ಸಚಿವ ಈಶ್ವರಪ್ಪ ನಿವಾಸಕ್ಕೆ ಯೂತ್ ಕಾಂಗ್ರೆಸ್ ಮುತ್ತಿಗೆ

Public TV
1 Min Read
Eshwarappa DK Shivakumar

ಬೆಂಗಳೂರು: ಸಚಿವ ಈಶ್ವರಪ್ಪ ನಿವಾಸಕ್ಕೆ ಯೂತ್ ಕಾಂಗ್ರೆಸ್ ಮುತ್ತಿಗೆ ಹಾಕಿದ್ದು, ಸರ್ಕಾರಿ ನಿವಾಸದೆದುರು ನಲಪಾಡ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದಾರೆ.

ಗಾಂಧಿಭವನ ರಸ್ತೆಯಲ್ಲಿರುವ ಈಶ್ವರಪ್ಪ ನಿವಾಸದ ಎದರು ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಚಿವ ಸ್ಥಾನದಿಂದ ಈಶ್ವರಪ್ಪ ಅಮಾನತಿಗೆ ಆಗ್ರಹಿಸಿದ್ದಾರೆ.

ವಿಧಾನಸೌಧ ಕಲಾಪದಲ್ಲಿ ಡಿಕೆ ಶಿವಕುಮಾರ್ ಮತ್ತು ಸಚಿವ ಈಶ್ವರಪ್ಪ ಮಧ್ಯೆ ಧ್ವಜ ಸಂಘರ್ಷ ನಡೆದಿದೆ. ಇವತ್ತು ಕಲಾಪದಲ್ಲಿ ಕಾಂಗ್ರೆಸ್ಸಿಗರು ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿದರು. ಈಶ್ವರಪ್ಪಗೆ ಡಿಕೆಶಿ ರಾಷ್ಟ್ರದ್ರೋಹಿ ಅಂದ್ರು. ಆಕ್ರೋಶದಿಂದ ಎದ್ದ ಈಶ್ವರಪ್ಪ, ಯಾರು ರಾಷ್ಟ್ರ ದ್ರೋಹಿ, ನೀನು ರಾಷ್ಟ್ರದ್ರೋಹಿ, ಸದನ ಯಾರಪ್ಪನ ಆಸ್ತಿ ಅಲ್ಲ ಅಂತಾ ಏಕವಚನದಲ್ಲೇ ಗುಡುಗಿದರು. ಡಿಕೆಶಿ ಯಾರಿಗೆ ಹೇಳ್ತಿದ್ದೀಯಾ ಅಂತ ಆವೇಶದಿಂದ ಈಶ್ವರಪ್ಪ ಅವರತ್ತ ನುಗ್ಗಿದರು. ಈ ವೇಳೆ ಹೊಯ್‍ಕೈವರೆಗೆ ತಲುಪಿತ್ತು.

ಮಧ್ಯಾಹ್ನದ ಬಳಿಕ ಸದನ ಆರಂಭವಾದರೂ ಮತ್ತ ಗದ್ದಲ ಮುಂದುವರಿಯಿತು. ಯಡಿಯೂರಪ್ಪ ಸೂಚನೆ ಮೇರೆಗೆ ಎಲ್ಲರೂ ಈಶ್ವರಪ್ಪರ ಸಹಾಯಕ್ಕೆ ನಿಂತ್ರು. ನಿಲುವಳಿ ಸೂಚನೆಗೆ ಇದು ಅರ್ಹ ಅಲ್ಲ ಅಂತ ಕಾಂಗ್ರೆಸ್ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದರು.

Share This Article
Leave a Comment

Leave a Reply

Your email address will not be published. Required fields are marked *