಿತಗೊಂಡಾಗ ನೆರವಾಗುತ್ತದೆ ಮತ್ತು ಇದರ ಶೇ.100ರಷ್ಟು ಶಕ್ತಿಯು ನವೀಕರಿಸಬಲ್ಲ ಶಕ್ತಿಯಾಗಿದೆ.

ತನ್ನ ಶಕ್ತಿಯ ಬೇಡಿಕೆ ಮತ್ತು ಬಳಕೆಯಲ್ಲಿ ಶಾಶ್ವತವಾಗಿ ಕಡಿತ ಮಾಡಲು ಬಿಐಎಎಲ್ ಎಲ್ಲ ಸಿಎಫ್‌ಎಲ್(ಕಾಂಪ್ಯಾಕ್ಟ್ ಫ್ಲೋರೊಸೆಂಟ್ ಲ್ಯಾಂಪ್) ಹ್ಯಾಲೊಜೆನ್ ದೀಪಗಳನ್ನು ಎಲ್‌ಇಡಿ, ಪಿಎಲ್‌ಸಿ (ಪ್ರೋಗ್ರಾಮಬಲ್ ಲಾಜಿಕ್ ಕಂಟ್ರೋಲರ್) ಆಧರಿತ ಟರ್ಮಿನಲ್ ಲೈಟ್ ಆಟೊಮೇಷನ್ ಸಿಸ್ಟಂ(ಟಿಎಲ್‌ಎ) ಮೂಲಕ ಟರ್ಮಿನಲ್ ದೀಪಗಳ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ಮತ್ತು ವಿವಿಧ ಲೋಡ್ ಸಂದರ್ಭಗಳಲ್ಲಿ ಶೀತಲ ಗೃಹದ ಕಾರ್ಯಕ್ಷಮತೆ ಉತ್ತಮಪಡಿಸಲು ಚಿಲ್ಲರ್ ಪ್ಲಾಂಟ್ ಆಪ್ಟಿಮೈಸರ್(ಸಿಪಿಒ) ಬಳಸುತ್ತದೆ. ಒಟ್ಟಾರೆಯಾಗಿ ನವೀಕರಿಸಬಲ್ಲ ಶಕ್ತಿ ಬಳಕೆ, ಶಕ್ತಿ ಸಂರಕ್ಷಣೆಯ ಕ್ರಮಗಳು ಮತ್ತು ಸುಸ್ಥಿರ, ದಕ್ಷ ವ್ಯವಸ್ಥೆಯನ್ನು ನೀಡುವ ಆಧುನಿಕ ವ್ಯವಸ್ಥೆಯು ವಿಮಾನ ನಿಲ್ದಾಣಕ್ಕೆ 14.7 ಮಿಲಿಯನ್ ಯೂನಿಟ್‌ ವಿದ್ಯುಚ್ಛಕ್ತಿ ಉಳಿತಾಯ ಮಾಡಲು ನೆರವಾಗಿದ್ದು 84 ಮಿಲಿಯನ್ ರೂ.ಗಳು(1.2 ಮಿಲಿಯನ್ ಡಾಲರ್) ವೆಚ್ಚ ಉಳಿಸಲು ನೆರವಾಗಿದೆ ಮತ್ತು ವಾರ್ಷಿಕ 46 ಕಿಲೋಟನ್ನುಗಳಷ್ಟು ಇಂಗಾಲದ ಡೈಆಕ್ಸೆಡ್ ಹೊರಹೊಮ್ಮುವಿಕೆ ನಿವಾರಿಸಿದೆ. ಇದನ್ನೂ ಓದಿ:  ಸಚಿವ ಈಶ್ವರಪ್ಪ ನಿವಾಸಕ್ಕೆ ಯೂತ್ ಕಾಂಗ್ರೆಸ್ ಮುತ್ತಿಗೆ

bengaluru airport

ಬಿಐಎಎಲ್‌ನ ಎಂ.ಡಿ. ಮತ್ತು ಸಿಇಒ ಹರಿ ಮರಾರ್ ಮಾತನಾಡಿ, ವಿದ್ಯುಚ್ಛಕ್ತಿ ಉಳಿಸುವಲ್ಲಿ ನಮ್ಮ ಸತತ ಪರಿಶ್ರಮಕ್ಕೆ ಜಿಬಿಸಿಐನಿಂದ ಈ ಪುರಸ್ಕಾರ ಪಡೆದಿರುವುದು ನಮಗೆ ಬಹಳ ಹೆಮ್ಮೆ ತಂದಿದೆ. ವಿಶ್ವಮಟ್ಟದ ವಿಮಾನ ನಿಲ್ದಾಣ ನಿರ್ವಹಿಸುವ ಸಂಸ್ಥೆಯಾಗಿ ಬಿಐಎಎಲ್ ಸ್ಥಳದಲ್ಲಿಯೇ ನವೀಕರಿಸಬಲ್ಲ ವಿದ್ಯುಚ್ಛಕ್ತಿ ಉತ್ಪಾದನಾ ವ್ಯವಸ್ಥೆಗಳನ್ನು ಸ್ಥಾಪಿಸಲು, ಹೊರಗಿನಿಂದ ನವೀಕರಿಸಬಲ್ಲ ವಿದ್ಯುತ್ ಪಡೆಯಲು ಮತ್ತು 2020-21ರ ವೇಳೆಗೆ ನೆಟ್ ಎನರ್ಜಿ ನ್ಯೂಟ್ರಲ್ ಆಗಿಸುವ ದೀರ್ಘಾವಧಿ ಗುರಿ ಸಾಧಿಸಲು ಹಲವಾರು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪೀರ್ ಪ್ಲಾಟಿನಂ ರೇಟಿಂಗ್ ಮಾನ್ಯತೆಯು ನಮಗೆ ನಮ್ಮ ಪ್ರಯಾಣಿಕರ ಹೆಚ್ಚಾಗುತ್ತಿರುವ ವಿಮಾನ ಸಾರಿಗೆ ಅಗತ್ಯಗಳನ್ನು ಪೂರೈಸುತ್ತಲೇ ಸುಸ್ಥಿರತೆಯ ಪ್ರಯಾಣಕ್ಕೆ ವೇಗ ತುಂಬಲು ಮತ್ತಷ್ಟು ಉತ್ತೇಜಿಸಿದೆ ಎಂದು ಹೇಳಿದ್ದಾರೆ.

ಜಿಬಿಸಿಐ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಯುಎಸ್‌ಜಿಬಿಸಿಯ ಹಿರಿಯ ಉಪಾಧ್ಯಕ್ಷೆ ಮಿಲಿ ಮಜುಂದಾರ್, ಸುಸ್ಥಿರತೆ ಸಾಧಿಸಲು ಕಟ್ಟಡಗಳು ಮತ್ತು ಸಂಸ್ಥೆಗಳು ಹೇಗೆ ಜೊತೆಗೂಡಿ ಕೆಲಸ ಮಾಡಬಹುದು ಎನ್ನುವುದಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅದ್ಭುತ ಉದಾಹರಣೆಯಾಗಿದೆ. ಜಿಬಿಸಿಐನಲ್ಲಿ ನಾವು ಅತ್ಯಂತ ಹಸಿರು ಕಟ್ಟಡವೆಂದರೆ ಅದು ನಾವು ನಿರ್ಮಿಸಿರುವುದೇ ಎಂದು ಹೇಳುತ್ತೇವೆ. ಕಟ್ಟಡವೊಂದು ಅತ್ಯಂತ ವಿದ್ಯುತ್ ಕ್ಷಮತೆ ಹೊಂದಿದ್ದರೂ ಪ್ರಸ್ತುತ ಇರುವ ಕಟ್ಟಡವನ್ನು ಕೆಡವಿ ಅದನ್ನು ಹೊಸ ಕಟ್ಟಡದೊಂದಿಗೆ ಬದಲಾಯಿಸುವುದು ೮೦ ವರ್ಷಗಳು ತೆಗೆದುಕೊಳ್ಳಬಹುದು. ಇಂಗಾಲ ನಿವಾರಣೆಯ ಪ್ರಯತ್ನಗಳಲ್ಲಿ ಪ್ರಸ್ತುತ ಇರುವ ಕಟ್ಟಡಗಳು ಪ್ರಮುಖ ಪಾತ್ರ ವಹಿಸುತ್ತವೆ, ಏಕೆಂದರೆ ಅವು ಕಟ್ಟಡಗಳು ಎಲ್ಲ ಇಂಗಾಲದ ಹೊರಹೊಮ್ಮುವಿಕೆಯ ಶೇ.೪೦ಕ್ಕೆ ಕಾರಣವಾಗುತ್ತವೆ ಮತ್ತು ಜಿಬಿಸಿಐ ಇಂಡಿಯಾ ಡೆವಲಪರ್‌ಗಳು, ಉತ್ಪಾದಕರು ಹಾಗೂ ಸಣ್ಣ ಮತ್ತು ಮಧ್ಯಮ ಹಂತದ ಉದ್ಯಮಗಳೊಂದಿಗೆ ಪ್ರಸ್ತುತ ಕಟ್ಟಡಗಳ ಹಸಿರೀಕರಣ ಸುಧಾರಿಸಲು ಶ್ರಮಿಸುತ್ತಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸುಸ್ಥಿರ ಅಭಿವೃದ್ಧಿಗೆ ತನ್ನ ಬದ್ಧತೆಯಲ್ಲಿ ಉನ್ನತ ಸಾಧನೆ ಮಾಡಿದೆ. ಪೀರ್ ಪ್ಲಾಟಿನಂ ಮಾನ್ಯತೆ ಪಡೆದಿರುವುದಕ್ಕೆ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಅನ್ನು ಅಭಿನಂದಿಸಲು ಬಯಸುತ್ತೇನೆ ಮತ್ತು ಇತರೆ ವಿಮಾನ ನಿಲ್ದಾಣಗಳೂ ಹಸಿರು ವಿಧಾನದತ್ತ ಮುನ್ನಡೆಯಲು ಕೋರುತ್ತೇನೆ ಎಂದರು.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ ಮತ್ತು ಸುಸ್ಥಿರವಾಗಿ ನಿರ್ಮಿಸುವಲ್ಲಿ ತನ್ನ ಬದ್ಧತೆಯನ್ನು ಅಸಾಧಾರಣ ಕಾರ್ಯಕ್ಷಮತೆಯೊಂದಿಗೆ ನಿರೂಪಿಸಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸನ್ನದ್ಧವಾದ, ಸಂಪರ್ಕರಹಿತ ಪ್ರಯಾಣಿಕರ ಪರಿಶೀಲನೆ, ಸೆಲ್ಫ್-ಬ್ಯಾಗೇಜ್ ಡ್ರಾಪ್ಸ್, ಬಯೋಮೆಟ್ರಿಕ್ ಆಧರಿಸಿದ ಸೆಲ್ಫ್-ಬೋರ್ಡಿಂಗ್ ವ್ಯವಸ್ಥೆ ಹಾಗೂ ಅತ್ಯುತ್ತಮವಾಗಿ ರೂಪಿಸಿದ ಮಾರ್ಗಗಳ ಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣವು 74 ಸ್ಥಳೀಯ ತಾಣಗಳು ಮತ್ತು ವಿಶ್ವದ ಅಂತಾರಾಷ್ಟಿçÃಯ ಮಾರುಕಟ್ಟೆಗಳನ್ನು ಸಂಪರ್ಕಿಸುತ್ತದೆ. ಕಳೆದ ಒಂದು ದಶಕಕ್ಕೂ ಮೇಲ್ಪಟ್ಟು ಬಿಐಎಎಲ್ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದು ಅದರಲ್ಲಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ರಿವ್ಯೂ ಅವಾಡ್ಸ್( 2019), ಇಂಡಿಯಾ ಕಾರ್ಗೊ ಅವಾರ್ಡ್ಸ್(2020)ನಲ್ಲಿ ಬೆಸ್ಟ್ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಪುರಸ್ಕಾರ ಗೆದ್ದಿದೆ, ಎಫ್‌ಐಸಿಸಿಐ ಸ್ಮಾರ್ಟ್ ಅರ್ಬನ್ ಇನ್ನೊವೇಷನ್ ಅವಾರ್ಡ್ ಫಾರ್ ಸೋಲಾರ್ ಅಂಡ್ ರಿನೀವಬಲ್ ಎನರ್ಜಿ(2021) ಮತ್ತು ಎನ್ವಿರಾನ್‌ಮೆಂಟಲ್ ಬೆಸ್ಟ್ ಪ್ರಾಕ್ಟೀಸಸ್ 2021 ಪುರಸ್ಕಾರವನ್ನು ಇಂಪ್ಯಾಕ್ಟ್ ಮಿಟಿಗೇಷನ್ ಅಂಡ್ ಅಡಾಪ್ಷನ್ ವಿಭಾಗದಲ್ಲಿ ಪಡೆದಿದೆ.

TAGGED:airportbengalurukempegowda international airportಏರ್‍ಪೋರ್ಟ್ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಬೆಂಗಳೂರು
Share This Article
Facebook Whatsapp Whatsapp Telegram

Cinema news

shiva rajkumar
ಫ್ಯಾನ್ಸ್ ವಾರ್ ಬಗ್ಗೆ ನಟ ಶಿವರಾಜ್‌ಕುಮಾರ್ ಖಡಕ್ ರಿಯಾಕ್ಷನ್
Cinema Latest Sandalwood Top Stories
Ravi Basrur
ಕಿಶೋರ್ ಮೇಗಳಮನೆ ನಿರ್ದೇಶನದ ಚಿತ್ರಕ್ಕೆ ಬಸ್ರೂರು ಸಂಗೀತ
Cinema Latest Sandalwood Top Stories
45 movie 3
`45′ ತ್ರಿಮೂರ್ತಿಗಳ ಸಂಗಮ.. ಕಣ್ತುಂಬಿಕೊಂಡ ಪ್ರೇಕ್ಷಕರ ಜೈಕಾರ..!
Cinema Latest Sandalwood Top Stories
Bigg Boss Kannada 12 Gilli Nata Parents
ಗಿಲ್ಲಿಗೆ ಕೋಲಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ತಂದೆ
Latest Top Stories TV Shows

You Might Also Like

Tiger 1
Districts

ಮೈಸೂರು | ಅನಾರೋಗ್ಯದಿಂದ ಬಳಲುತ್ತಿದ್ದ ಐದು ವರ್ಷದ ತಾಯಮ್ಮ ಹುಲಿ ಸಾವು

Public TV
By Public TV
28 minutes ago
DK Shivakumar 9
Bengaluru City

ಕಾರ್ಯಕರ್ತನಾಗಿ ಕಸ ಗುಡಿಸಿ, ಅಧ್ಯಕ್ಷನಾಗಿ ಪಕ್ಷದ ಬಾವುಟ ಕಟ್ಟಿ, ಎಲ್ಲ ಕೆಲಸ ಮಾಡಿದ್ದೇನೆ: ಡಿಕೆಶಿ

Public TV
By Public TV
36 minutes ago
BY Vijayendra
Bengaluru City

ಕಾಂಗ್ರೆಸ್ ವಿರುದ್ಧ ಆಡಳಿತ ವಿರೋಧಿ ಅಲೆ; ಯಾವಾಗ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ: ವಿಜಯೇಂದ್ರ

Public TV
By Public TV
39 minutes ago
Raichuru Mantralaya
Districts

ಮಂತ್ರಾಲಯದಲ್ಲಿ ಕಿಕ್ಕಿರಿದ ಜನಸಾಗರ – ಒಂದೇ ದಿನ ಹರಿದುಬಂದ ಲಕ್ಷಾಂತರ ಭಕ್ತಗಣ

Public TV
By Public TV
57 minutes ago
Train
Bengaluru City

ಬೆಂಗಳೂರಿಂದ ವಿಜಯಪುರಕ್ಕೆ ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಪ್ರಪ್ರಥಮ ವಿಶೇಷ ರೈಲು

Public TV
By Public TV
1 hour ago
Satish Jarkiholi 1
Bengaluru City

ರಾಜ್ಯದ ಆಂತರಿಕ ಕಚ್ಚಾಟ ಕಾಂಗ್ರೆಸ್‌ ಹೈಕಮಾಂಡ್ ಸರಿಪಡಿಸಲಿ: ಸತೀಶ್‌ ಜಾರಕಿಹೊಳಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?