ಮರ್ಯಾದಾ ಹತ್ಯೆ – ಅನ್ಯ ಜಾತಿ ಹುಡುಗನ ಪ್ರೀತಿಸಿದ್ದಕ್ಕೆ ಮಗಳನ್ನೇ ಸುಟ್ಟು ಕೊಂದ ಕುಟುಂಬಸ್ಥರು

Public TV
1 Min Read
teenage couple love marrige

ಲಕ್ನೋ: ಅನ್ಯ ಜಾತಿ ಹುಡುಗನನ್ನು ಪ್ರೀತಿ ಮಾಡಿದ್ದ, ಬ್ರಾಹ್ಮಣ ಜಾತಿಯ ಹುಡುಗಿಯನ್ನು ಕುಟುಂಬಸ್ಥರೇ ಬೆಂಕಿ ಹಚ್ಚಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.

ನಡೆದಿದ್ದೇನು?: ಅನ್ಯ ಜಾತಿ ಯುವಕನನ್ನು 20 ವರ್ಷದ ಯುವತಿ ಪ್ರೀತಿಸುತ್ತಿದ್ದಳು. ಬ್ರಾಹ್ಮಣ ಜಾತಿಗೆ ಸೇರಿದ ಯುವತಿ, ಜಾಟ್ ಸಮುದಾಯಕ್ಕೆ ಸೇರಿದ ಸುಗಮ್‌ನೊಂದಿಗೆ  ಓಡಿ ಹೋಗಿದ್ದಳು. ಇದರಿಂದಾಗಿ ಯುವತಿಯನ್ನು ಅಪಹರಿಸಲಾಗಿದೆ ಎಂದು ಆರೋಪಿಸಿ ಯುವತಿ ಕುಟುಂಬದ ಸದಸ್ಯರು ಎಫ್‌ಐಆರ್ ಕೂಡಾ ದಾಖಲಿಸಿದ್ದರು. ನಂತರ ಈ ದಂಪತಿ ಗುರುವಾರ ಮನೆಗೆ ವಾಪಸ್ಸಾಗಿದ್ದಾರೆ. ಮಾರನೇ ದಿನ ಯುವತಿ ಮೃತದೇಹ ಹೊಲದಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಬಿಜೆಪಿ ಸುಳ್ಳುಗಾರರ ಪಕ್ಷ: ಅಖಿಲೇಶ್ ಯಾದವ್

police web

ಯುವಕನ ಮೃತದೇಹ ಶಾಮ್ಲಿ ಜಿಲ್ಲೆಯ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ತನ್ನ ಪ್ರೇಯಸಿಯ ಹತ್ಯೆಯಾಗಿರಬಹುದೆಂಬ ಶಂಕೆಯಿಂದ ಆತ ಆತ್ಮಹತ್ಯೆಗೆ ಶರಣಾಗಿದ್ದ. ಬೊರಾಕಾಳ ಠಾಣೆ ವ್ಯಾಪ್ತಿಯ ಸಿಸೌಲಿ ಹಳ್ಳಿಯ ನೀರು ತುಂಬಿದ ಹೊಲದಲ್ಲಿ ಅರ್ಧ ಬೆಂದ ಸ್ಥಿತಿಯಲ್ಲಿ ಯುವತಿಯ ಮೃತ ದೇಹ ಪತ್ತೆಯಾದ ನಂತರ ಮಾರ್ಯಾದ ಹತ್ಯೆ ಎಂದು ಶಂಕಿಸಲಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸ್ ನಿತೀನ್ ಕುಮಾರ್ ಹೇಳಿದ್ದಾರೆ.

POLICE JEEP

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದು ಕೊಲೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೊಲೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪದ ಮೇರೆಗೆ ಯುವತಿ ತಾಯಿ ಮತ್ತು ಚಿಕ್ಕಪ್ಪನ್ನು ಬಂಧಿಸಲಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *