ನವದೆಹಲಿ: ಸಿಂಗಾಪುರದಲ್ಲಿ ನಡೆಯಲಿರುವ ಏರ್ ಶೋ-೨೦೨೨ರಲ್ಲಿ ಮೇಡ್ ಇನ್ ಇಂಡಿಯಾ ತೇಜಸ್ ಫೈಟರ್ ಜೆಟ್ ಪ್ರದರ್ಶನಗೊಳ್ಳಲಿದೆ.
ಫೆಬ್ರವರಿ ೧೫ ರಿಂದ ೧೮ರ ವರೆಗೆ ನಡೆಯಲಿದರುವ ಏರ್ ಶೋನಲ್ಲಿ ಭಾಗವಹಿಸಲು ೪೪ ಭಾರತೀಯ ವಾಯುಪಡೆ ಸಿಬ್ಬಂದಿ ಈಗಾಗಲೇ ಸಿಂಗಾಪುರದ ಚಾಂಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ.
ಸಿಂಗಾಪುರದಲ್ಲಿ ಪ್ರತೀ ೨ ವರ್ಷಗಳಿಗೊಮ್ಮೆ ಏರ್ ಶೋ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಜಾಗತಿಕವಾಗಿ ವಾಯುಯಾನದ ಉತ್ಪನ್ನಗಳನ್ನು ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಈ ಬಾರಿ ಪ್ರಪಂಚದ ವಿವಿಧೆಡೆ ತಯಾರಾದ ವಾಯುಯಾನ ಉತ್ಪನ್ನಗಳೊಂದಿಗೆ ಮೇಡ್ ಇನ್ ಇಂಡಿಯಾ ತೇಜಸ್ ಕೂಡಾ ಪ್ರದರ್ಶನವಾಗಲಿದೆ. ಇದನ್ನೂ ಓದಿ: ಆಕಾಶದಲ್ಲಿ ಹಾರಾಡಿತು ಪೈಲಟ್ ರಹಿತ ಹೆಲಿಕಾಪ್ಟರ್
ತೇಜಸ್ ಫೈಟರ್ ಜೆಟ್ ಅನ್ನು ಹಿಂದುಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಹೆಚ್‌ಎಎಲ್) ಭಾರತೀಯ ವಾಯುಪಡೆ ಹಾಗೂ ನೌಕಾಪಡೆಗಾಗಿ ಅಭಿವೃದ್ಧಿ ಪಡಿಸಲಾಗಿದೆ. ಇದನ್ನೂ ಓದಿ: IPL ಹರಾಜಿನಲ್ಲಿ ಅನ್‍ಸೋಲ್ಡ್ ಆದ ಸ್ಟಾರ್ ಆಟಗಾರರು
ಭಾರತ ಈ ಹಿಂದೆ ಮಲೇಷ್ಯಾದ ಐಎಲ್‌ಎಮ್‌ಎ-೨೦೧೯ ಹಾಗೂ ದುಬೈ ಏರ್ ಶೋ-೨೦೨೧ರಲ್ಲಿ ಭಾಗವಹಿಸಿ ಸ್ವದೇಶೀ ವಿಮಾನಗಳನ್ನು ಪ್ರದರ್ಶಿಸಿದ್ದವು.