ಬೈಕ್. ಸರಗಳ್ಳತನ ಮಾಡುತ್ತಿದ್ದ 8 ಜನ ಆರೋಪಿಗಳು ಅರೆಸ್ಟ್

Public TV
1 Min Read
theft bagalagunte

ಬೆಂಗಳೂರು: ರಾಜಧಾನಿಯಲ್ಲಿ ಬೈಕ್ ಹಾಗೂ ಸರಗಳ್ಳತನ ಮಾಡುತ್ತಿದ್ದ 8 ಜನ ಆರೋಪಿಗಳನ್ನು ನಗರದ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ದೊಂಬರಹಳ್ಳಿ ಮಂಜಕಳ್ ಮಂಜ, ದೀಪಕ್ ಪಾಕ, ಮನು, ದಯನಂದ್, ಮುನಿಸ್ವಾಮಿ, ಸತೀಶ್, ಕಳ್ ಮಂಜನ ಜೊತೆ ಸಹಕರಿಸಿದ್ದ ಅವನ ತಾಯಿ ಪ್ರೇಮಾ, ತಂಗಿ ಅನ್ನಪೂರ್ಣ ಬಂಧಿತ ಆರೋಪಿಗಳು.
ಬಂಧಿತರಿಂದ 44 ಲಕ್ಷ ಬೆಲೆಬಾಳುವ 23 ಬೈಕ್, 2 ಕಾರು ಹಾಗೂ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಸಣ್ಣ ಸುಳಿವು ಸಿಗದಂತೆ ಹತ್ಯೆ ಮಾಡಿದ್ದ ಹಂತಕ ಕೊನೆಗೂ ಖಾಕಿ ಬಲೆಗೆ!

arrested new

ಈ ಹಿಂದೆ ಬಾಡಿಗೆ ಮನೆ ನೋಡುವ ನೆಪದಲ್ಲಿ ಲಾಂಗ್ ತೋರಿಸಿ ಬೆದರಿಸಿ ಬಾಗಲಗುಂಟೆಯಲ್ಲಿ ಶಿಕ್ಷಕಿಯ ಸರಗಳವು ಮಾಡಿದ್ದರು. ಮಾದನಾಯಕನಹಳ್ಳಿಯಲ್ಲಿ ಬುಲೆಟ್ ಬೈಕ್‍ನಲ್ಲಿ ಮಹಿಳೆಯನ್ನ ಅಡ್ಡಗಟ್ಟಿ ಸರಗಳವು ಮಾಡಿದ್ದರು. ಕಳ್ಳತನ ಮಾಡುವ ವೇಳೆ ಏನೂ ಸಿಕ್ಕಿಲ್ಲ ಅಂದರೆ ಕುರಿ-ಮೇಕೆ, ಸಾಕಿದ್ದ ಹಂದಿಯನ್ನು ಕೂಡಾ ಬಿಡದೇ ಕದಿಯುತ್ತಿದ್ದರು. ಬಳಿಕ ಗ್ಯಾಂಗ್ ಎಲ್ಲರೂ ಸೇರಿ ಭರ್ಜರಿ ಬಾಡೂಟ ಮಾಡಿ ಪಾರ್ಟಿ ಮಾಡುತ್ತಿದ್ದರು. ಕದ್ದ ಚಿನ್ನದ ಸರಗಳನ್ನು ಕಳ್ ಮಂಜನ ಜೊತೆ ಸಹಕರಿಸುತ್ತಿದ್ದ ಅವನ ತಾಯಿ ಹಾಗೂ ತಂಗಿಯ ಮುಖಾಂತರವಾಗಿ ಸೇಠುಗಳಿಗೆ ಮಾರುತ್ತಿದ್ದರು. ಇದನ್ನೂ ಓದಿ: ಕುಂದಾನಗರಿ ಬೆಳಗಾವಿಯಲ್ಲಿ ಮತ್ತೆ ಆ್ಯಕ್ಟಿವ್ ಆಯ್ತಾ ಇರಾನಿ ಗ್ಯಾಂಗ್?

Police Jeep

ಪೊಲೀಸರ ತಂಡವೊಂದು ಶಿಕ್ಷಕಿಯ ಸರ ಕದ್ದ ಬುಲೆಟ್ ಬೈಕ್ ಹಿಂದೆ ಬಿದ್ದಿದ್ದು ತಂಡಕ್ಕೆ ಇದು ಭರ್ಜರಿ ಪತ್ತೆ ಕಾರ್ಯವಾಗಿತ್ತು. ಆರೋಪಿಗಳು ಬಾಗಲಗುಂಟೆ, ಪೀಣ್ಯಾ, ನೆಲಮಂಗಲ, ಮಾದನಾಯಕನಹಳ್ಳಿ, ಕಾಮಾಕ್ಷಿ ಪಾಳ್ಯ, ವರ್ತೂರು, ನಂದಿನಿಲೇಔಟ್, ರಾಜಗೋಪಾಲ ನಗರ, ಹೆಣ್ಣೂರು, ಸೋಲದೇವನಹಳ್ಳಿ ಸೇರಿದಂತೆ 30 ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯಗಳಲ್ಲಿ ಭಾಗಿಯಾಗಿದ್ದರು.

ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *