Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅನ್ವೇಷಣೆಯ ಹಾದಿಯಲ್ಲಿ ಸೋಲಿಗೆ ಹೆದರಬೇಡಿ: ಯುವ ವಿಜ್ಞಾನಿ ಗೀತಾಂಜಲಿ ರಾವ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಅನ್ವೇಷಣೆಯ ಹಾದಿಯಲ್ಲಿ ಸೋಲಿಗೆ ಹೆದರಬೇಡಿ: ಯುವ ವಿಜ್ಞಾನಿ ಗೀತಾಂಜಲಿ ರಾವ್

Latest

ಅನ್ವೇಷಣೆಯ ಹಾದಿಯಲ್ಲಿ ಸೋಲಿಗೆ ಹೆದರಬೇಡಿ: ಯುವ ವಿಜ್ಞಾನಿ ಗೀತಾಂಜಲಿ ರಾವ್

Public TV
Last updated: February 14, 2022 9:23 am
Public TV
Share
3 Min Read
nternational Day for Women and Girls in Science
SHARE

ಚೆನ್ನೈ: ಗಮನಿಸುವಿಕೆ, ಚರ್ಚೆ, ಸಂಶೋಧನೆ, ನಿರ್ಮಾಣ ಮತ್ತು ಸಂವಹನ ಈ ಐದು ಅಂಶಗಳು ಯಾವುದೇ ಅನ್ವೇಷಣೆಯಲ್ಲಿ ಪ್ರಮುಖ ಹೆಜ್ಜೆಗಳಾಗಿದ್ದು, ಸಂಶೋಧನೆಯಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳು, ಯುವ ವಿಜ್ಞಾನಿಗಳು ಯಶಸ್ಸಿಗಾಗಿ ಈ ಮಾರ್ಗ ಅನುಸರಿಸಬೇಕು ಎಂದು ಭಾರತೀಯ ಮೂಲದ ಅಮೆರಿಕ ಯುವ ವಿಜ್ಞಾನಿ ಗೀತಾಂಜಲಿ ರಾವ್ ಪ್ರತಿಪಾದಿಸಿದರು.

ಚೆನ್ನೈಯ ಅಮೆರಿಕ ದೂತಾವಾಸ ಹೈದರಾಬಾದ್, ಕೋಲ್ಕತ್ತಾ ಮತ್ತು ಮುಂಬೈನ ಅಮೆರಿಕ ದೂತವಾಸಗಳ ಜೊತೆ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ವಲಯದಲ್ಲಿನ ಮಹಿಳೆ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಗೀತಾಂಜಲಿ ರಾವ್ ಮಾತನಾಡಿದರು.

ವಾಟರ್ ಗರ್ಲ್ ಆಫ್ ಇಂಡಿಯಾ ಖ್ಯಾತಿಯ ಗರ್ವಿತಾ ಗುಲಾಟಿ ಅವರೊಂದಿಗಿನ ಸಂವಾದದಲ್ಲಿ ಭಾಗವಹಿಸಿದ್ದ ಗೀತಾಂಜಲಿ ರಾವ್ ಶೈಕ್ಷಣಿಕ ಸಾಧನೆ ಮತ್ತು ಅಂಕಗಳ ಮೇಲಷ್ಟೇ ಗಮನ ಕೇಂದ್ರೀಕರಿಸುವುದರ ಬದಲು ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಇತ್ಯಾದಿಗಳ ಬಗ್ಗೆ ಗಮನಹರಿಸಬೇಕು. ಇವು ಭವಿಷ್ಯದ ಮಾರ್ಗಗಳಾಗಿವೆ ಎಂದರು. ಇದನ್ನೂ ಓದಿ: ವಿಜ್ಞಾನ ವಲಯದಲ್ಲಿ ನಾಳೆ ಮಹಿಳೆ, ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆ – ಭಾರತ ಮೂಲದ ಅಮೆರಿಕನ್ ಬಾಲ ಸಂಶೋಧಕಿ ಭಾಗಿ

ಯಾವುದೇ ಅನ್ವೇಷಣೆಯಾಗಲಿ ಸೋಲು ಹಾಗೂ ವೈಫಲ್ಯಗಳ ಬಗ್ಗೆ ಗಮನ ನೀಡಬಾರದು. ಸೋಲಿನಿಂದ ನಿಮಗೆ ಅನುಭವ ದೊರಕುತ್ತದೆ ಮತ್ತು ಅದೇ ಮುಂದೆ ಯಶಸ್ವಿಗೆ ಕಾರಣವಾಗುತ್ತದೆ. ಸಣ್ಣದೇ ಆಗಲಿ, ದೊಡ್ಡದೇ ಆಗಲಿ ಬದಲಾವಣೆಗೆ ಕಾರಣರಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಂವಾದಕ್ಕೂ ಮುನ್ನ ಎಲ್ಲರನ್ನೂ ವೆಬಿನಾರ್‌ಗೆ ಸ್ವಾಗತಿಸಿದ ಚೆನ್ನೈನ ಅಮೆರಿಕ ಕಾನ್ಸಲೇಟ್ ಕಚೇರಿಯ ಕಾನ್ಸಲ್ ಜನರಲ್ ಜ್ಯುಡಿತ್ ರೆವಿನ್, ಭಾರತೀಯ ಮೂಲದ ೪.೮ ದಶಲಕ್ಷ ಜನರು ಪ್ರಸ್ತುತ ಅಮೆರಿಕದಲ್ಲಿ ನೆಲೆಸಿದ್ದು, ವಿಜ್ಞಾನ, ಮನರಂಜನೆ, ಬಾಹ್ಯಾಕಾಶ, ಕಲೆ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ. ೧೭೯೦ರಲ್ಲಿ ಚೆನ್ನೈನಿಂದ ಭಾರತೀಯ ವ್ಯಕ್ತಿಯೊಬ್ಬ ಬ್ರಿಟಿಷ್ ಹಡಗಿನ ಮೂಲಕ ಅಮೆರಿಕದ ನೆಲಕ್ಕೆ ಕಾಲಿಟ್ಟಿದ್ದು, ಈ ಸಂಬಂಧಕ್ಕೆ ಮುನ್ನುಡಿ ಬರೆಯಿತು ಎಂದರು. ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಕರ್ನಾಟಕ ಮೂಲದ ಸರ್ಜನ್ ಜನರಲ್ ವಿವೇಕ ಮೂರ್ತಿ ಅವರ ಕೊಡುಗೆಯನ್ನು ಸಹ ಈ ಸಂದರ್ಭದಲ್ಲಿ ಸ್ಮರಿಸಿದರು.

೨ ಲಕ್ಷ ಭಾರತೀಯ ವಿದ್ಯಾರ್ಥಿಗಳು ಪ್ರಸ್ತುತ ಅಮೆರಿಕದಲ್ಲಿ ಕಲಿಯುತ್ತಿದ್ದಾರೆ. ಅವರಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜನಿಯರಿಂಗ್ ಮತ್ತು ಗಣಿತ (ಸ್ಟೆಮ್) ಕ್ಷೇತ್ರಗಳನ್ನು ಆಯ್ದುಕೊಂಡವರೇ ಹೆಚ್ಚು. ಈ ವಿದ್ಯಾಥಿಗಳು ತಮ್ಮ ವಿಶಿಷ್ಟ ಸಂಶೋಧನೆ ಹಾಗೂ ಅನ್ವೇಷಣೆಗಳ ಮೂಲಕ ಅಮೆರಿಕದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಕಾರಣರಾಗಿದ್ದಾರೆ ಎಂದೂ ಜ್ಯುಡಿತ್ ರೆವಿನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಚೆನ್ನೈ ದೂತಾವಾಸದ ಸಾರ್ವಜನಿಕ ವ್ಯವಹಾರಗಳ ಅಧಿಕಾರಿ ಆನ್ ಲೀ ಶೇಷಾದ್ರಿ ವಂದನಾರ್ಪಣೆ ಮಾಡಿದರು.

ಅಮೆರಿಕದ ಯಶಸ್ಸಿನಲ್ಲಿ ಭಾರತೀಯ ಅಮೆರಿನ್ನರ ಕೊಡುಗೆ ಮಹತ್ತರವಾಗಿದ್ದು, ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಡಯಸ್ಪೊರಾ ಡಿಪ್ಲೊಮಸಿ ಸರಣಿಯ ಮೂಲಕ ವಿಜ್ಞಾನ, ತಂತ್ರಜ್ಞಾನ, ಕಲೆ, ರಾಜಕೀಯ, ವ್ಯವಹಾರ, ಬಾಹ್ಯಾಕಾಶ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕೊಡುಗೆ ನೀಡುತ್ತಿರುವ ಭಾರತೀಯ ಮೂಲದ ಅಮೆರಿಕ ಸಾಧಕರ ಜೊತೆ ಮಾತುಕತೆ, ಸಂದರ್ಶನ ಇತ್ಯಾದಿಗಳನ್ನು ಕಾಲಕಾಲಕ್ಕೆ ಏರ್ಪಡಿಸಲಿದೆ. ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಪ್ರಜಾಪ್ರಭುತ್ವದ ಹಬ್ಬ ಮಾಡಿ: ಮೋದಿ

ಭಾರತ ಮೂಲದ ಗೀತಾಂಜಲಿ ರಾವ್ ಕೊಲರೆಡೊದಲ್ಲಿ ಯುವ ವಿಜ್ಞಾನಿಯಾಗಿದ್ದು, ಬರಹಗಾತಿ, ಭಾಷಣಗಾರ್ತಿ ಹಾಗೂ ಜಗತ್ತಿನಾದ್ಯಂತ ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜನೀಯರಿಂಗ್, ಮ್ಯಾಥ್ಸ್) ಶಿಕ್ಷಣ ವ್ಯವಸ್ಥೆಯ ಪ್ರತಿಪಾದಕಿಯಾಗಿದ್ದಾರೆ. ಅಲ್ಲದೇ ನೀರಿನಲ್ಲಿ ಸೀಸದ ಮಾಲಿನ್ಯ ಕಂಡುಹಿಡಿಯಲು ಅಭಿವೃದ್ಧಿಪಡಿಸಿದ ಸಾಧನಕ್ಕಾಗಿ ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆಯ ಪ್ರತಿಷ್ಠಿತ ಯುವ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೃತಕ ಬುದ್ಧಿಮತ್ತೆ ಮತ್ತು ಭಾಷಾ ಸಂಸ್ಕರಣೆಯ ನೆರವಿನಿಂದ ಸೈಬರ್ ಪೀಡನೆಯನ್ನು ತಡೆಯಲು ಅವರು ಸಿದ್ಧಪಡಿಸಿದ ಹೊಸ ಮಾದರಿಯ ಸೇವೆ ಸಹ ಪ್ರಶಂಸೆಗೆ ಪಾತ್ರವಾಗಿದೆ. ಗೀತಾಂಜಲಿ ಬರೆದಿರುವ ಯಂಗ್ ಇನೊವೇಟರ್ಸ್ ಗೈಡ್ ಟು ಸ್ಟೆಮ್ ಪುಸ್ತಕ ಸಂಶೋಧನಾ ಪ್ರಕ್ರಿಯೆಯಲ್ಲಿ ವಿದ್ಯಾಥಿಗಳು ಮತ್ತು ಶಿಕ್ಷಕರಿಗೆ ನೆರವಾಗುತ್ತಿದೆ.

ಗರ್ವಿತಾ ಗುಲಾಟಿ ವೈ ವೇಸ್ಟ್ ಎಂಬ ಸರ್ಕಾರೇತರ ಸಂಸ್ಥೆಯ ಸಂಸ್ಥಾಪಕಿಯಾಗಿದ್ದು ವಾಟರ್ ಗರ್ಲ್ ಆಫ್ ಇಂಡಿಯಾ ಎಂಬ ಖ್ಯಾತಿ ಗಳಿಸಿದ್ದಾರೆ. ಗರ್ವಿತಾ ಮತ್ತು ಅವರ ಜಲ ಉದ್ಯಮಿಗಳ ತಂಡ ಗ್ಲಾಸ್ ಹಾಫ್ ಫುಲ್ ಎಂಬ ಅಭಿಯಾನದ ಮೂಲಕ ಭಾರತದ ಹೋಟೆಲ್‌ಗಳಲ್ಲಿ ವ್ಯರ್ಥವಾಗುತ್ತಿದ್ದ ಸುಮಾರು ೧೦ ದಶಲಕ್ಷ ಲೀಟರ್ ನೀರನ್ನು ಉಳಿಸಿದ್ದಾರೆ.

TAGGED:chennaiGarvita GulatiGeetanjali RaoInternational Day for Women and Girls in Scienceಗರ್ವಿತಾ ಗುಲಾಟಿಗೀತಾಂಜಲಿ ರಾವ್ಚೆನ್ನೈವಿಜ್ಞಾನ ವಲಯದಲ್ಲಿನ ಮಹಿಳೆ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆ
Share This Article
Facebook Whatsapp Whatsapp Telegram

Cinema news

sudeep 1 1
ಇಷ್ಟು ದಿನ ತಾಳ್ಮೆಯಿಂದ ಇದ್ದಿದ್ದು ಸಾಕು – ಕೆಣಕಿದ್ರೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡಿ; ಗುಡುಗಿದ ಕಿಚ್ಚ
Cinema Dharwad Latest Sandalwood Top Stories
Nora Fatehi
ಸಾವು ರಪ್ಪನೆ ಕಣ್ಮುಂದೆ ಬಂದು ಹೋಯ್ತು – ಕಾರು ಅಪಘಾತದ ಬಳಿಕ ನೋರಾ ಫತೇಹಿ ರಿಯಾಕ್ಷನ್‌
Bollywood Cinema Latest Main Post
nora fatehi gets into an accident suffered a concussion after a drunk driver rammed into her car
ನೋರಾ ಫತೇಹಿ ಕಾರಿಗೆ ಡಿಕ್ಕಿ – ಅಪಾಯದಿಂದ ನಟಿ ಪಾರು
Cinema Latest South cinema
Rashmika Mandanna and Vijay Deverakondas Wedding AI Photos
ಶ್ರೀವಲ್ಲಿ ಮದ್ವೇಲಿ ಪ್ರಭಾಸ್, ಪ್ರಿನ್ಸ್; ವೈರಲ್ ಹಿಂದಿನ ಅಸಲಿಯತ್ತೇನು?
Cinema Latest South cinema Top Stories

You Might Also Like

TRAIN 1
Latest

ಡಿ.26 ರಿಂದ ರೈಲು ಪ್ರಯಾಣ ದರ ಏರಿಕೆ; ಎಸಿ – ನಾನ್‌ ಎಸಿಗೆ ಎಷ್ಟು ಏರಿಕೆ?

Public TV
By Public TV
23 minutes ago
Mallikarjun Kharge 1
Districts

ರಾಜ್ಯದಲ್ಲಿ ನಾಯಕತ್ವ ಗೊಂದಲ ಹೈಕಮಾಂಡ್‌ ಸೃಷ್ಟಿಸಿಲ್ಲ, ಅವ್ರೇ ಮಾಡಿಕೊಂಡಿದ್ದಾರೆ: ಖರ್ಗೆ ಗರಂ

Public TV
By Public TV
52 minutes ago
Gruhalakshmi Scheme 1
Bengaluru City

ರಾಜ್ಯದ ಮಹಿಳೆಯರಿಗೆ ಗುಡ್‌ನ್ಯೂಸ್‌ – ನಾಳೆಯಿಂದಲೇ ಬ್ಯಾಂಕ್ ಖಾತೆಗೆ ʻಗೃಹಲಕ್ಷ್ಮಿʼ ಹಣ

Public TV
By Public TV
2 hours ago
RANJAN
Bengaluru City

ಮಕ್ಕಳ ಧ್ವನಿ, ಆಟವಾಡ್ತಿರೋದನ್ನ ಕಂಡ್ರೆ ನನಗೆ ಆಗಲ್ಲ – ಪೊಲೀಸರ ಮುಂದೆ ಸೈಕೋ ರಂಜನ್ ಹೇಳಿಕೆ

Public TV
By Public TV
2 hours ago
South Africa Shooting
Latest

ದಕ್ಷಿಣ ಆಫ್ರಿಕಾದಲ್ಲಿ ಸಾಮೂಹಿಕ ಗುಂಡಿನ ದಾಳಿ – 10 ಮಂದಿ ಬಲಿ

Public TV
By Public TV
2 hours ago
Hebbal
Bengaluru City

ವಾಹನ ಸವಾರರಿಗೆ ಗುಡ್‌ನ್ಯೂಸ್‌ – ಹೆಬ್ಬಾಳ ಮೇಲ್ಸೆತುವೆ ಹೊಸ ಲೂಪ್ ರ‍್ಯಾಂಪ್‌ ಓಪನ್

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?