ಪಂಜಾಬ್‌ ಕಾಂಗ್ರೆಸ್‌ ಸರ್ಕಾರ ರಿಮೋಟ್‌ ಕಂಟ್ರೋಲ್‌ನಲ್ಲಿದೆ: ಮೋದಿ

Public TV
1 Min Read
modi

ಚಂಡೀಗಢ: ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರ ರಿಮೋಟ್‌ ಕಂಟ್ರೋಲ್‌ನಲ್ಲಿ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದಾರೆ.

Rahul Gandhi 2

ಜಲಂಧರ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. ದಿಲ್ಲಿಯಿಂದ ಕ್ಯಾಪ್ಟನ್‌ ಸರ್ಕಾರವನ್ನು ನಡೆಸುವುದು ನಮಗೆ ಇಷ್ಟವಿಲ್ಲ. ಕಾಂಗ್ರೆಸ್‌ ಸರ್ಕಾರಗಳು ಒಂದು ಕುಟುಂಬದ ರಿಮೋಟ್‌ ಕಂಟ್ರೋಲ್‌ನಿಂದ ನಡೆಯುತ್ತಿವೆಯೇ ಹೊರತು ಸಂವಿಧಾನದಿಂದಲ್ಲ. ಕಾಂಗ್ರೆಸ್‌ ಈಗ ತನ್ನ ದುಷ್ಕೃತ್ಯಗಳಿಗೆ ಬೆಲೆ ತೆತ್ತಿದೆ ಎಂದು ಕಾಂಗ್ರೆಸ್‌ ವಿರುದ್ಧ ಮೋದಿ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ದೇಶದ ಭದ್ರತೆಗಾಗಿ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುತ್ತೇವೆ: ಕೇಜ್ರಿವಾಲ್‌

ಕಾಂಗ್ರೆಸ್‌ನ ಸ್ಥಿತಿ ನೋಡಿ. ಅವರದೇ ಪಕ್ಷ ಛಿದ್ರವಾಗುತ್ತಿದೆ. ಅವರ ನಾಯಕರೇ ಅವರನ್ನು ಬಯಲಿಗೆಳೆಯುತ್ತಿದ್ದಾರೆ. ಅಷ್ಟೊಂದು ಒಳಜಗಳ ಹೊಂದಿರುವ ಪಕ್ಷ ಪಂಜಾಬ್‌ಗೆ ಸ್ಥಿರ ಸರ್ಕಾರ ನೀಡಬಹುದೇ ಎಂದು ಮೋದಿ ಪ್ರಶ್ನಿಸಿದ್ದಾರೆ.

Charanjit Singh Channi

ಬಿಜೆಪಿಯೊಂದಿಗೆ ಹೊಸ ಪಂಜಾಬ್‌, ಹೊಸ ತಂಡದೊಂದಿಗೆ ಹೊಸ ಪಂಜಾಬ್‌ ಎಂದು ಘೋಷಣೆ ಕೂಗಿದ ಪ್ರಧಾನಿ ಮೋದಿ, ನಾನು ದೇವಿಕಾ ತಾಲಾಬ್‌ಗೆ ಭೇಟಿ ನೀಡಲು ಬಯಸಿದ್ದೆ. ಆದರೆ ಭದ್ರತೆಯ ಕಾರಣ ಅದನ್ನು ಅನುಮತಿಸಲು ಸಾಧ್ಯವಿಲ್ಲ ಎಂದು ಪಂಜಾಬ್‌ ಪೊಲೀಸರು ಹೇಳಿದ್ದಾರೆ. ಇದು ಪಂಜಾಬ್‌ ಭದ್ರತೆಯ ಸ್ಥಿತಿ ಎಂದು ಚಾಟಿ ಬೀಸಿದ್ದಾರೆ. ಇದನ್ನೂ ಓದಿ: 80% ವರ್ಸಸ್ 20% ಧರ್ಮ ಆಧಾರಿತ ಹೇಳಿಕೆಯಲ್ಲ: ಯೋಗಿ ಆದಿತ್ಯನಾಥ್ ಸ್ಪಷ್ಟನೆ

Share This Article
Leave a Comment

Leave a Reply

Your email address will not be published. Required fields are marked *