ಬೆಳಗಾವಿ: ಕೆರೆಗೆ ಹಾರಿ ಮಕ್ಕಳ ಜೊತೆ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಹಿಂಡಲಗಾ ಗಣಪತಿ ದೇಗುಲ ಬಳಿ ನಡೆದಿದೆ.
ಹಿಂಡಲಗಾ ಗಣಪತಿ ದೇಗುಲ ಬಳಿಯ ಕೆರೆಯಲ್ಲಿ ನಿನ್ನೆ ತಾಯಿ, ಮಗನ ಶವಪತ್ತೆಯಾಗಿದ್ದು, ಮತ್ತೋರ್ವ ಮಗನಿಗಾಗಿ ಕೆರೆಯಲ್ಲಿ ಶೋಧಕಾರ್ಯ ಮುಂದುವರೆದಿದೆ. ಆದರೆ ಇಂದು ಇನ್ನೊಬ್ಬ ಮಗನ ಶವವೂ ಪತ್ತೆಯಾಗಿದೆ. ಇದನ್ನೂ ಓದಿ: ಆಸ್ತಿ ವಿವಾದ – ಗರ್ಭಿಣಿ ಸೇರಿದಂತೆ ಮೂವರನ್ನು ಬೆಂಕಿಗೆ ಹಾಕಿದ ದುರುಳರು
ಏನಿದು ಘಟನೆ?
ನಿನ್ನೆ ಬೆಳಗಾವಿ ಹೊರವಲಯ ಹಿಂಡಲಗಾ ಕೆರೆಯ ಶೋಧಕಾರ್ಯದಲ್ಲಿ ನಿನ್ನೆ ಕೃಷಾ(36), ಭಾವೀರ್(4) ಶವ ಪತ್ತೆಯಾಗಿತ್ತು. ಆದರೆ ನಿನ್ನೆ ಇನ್ನೊಬ್ಬ ಮಗ ವಿರೇನ್ ಪತ್ತೆಯಾಗಿಲ್ಲ. ಆದರೆ ಇಂದು ನಾಪತ್ತೆಯಾಗಿದ್ದ ಮತ್ತೋರ್ವ ಮಗು ವೀರೇನ್(7) ಮೃತದೇಹ ಶಾಲಾ ಸಮವಸ್ತ್ರದಲ್ಲೇ ಪತ್ತೆಯಾಗಿದೆ. ವೀರೇನ್ ಮೃತದೇಹ ಹೊರತಗೆದ ಎಸ್‍ಡಿಆರ್‍ಎಫ್ ಸಿಬ್ಬಂದಿ, ಮಗುವಿನ ಮೃತದೇಹವನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಮಗುವಿನ ಮೃತದೇಹವನ್ನು ಶವಾಗಾರದಲ್ಲಿ ನೋಡಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಹಾರಾಷ್ಟ್ರದ ಮಿರಜ್‍ನಿಂದ ಬೆಳಗಾವಿಗೆ ವಿಷಯ ತಿಳಿದ ಮೃತ ಮಹಿಳೆಯ ಕುಟುಂಬಸ್ಥರು ಆಗಮಿಸಿದ್ದು, ಬೆಳಗಾವಿ ಬಿಮ್ಸ್ ಶವಾಗಾರ ಬಳಿ ಬಂದು ಕಣ್ಣೀರು ಸುರಿಸುತ್ತೀದ್ದಾರೆ. ಯಾರೋ ಬೇಕೆಂದು ಇಬ್ಬರು ಮಕ್ಕಳ ಜೊತೆ ತಾಯಿಯನ್ನು ಕೊಂದು ಕೆರೆಗೆ ಎಸೆದಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ಈ ಸಾವಿಗೆ ಕೃಷಾ ಪತಿ ಮನೀಷ್ ಕೇಶವಾಣಿ ಹಾಗೂ ಕುಟುಂಬಸ್ಥರೇ ಕಾರಣ. ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಕೃಷಾ ತಾಯಿ ಮತ್ತು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಹಿಜಬ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ – ಇಬ್ಬರು ಪೊಲೀಸರು ಅಮಾನತು
ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆ.